ದಕ್ಷಿಣ ಭಾರತದ ೩ ಮಠಗಳ ಮೇಲೆ ಉಗ್ರರ ದಾಳಿಯ ಸಂಚು ವಿಫಲ !

  • ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಕೈದಾದ ೪ ಜಿಹಾದಿಗಳ ಬಂಧನ !

  • ಸ್ವಾತಂತ್ರ್ಯ ದಿನದಂದು ದಾಳಿ ಮಾಡುವವರಿದ್ದರು !

ಬೆಂಗಳೂರು/ಚೆನ್ನೈ – ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನವಾದ ಆಗಸ್ಟ್ ೧೫ ರಂದು ದಕ್ಷಿಣ ಭಾರತದ ೩ ಪ್ರಮುಖ ಮಠಗಳ ಮೇಲೆ ಭಯೋತ್ಪಾದಕ ದಾಳಿಯನ್ನು ಮಾಡುವ ಸಂಚನ್ನು ತಮಿಳುನಾಡು ಮತ್ತು ಕರ್ನಾಟಕ ಪೊಲೀಸರು ವಿಫಲಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಎರಡೂ ರಾಜ್ಯಗಳ ಪೊಲೀಸರು ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಕೈದಾ ಜಿಹಾದಿ ಸಂಘಟನೆಗಳಿಗೆ ಸೇರಿದ ೪ ಜಿಹಾದಿ ಭಯೋತ್ಪಾದಕರನ್ನು ಬಂಧಿಸಿದ್ದಾರೆ.

ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಜುಲೈ ೨೬ರಂದು ತಮಿಳುನಾಡು ಪೊಲೀಸರು ಇಸ್ಲಾಮಿಕ್ ಸ್ಟೇಟ್ ಜೊತೆ ನಂಟು ಹೊಂದಿದ್ದ ಆಸಿಫ್ ಮುಸ್ತಿನ್ ಮತ್ತು ಯಾಸಿರ್ ನವಾಬ್ ನನ್ನು ಬಂಧಿಸಿದ್ದರು. ವಿಚಾರಣೆ ವೇಳೆ, ಆಸಿಫ್ ೩೦ ಜನರ ಜಾಲವನ್ನು ಸ್ಥಾಪಿಸಿದ್ದು, ಅವರು ಒಂದು ತಿಂಗಳ ಮುಂಚಿತವಾಗಿಯೇ ಮಠಗಳ ರೆಕ್ಕಿ (ಸ್ಥಳಾನ್ವೇಷಣೆ) ಕಾರ್ಯಗಳನ್ನು ನಡೆಸುತ್ತಿದ್ದರು ಮತ್ತು ದಾಳಿಗೆ ಬೇಕಾದ ಸ್ಫೋಟಕಗಳು ಮತ್ತು ಇತರ ವಸ್ತುಗಳನ್ನು ಸಂಗ್ರಹಿಸುತ್ತಿದ್ದರು. ಜುಲೈ ೨೪ ರಂದು ಬೆಂಗಳೂರು ಪೊಲೀಸರು ಅಖ್ತರ ಹುಸೇನ ಲಷ್ಕರ್ ಮತ್ತು ಮೊಹಮ್ಮದ್ ಜುಬಾ ನನ್ನು ಬಂಧಿಸಿದ್ದರು. ವಿಚಾರಣೆಯ ವೇಳೆ ‘ಅವರು ಹಿಂದೂಗಳ ಮೇಲೆ ಆತ್ಮಾಹುತಿ ದಾಳಿ ನಡೆಸಲು ಮುಂದಾಗಿದ್ದರು’ ಎಂಬುದು ತಿಳಿದುಬಂದಿದೆ. ಅವರು ಜಿಹಾದಿ ಭಯೋತ್ಪಾದಕ ಸಂಘಟನೆ ಅಲ್ ಕೈದಾಗೆ ಸೇರುವ ಪ್ರಯತ್ನವೂ ನಡೆಸಿದ್ದರು. ಅವರು ಸೌದಿ ಅರೇಬಿಯಾ ಮತ್ತು ಅಫ್ಘಾನಿಸ್ತಾನದಲ್ಲಿ ಜಾಲವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದರು. ಅವರು ‘ಟೆಲಿಗ್ರಾಂ ಆಪ್’ ಮೂಲಕ ಮುಸ್ಲಿಂ ಯುವಕರನ್ನು ಒಗ್ಗೂಡಿಸಲು ಯತ್ನಿಸುತ್ತಿದ್ದರು. ಅವರು ಅಫ್ಘಾನಿಸ್ತಾನಕ್ಕೂ ಹೋಗಲು ಪ್ರಯತ್ನಿಸುತ್ತಿದ್ದರು. ‘ಭಾರತದಲ್ಲಿ ಮುಸ್ಲಿಮರನ್ನು ಮೂರನೇ ದರ್ಜೆಯ ಪ್ರಜೆಗಳಾಗಿ ಪರಿಗಣಿಸಲಾಗುತ್ತಿದೆ’, ಎಂದು ಅವರು ಹೇಳುತ್ತಿದ್ದರು. ಇಬ್ಬರಿಂದ ‘ಸರ್ ತಾನ್ ಸೆ ಜುದಾ’ (ತಲೆಯನ್ನು ಮುಂಡದಿಂದ ಬೇರ್ಪಡಿಸುವುದು) ಅಭಿಯಾನಕ್ಕೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಲ್ವರೂ ತಮ್ಮ ಅಪರಾಧಗಳನ್ನು ಒಪ್ಪಿಕೊಂಡಿದ್ದಾರೆ.

(ಸೌಜನ್ಯ : TV9 Bharatvarsh)

ಕಂಚಿ, ಶೃಂಗೇರಿ, ರಾಮಚಂದ್ರಾಪುರ ಮಠಗಳು ಜಿಹಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದವು !

ಶೃಂಗೇರಿ, ಕಂಚಿ, ರಾಮಚಂದ್ರಾಪುರ ಮಠಗಳು ಜಿಹಾದಿ ಭಯೋತ್ಪಾದಕರ ಕೆಂಗಣ್ಣಿಗೆ ಗುರಿಯಾಗಿದ್ದವು. ಈ ಮೂರು ಮಠಗಳಿಗೆ ಹಿಂದೂ ಧರ್ಮದಲ್ಲಿ ಪ್ರಾಮುಖ್ಯತೆ ಇದೆ. ಶೃಂಗೇರಿ ಶಾರದಾ ಪೀಠವನ್ನು ಆದಿ ಶಂಕರಾಚಾರ್ಯರು ಚಿಕ್ಕಮಗಳೂರಿನಲ್ಲಿ ಜಿಲ್ಲಿಯಲ್ಲಿ ಸ್ಥಾಪಿಸಿದರು. ಕಂಚಿ ಕಾಮಕೋಟಿಯು ತಮಿಳುನಾಡಿನ ಕಾಂಚೀಪುರಂನಲ್ಲಿರುವ ಪ್ರಮುಖ ಮಠವಾಗಿದ್ದು, ರಾಮಚಂದ್ರಾಪುರ ಮಠವು ಶಿವಮೊಗ್ಗ ಜಿಲ್ಲೆಯಲ್ಲಿದೆ.

ಸಂಪಾದಕೀಯ ನಿಲುವು

‘ಭಯೋತ್ಪಾದನೆಗೆ ಧರ್ಮ ಇರುವುದಿಲ್ಲ’ ಎಂದು ಕೂಗಾಡುತ್ತಾ ಜಿಹಾದಿಗಳನ್ನು ಬೆಂಬಲಿಸುವವರು ಈಗೇನು ಹೇಳುತ್ತಾರೆ ?

ದೇಶದ ೭೫ನೇ ಸ್ವಾತಂತ್ರ್ಯ ದಿನಾಚರಣೆಯೂ ಜಿಹಾದಿ ಭಯೋತ್ಪಾದನೆಯ ಕರಿ ನೆರಳಿನಲ್ಲಿರುವುದು, ಭಾರತಕ್ಕೆ ನಾಚಿಕೆಗೇಡಿನ ಸಂಗತಿ ! ಈ ಸ್ಥಿತಿಯು ‘ಮೇರಾ ಭಾರತ ಮಹಾನ’ ಎಂದು ಹೇಳುವ ಎಲ್ಲ ಭಾರತೀಯರನ್ನು ನಾಚಿಕೆಯಿಂದ ತಲೆಬಾಗುವಂತೆ ಮಾಡಿದಂತೆ ಅಲ್ಲವೇ ?

ಹಿಂದೂಗಳನ್ನು ‘ಕೇಸರಿ ಭಯೋತ್ಪಾದಕರು’ ಎಂದು ಪಟ್ಟ ಕಟ್ಟುವ ಕಾಂಗ್ರೆಸ್ ಸೇರಿದಂತೆ ಕಪಟ ಜಾತ್ಯತೀತ ರಾಜಕೀಯ ಪಕ್ಷಗಳು ಈ ಮತಾಂಧರ ವಿರುದ್ಧ ಬಾಯಿ ತೆರೆಯುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಇಂತಹವರನ್ನು ಜೈಲಿನಲ್ಲಿಟ್ಟು ವರ್ಷಗಟ್ಟಲೆ ಸಾಕುವ ಬದಲು ಗಲ್ಲು ಶಿಕ್ಷೆಯಾಗಲು ಸರಕಾರ ಪ್ರಯತ್ನಿಸಬೇಕು !