ಸಾಧನೆಯ ಕುರಿತು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಪ್ರಸ್ತುತ ಕಾಲದಲ್ಲಿ ಕೆಲವು ಸುಖಲೋಲುಪ ಮನುಷ್ಯರೆಂದರೆ ಕೇವಲ ‘ದೇಹಧಾರಿ ಮನುಷ್ಯಪ್ರಾಣಿ’ !

ಪರಾತ್ಪರ ಗುರು ಡಾ. ಜಯಂತ ಆಠವಲೆ

‘ಹೆಚ್ಚಿನ ಜನರು ಜೀವನದಲ್ಲಿ ಪ್ರತಿಯೊಂದು ಕೃತಿಯನ್ನು ಮಾಡುವಾಗ ‘ನನಗೆ ಇದರಿಂದ ಇನ್ನೆಷ್ಟು ಸುಖ ಸಿಗಬಹುದು ?’, ಎಂಬುದಕ್ಕಾಗಿಯೇ ಶ್ರಮ ಪಡುತ್ತಿರುತ್ತಾರೆ. ದೇವರು ಇತರ ಪ್ರಾಣಿಗಳಿಗೆ ಹೋಲಿಸಿದರೆ, ಮನುಷ್ಯನಿಗೆ ಸಾಧನೆಯ ಮೂಲಕ ಜನನ-ಮರಣದ ಚಕ್ರದಿಂದ ಮುಕ್ತನಾಗಲು ಕ್ರಿಯಮಾಣವನ್ನು ಕೊಟ್ಟಿದ್ದಾನೆ; ಆದರೆ ಅದನ್ನು ಬಳಸದ ಕಾರಣ ಅವರ ಜೀವನವು ಹುಳು-ಹುಪ್ಪಟೆಗಳಂತೆ ತಮ್ಮ ಸುಖಕ್ಕಾಗಿಯೇ ಜೀವಿಸುವಂತಾಗಿದೆ. ಹಾಗಾಗಿ ಪ್ರಸ್ತುತ ಕಾಲದಲ್ಲಿ ಅಂತಹ ಮನುಷ್ಯನೆಂದರೆ ‘ದೇಹಧಾರಿ ಮನುಷ್ಯಪ್ರಾಣಿ’ ಆಗಿದ್ದಾರೆ.

– (ಪರಾತ್ಪರ ಗುರು) ಡಾ. ಆಠವಲೆ (೨೮-೧೨-೨೦೨೧)