ವಿದ್ಯೆಯೇ ಆತ್ಮಜ್ಞಾನ !
ಆಧ್ಯಾತ್ಮಿಕ ಸಾಮರ್ಥ್ಯವಿಲ್ಲದವರಿಗೆ ಸಂತರ ‘ಸಂತತ್ವ’ವನ್ನು ಗುರುತಿಸಲು ಸಾಧ್ಯವಿರುವುದಿಲ್ಲ, ಅವರು ಸಂತರನ್ನು ‘ಅವರು ಸಂತರಲ್ಲ’ ಎಂದು ಹೇಳುವುದು ಎಂದರೆ, ವೈದ್ಯಕೀಯ ಶಿಕ್ಷಣ ಇಲ್ಲದವರು ಒಬ್ಬ ವೈದ್ಯರನ್ನು ‘ಅವರು ವೈದ್ಯರಲ್ಲ’, ಎಂದು ಹೇಳುವ ಹಾಗೆ ಹಾಸ್ಯಾಸ್ಪದವಿದೆ.
ಆಧ್ಯಾತ್ಮಿಕ ಸಾಮರ್ಥ್ಯವಿಲ್ಲದವರಿಗೆ ಸಂತರ ‘ಸಂತತ್ವ’ವನ್ನು ಗುರುತಿಸಲು ಸಾಧ್ಯವಿರುವುದಿಲ್ಲ, ಅವರು ಸಂತರನ್ನು ‘ಅವರು ಸಂತರಲ್ಲ’ ಎಂದು ಹೇಳುವುದು ಎಂದರೆ, ವೈದ್ಯಕೀಯ ಶಿಕ್ಷಣ ಇಲ್ಲದವರು ಒಬ್ಬ ವೈದ್ಯರನ್ನು ‘ಅವರು ವೈದ್ಯರಲ್ಲ’, ಎಂದು ಹೇಳುವ ಹಾಗೆ ಹಾಸ್ಯಾಸ್ಪದವಿದೆ.
ಹೆಚ್ಚು ಆಧ್ಯಾತ್ಮಿಕ ಮಟ್ಟದವರು ಚಮತ್ಕಾರಗಳನ್ನು ಮಾಡಿದಾಗ ‘ಈಶ್ವರನು ಈ ಚಮತ್ಕಾರವನ್ನು ಮಾಡಿದನು’ ಎಂಬ ಅರಿವು ಇರುವುದರಿಂದ, ಈಶ್ವರನ ಬಗ್ಗೆ ಅವರ ಭಾವವು ಹೆಚ್ಚಾಗುತ್ತ ಹೋಗುತ್ತದೆ. ಅದರಿಂದ ಅವರ ಆಧ್ಯಾತ್ಮಿಕ ಮಟ್ಟವು ಹೆಚ್ಚಾಗುತ್ತ ಹೋಗುತ್ತದೆ.
ಮುಂಬರುವ ಆಪತ್ಕಾಲದಲ್ಲಿ ಜನರು ತುಂಬಾ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗಲಿದೆ. ಅದರಲ್ಲಿ ಯಾರು ಸಾಧನೆಯನ್ನು ಮಾಡುವುದಿಲ್ಲವೋ, ಅವರು ಮಾನಸಿಕವಾಗಿ ಕುಗ್ಗಿ ಹೋಗುವರು.
ಸಾಧನೆಯಿಂದ ದೇವರು ಬೇಕೆಂದು, ಅನಿಸಲಾರಂಭಿಸಿದರೆ ಪೃಥ್ವಿಯ ಮೇಲಿನ ಏನಾದರೂ ಬೇಕು ಎಂದು ಅನಿಸುವುದಿಲ್ಲ. ಇದರಿಂದ ಯಾರ ಬಗ್ಗೆಯೂ ಅಸೂಯೆ, ಮತ್ಸರ ಅಥವಾ ದ್ವೇಷವೆನಿಸುವುದಿಲ್ಲ, ಹಾಗೆಯೇ ಇತರರೊಂದಿಗೆ ವೈಮನಸ್ಸು, ಜಗಳ ಯಾವುದು ಆಗುವುದಿಲ್ಲ.
ವೃದ್ಧಾಪ್ಯದಲ್ಲಿ ವಿವಿಧ ಕಾಯಿಲೆಗಳಿಂದ ದುಃಖವನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಅವನಿಗೆ ‘ಸಾವು ಬೇಗ ಬರಬೇಕು’ ಎಂದೆನಿಸುತ್ತದೆ. ಆದ್ದರಿಂದ ವೃದ್ಧಾಪ್ಯವು ಒಂದು ರೀತಿಯಲ್ಲಿ ಮಾಯೆಯಿಂದ ನಮ್ಮನ್ನು ಮುಕ್ತಗೊಳಿಸುವುದಕ್ಕಾಗಿ ದೇವರು ನೀಡಿದ ಆಶೀರ್ವಾದವೇ ಆಗಿದೆ.
ಜೀವನದಲ್ಲಿ ಬಂದ ಸಂಕಷ್ಟಗಳು ದೂರವಾಗಬೇಕೆಂದು ದೇವರಲ್ಲಿ ಪ್ರಾರ್ಥನೆಯನ್ನು ಮಾಡುವುದರಿಂದ ಅದು ದೂರವಾಗಲು ಜಪವು ಖರ್ಚಾಗುತ್ತದೆ ಹಾಗೂ ಆದುದರಿಂದ ಈಶ್ವರಪ್ರಾಪ್ತಿಗಾಗಿ ಜಪ ಮಾಡಿಯೂ ಈಶ್ವರಪ್ರಾಪ್ತಿಯಾಗುವುದಿಲ್ಲ !
ರಾಮ ರಾಜ್ಯ ಕೇವಲ ಹಿಂದೂ ರಾಷ್ಟ್ರದಲ್ಲಿಯೇ ಇರುವುದು.
– ಪರಾತ್ಪರ ಗುರು ಡಾ. ಆಠವಲೆ
ಸನಾತನದ ಸಂತರು ಕೇವಲ ಈಶ್ವರಪ್ರಾಪ್ತಿಗಾಗಿ ಸಾಧನೆಯನ್ನು ಮಾಡುವಾಗ ಜಿಜ್ಞಾಸು ಹಾಗೂ ಸಾಧಕರಿಗೆ ‘ತನು, ಮನ, ಧನಗಳ ತ್ಯಾಗವನ್ನು ಹೇಗೆ ಮಾಡುವುದು ? ಪ್ರಾರಬ್ಧವನ್ನು ಸಹಿಸುವುದಕ್ಕಾಗಿ ಸಾಧನೆಯನ್ನು ಹೇಗೆ ಹೆಚ್ಚಿಸಬೇಕು ?’, ಇದನ್ನು ಕಲಿಸುತ್ತಾರೆ.
ಕಲಿಯುಗದಲ್ಲಿ ಮಾನವನ ಆಯುಷ್ಯ ಸೀಮಿತವಾಗಿದೆ. ಈ ಅಲ್ಪಾವಧಿಯಲ್ಲಿ ಮಾನವನ ಜೀವನದ ಮೂಲ ಧ್ಯೇಯವಾದ ‘ಈಶ್ವರಪ್ರಾಪ್ತಿ’ಯನ್ನು ಸಾಧಿಸಲು ಸಮಯವನ್ನು ಹೆಚ್ಚೆಚ್ಚು ಸದುಪಯೋಗಪಡಿಸಿಕೊಳ್ಳುವುದು ಅಗತ್ಯವಾಗಿದೆ.
ಸಂಶೋಧನೆಗಾಗಿ ಉಪಯೋಗಿಸುವ ಉಪಕರಣಗಳಿಗೆ ಹಿಂದೂ ಧರ್ಮದ ಶ್ರೇಷ್ಠತೆಯು ತಿಳಿಯುತ್ತದೆ ಆದರೆ ಬುದ್ಧಿ ಪ್ರಾಮಾಣ್ಯವಾದಿ ಹಾಗೂ ಸರ್ವಧರ್ಮ ಸಮಭಾವದವರಿಗೆ ಅದು ತಿಳಿಯುವುದಿಲ್ಲ ಇದನ್ನು ಗಮನದಲ್ಲಿಡಿ.