ಸಂಸತ್ತಿನಿಂದ ಅಮಾನತ್ತುಗೊಂಡಿರುವ ವಿರೋಧಿ ಪಕ್ಷದ ಸಂಸದರ ಧರಣಿ

ಸಂಸತ್ತಿನಲ್ಲಿ ಗದ್ದಲ ಹಾಕಿದ ಕಾರಣ ಅಮಾನತ್ತುಗೊಂಡಿರುವ ವಿರೋಧ ಪಕ್ಷದ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿರುವ ಗಾಂಧಿ ಪ್ರತಿಮೆ ಎದುರಿಗೆ ‘ಧರಣಿ ಆಂದೋಲನ’ ಪ್ರಾರಂಭಿಸಿದರು.

ಔರಂಗಾಬಾದ (ಬಿಹಾರ)ನಲ್ಲಿ ೧೦೬ ಶಾಲೆಗಳಿಗೆ ‘ಶುಕ್ರವಾರ’ ರಜೆ !

ಜಿಲ್ಲೆಯ ೧೦೬ ಉರ್ದು ಶಾಲೆಗಳಿಗೆ ಭಾನುವಾರದ ಬದಲು ‘ಶುಕ್ರವಾರ’ ರಜೆ ಇರುತ್ತದೆ, ಎಂದು ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದರು; ಆದರೆ ಯಾರ ಆದೇಶದ ಮೇರೆಗೆ ಶುಕ್ರವಾರ ರಜೆ ನೀಡಲಾಗುತ್ತಿದೆ, ಈ ಬಗ್ಗೆ ಯಾರಿಗೂ ತಿಳಿದಿಲ್ಲ.

ಅರ್ಪಿತಾ ಮುಖರ್ಜಿಗೆ ಸೇರಿದ ಇನ್ನೊಂದು ಮನೆಯಲ್ಲಿ ೨೯ ಕೋಟಿ ರೂಪಾಯಿ ನಗದು ಪತ್ತೆ !

ಬಂಗಾಲದ ಶಿಕ್ಷಕ ನೇಮಕಾತಿ ಹಗರಣ ಪ್ರಕರಣದಲ್ಲಿ ಈಡಿಯಿಂದ ರಾಜ್ಯದ ಸಚಿವ ಪಾರ್ಥ ಚಟರ್ಜಿ ಇವರ ಹತ್ತಿರದವರೆನ್ನಲಾದ ಅರ್ಪಿತಾ ಮುಖರ್ಜಿ ಇವರ ಉತ್ತರ ೨೪ ಪರಗಣ ಜಿಲ್ಲೆಯ ಬೇಲಘರಿಯಾದ ಇನ್ನೊಂದು ಮನೆಯ ಮೇಲೆ ದಾಳಿ ನಡೆಸಿ ೨೯ ಕೋಟಿ ರೂಪಾಯಿ ನಗದು ಮತ್ತು ೫ ಕೆಜಿ ಬಂಗಾರ ವಶಪಡಿಸಿಕೊಳ್ಳಲಾಗಿದೆ.

ಆಝಮಗಡ್ ಜೈಲಿನಲ್ಲಿ ಬಂದಿಗಳ ಕೈಯಲ್ಲಿ ಮೊಬೈಲ್ ಮತ್ತು ಗಾಂಜಾ : ಕಾರಾಗೃಹ ಅಧೀಕ್ಷಕರು ಸೇರಿ ನಾಲ್ವರು ಅಮಾನತ್ತು

ಇಲ್ಲಿಯ ಸೆರೆಮನೆಯ ಬಂದಿತರಿಗೆ ಸಂಚಾರಿವಾಣಿ, ದೂರದರ್ಶನ, ಮತ್ತು ಗಾಂಜಾ ಪೂರೈಸಿರುವ ಪ್ರಕರಣದಲ್ಲಿ ಕಾರಾಗೃಹ ಅಧೀಕ್ಷಕರು ಸೇರಿ ನಾಲ್ವರನ್ನು ಅಮಾನತ್ತುಗೊಳಿಸಲಾಗಿದೆ. ರವೀಂದ್ರ ಸರೋಜ, ಶ್ರೀಧರ ಯಾದವ, ಅಜಯ ವರ್ಮಾ ಮತ್ತು ಆಶುತೋಷ ಸಿಂಹ ಎಂಬವರು ಅಮಾನತ್ತುಗೊಂಡವರು.

ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಜಾಕೀರ್ ಮತ್ತು ಶಫೀಕ್ ಎಂಬವರ ಬಂಧನ !

ಜುಲೈ ೨೬ ರಂದು ಭಾರತೀಯ ಜನತಾ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲೆಯ ಸಚಿವ ಪ್ರವೀಣ ನೆಟ್ಟಾರು ಇವರ ಬರ್ಬರ ಹತ್ಯೆ ಪ್ರಕರಣದಲ್ಲಿ ಜಾಕಿರ್ ಮತ್ತು ಶಫೀಕ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೂ ಜಿಹಾದಿ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೂ ಸಂಬಂಧ ಇದೆಯೇ, ಎಂಬ ತನಿಖೆ ಪ್ರಾರಂಭವಾಗಿದೆ.

ಭಯೋತ್ಪಾದಕ ದಾಳಿಯ ಸಂಚು ವಿಫಲಗೊಳಿಸಿದ ಅಸ್ಸಾಂ ಪೊಲೀಸರು : ಮದರಸಾ ಚಾಲಕನ ಬಂಧನ

ರಾಜ್ಯದಲ್ಲಿ ದೊಡ್ಡ ಭಯೋತ್ಪಾದಕ ದಾಳಿ ನಡೆಸಲು ಮದರಸಾದಲ್ಲಿ ರೂಪಿಸಲಾಗಿದ್ದ ಸಂಚನ್ನು ಅಸ್ಸಾಂ ಪೊಲೀಸರು ವಿಫಲಗೊಳಿಸಿದರು. ಮೊರಿಗಾಂವ್‌ನ ಮೊಯಿರಾಬಾರಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಜುಲೈ ೨೭ ರಂದು ಮದರಸಾ ನಡೆಸುತ್ತಿದ್ದ ಮುಫ್ತಿ ಮುಸ್ತಫಾ ಎಂಬ ಜಿಹಾದಿಯನ್ನು ಬಂಧಿಸಿದರು.

ದಕ್ಷಿಣ ಭಾರತದ ೩ ಮಠಗಳ ಮೇಲೆ ಉಗ್ರರ ದಾಳಿಯ ಸಂಚು ವಿಫಲ !

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನವಾದ ಆಗಸ್ಟ್ ೧೫ ರಂದು ದಕ್ಷಿಣ ಭಾರತದ ೩ ಪ್ರಮುಖ ಮಠಗಳ ಮೇಲೆ ಭಯೋತ್ಪಾದಕ ದಾಳಿಯನ್ನು ಮಾಡುವ ಸಂಚನ್ನು ತಮಿಳುನಾಡು ಮತ್ತು ಕರ್ನಾಟಕ ಪೊಲೀಸರು ವಿಫಲಗೊಳಿಸಿದ್ದಾರೆ.

ಹಂತಕರನ್ನು ಗಲ್ಲಿಗೇರಿಸಿ ! – ಹತ್ಯೆಗೀಡಾದ ಭಾಜಪದ ನಾಯಕ ಪ್ರವೀಣ ನೆಟ್ಟಾರು ಅವರ ತಾಯಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರತೀಯ ಜನತಾ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನೆಟ್ಟಾರು ಅವರನ್ನು ಜಿಹಾದಿಗಳು ಹತ್ಯೆ ಮಾಡಿದ ನಂತರ ಎಲ್ಲೆಡೆ ಆಕ್ರೋಶದ ಅಲೆ ಎದ್ದಿದೆ. ‘ಪ್ರವೀಣ ನಮಗೆ ಒಬ್ಬನೇ ಮಗ ಆಗಿದ್ದ. ನನ್ನ ಆರೋಗ್ಯ ಸರಿ ಇರುವುದಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಭಾಜಪ ಮುಖಂಡನ ಬರ್ಬರ ಹತ್ಯೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಭಾಜಪದ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನೆಟ್ಟಾರು ಅವರನ್ನು ಅಜ್ಞಾತ ದುಷ್ಕರ್ಮಿಗಳು ಕೊಡಲಿ ಮತ್ತು ಕತ್ತಿಯಿಂದ ಹಲ್ಲೆ ಮಾಡಿ ಕೊಂದಿದ್ದಾರೆ. ಈ ಹತ್ಯೆಯ ಹಿಂದೆ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರ ಕೈವಾಡವಿದೆ ಎನ್ನಲಾಗಿದೆ.