ಸಾಧನೆಯ ಕುರಿತು ಪರಾತ್ಪರ ಗುರು ಡಾಕ್ಟರ ಆಠವಲೆಯವರ ಮಾರ್ಗದರ್ಶನ !

(ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ

ದೇಶದ ಸ್ಥಿತಿಯನ್ನು ಸುಧಾರಿಸಲು ಈಗ ಕೇವಲ ಸಾಧಕರ ರಾಜ್ಯದ ಅವಶ್ಯಕತೆ ಇದೆ !

‘ಸರಕಾರಿ ನೌಕರರು ದೇಶ ಸೇವೆ ಮಾಡಲು ಇರುತ್ತಾರೆ. ಹಾಗಿದ್ದರೂ ಅವರಿಗೆ ಸಂಬಳ ಇದ್ದೇ ಇರುತ್ತದೆ. ಅವರಿಗೆ ಅವರ ಸಂಬಳ ಕಡಿಮೆಯಾಗಿದೆ ಎಂದು ಅನಿಸ ತೊಡಗಿದರೆ ತಕ್ಷಣವೇ ಆಂದೋಲನ ಮತ್ತು ಧರಣಿಗಳು ಪ್ರಾರಂಭವಾಗುತ್ತದೆ. ಕೆಲಸ ಮಾಡುವಾಗಲೂ ಅದರಲ್ಲಿ ಮೈಗಳ್ಳತನ ಮತ್ತು ಭ್ರಷ್ಟಾಚಾರ ಇರುತ್ತವೆ ಅದು ಬೇರೆನೇ ! ಆದುದರಿಂದ, ‘ಪ್ರಸ್ತುತ ಕಾಲದಲ್ಲಿ  ಯಾವುದೇ ಸರಕಾರಿ ನೌಕರನು ದೇಶಕ್ಕಾಗಿ ಸಂಬಳವಿಲ್ಲದೇ ಕೆಲಸವನ್ನು ಮಾಡುತ್ತಾನೆಯೇ ? ಎಂಬ ಪ್ರಶ್ನೆ ಹಾಸ್ಯಾಸ್ಪದವಾಗಿದೆ.

ತದ್ವಿರುದ್ಧ, ರಾಷ್ಟ್ರ ಮತ್ತು ಧರ್ಮಗಳಿಗಾಗಿ ಕಾರ್ಯ ಮಾಡುವ ಆಶ್ರಮಗಳಲ್ಲಿ ಯಾರೂ ಸಂಬಳ ಪಡೆಯುವುದಿಲ್ಲ. ‘ನಾನು ನನ್ನ ದೇಹ, ಮನಸ್ಸು ಮತ್ತು ಹಣವನ್ನು ಹೇಗೆ ಅರ್ಪಿಸಬಲ್ಲೆನು ?, ಎಂದು ಅವರು ಯೋಚಿಸುತ್ತಾರೆ. ಇದರಿಂದ ಅವರಿಗೆ ಲೌಕಿಕವಾಗಿ ಲಾಭವಾಗದಿದ್ದರೂ ಅವರು ಮಾಡುತ್ತಿರುವ ಸೇವೆಗಳಲ್ಲಿ ಯಾವುದೇ ಭ್ರಷ್ಟಾಚಾರ ಅಥವಾ ಮೈಗಳ್ಳತನ ಇರುವುದಿಲ್ಲ. ಬದಲಾಗಿ ‘ಗುರುಗಳ ಹಣವನ್ನು ಹೇಗೆ ಉಳಿಸಬಹುದು? ಮಾಡುತ್ತಿರುವ ಸೇವೆಯನ್ನು ಬೇಗನೆ ಮತ್ತು ಪರಿಪೂರ್ಣವಾಗಿ  ಹೇಗೆ ಮಾಡಬಹುದು? ಎಂಬ ವಿಚಾರ ಹೆಚ್ಚಿರುತ್ತದೆ. ಸಾಧಕರ ಈ ಗುಣವೈಶಿಷ್ಟ್ಯಗಳನ್ನು ನೋಡಿದರೆ, ‘ಅಧೋಗತಿಗೆ ತಲುಪಿದ ದೇಶವನ್ನು ಮೇಲೆ ತರಲು ಈಗ ದೇಶದಲ್ಲಿ ಸಾಧಕರ ರಾಜ್ಯವನ್ನು ತರುವುದು ಇದೇ ಏಕೈಕ ಪರ್ಯಾಯವಿದೆ !– ಪರಾತ್ಪರ ಗುರು ಡಾ. ಆಠವಲೆ (೮.೧.೨೦೨೨)

ಸಮಷ್ಟಿ ಸಾಧನೆ ಒಳ್ಳೆಯದಾಗಬೇಕಾದರೆ ವ್ಯಷ್ಟಿ ಸಾಧನೆಯ ಅಡಿಪಾಯ ಗಟ್ಟಿಯಾಗಿರಬೇಕು !

‘ಈಶ್ವರನೊಂದಿಗೆ ಏಕರೂಪವಾಗಲು ಸಮಷ್ಟಿ ಸಾಧನೆಯನ್ನು ಮಾಡಬೇಕಾಗುತ್ತದೆ; ಏಕೆಂದರೆ ಭಗವಂತನ ನಿಜವಾದ ಸ್ವರೂಪವು ವ್ಯಾಪಕವಾಗಿದೆ ಮತ್ತು ಅದು ಸಮಷ್ಟಿಯಲ್ಲಿದೆ. ಒಬ್ಬರು ಸ್ನಾತಕೋತ್ತರ ಶಿಕ್ಷಣವನ್ನು ಪಡೆಯಲು ಬಯಸಿದರೆ, ಅವರು ಪ್ರಾಥಮಿಕ, ಮಾಧ್ಯಮಿಕ, ಮಹಾವಿದ್ಯಾಲಯ, ಹೀಗೆ ಎಲ್ಲಾ ಹಂತದ ಶಿಕ್ಷಣವನ್ನು ಹಂತಹಂತವಾಗಿ ಪಡೆಯಬೇಕಾಗುತ್ತದೆ. ಅದೇ ರೀತಿ ಸಮಷ್ಟಿ ಸಾಧನೆ ಮಾಡಲು ವ್ಯಷ್ಟಿ ಸಾಧನೆಯ ಅಡಿಪಾಯವನ್ನು ಗಟ್ಟಿ ಮಾಡುವುದು ಆವಶ್ಯಕವಾಗಿದೆ.

ಸತ್-ಅಸತ್‌ಅನ್ನು ಅರಿತವನು ಮತ್ತು ಯಾರಲ್ಲಿ ವಿವೇಕ ಬುದ್ಧಿ ಇದೆಯೋ ಅಂತಹ ವಿವೇಕವುಳ್ಳ ಪುರುಷನಿಗೆ ‘ಪಂಡಿತ ಎಂದು ಕರೆಯುತ್ತಾರೆ.

– ಪರಾತ್ಪರ ಗುರು ಡಾ. ಆಠವಲೆ(೮.೧.೨೦೨೨)