ಹಂತಕರನ್ನು ಗಲ್ಲಿಗೇರಿಸಿ ! – ಹತ್ಯೆಗೀಡಾದ ಭಾಜಪದ ನಾಯಕ ಪ್ರವೀಣ ನೆಟ್ಟಾರು ಅವರ ತಾಯಿ

ಕೊಲೆಯ ಘಟನೆಯಿಂದ ನಾವು ಆಕ್ರೋಶಗೊಂಡಿದ್ದೇವೆ ! – ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರತೀಯ ಜನತಾ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನೆಟ್ಟಾರು ಅವರನ್ನು ಜಿಹಾದಿಗಳು ಹತ್ಯೆ ಮಾಡಿದ ನಂತರ ಎಲ್ಲೆಡೆ ಆಕ್ರೋಶದ ಅಲೆ ಎದ್ದಿದೆ. ‘ಪ್ರವೀಣ ನಮಗೆ ಒಬ್ಬನೇ ಮಗ ಆಗಿದ್ದ. ನನ್ನ ಆರೋಗ್ಯ ಸರಿ ಇರುವುದಿಲ್ಲ. ಅವರ ತಂದೆಗೂ ಹೃದ್ರೋಗವಿದೆ. ಅವನೊಬ್ಬನೇ ನಮಗೆ ಆಸರೆಯಾಗಿದ್ದ. ನಮ್ಮ ಅಪೇಕ್ಷೆಯನ್ನು ಈಡೇರಿಸುವವರು ಯಾರೂ ಇಲ್ಲದಂತಾಗಿದೆ’ ಎಂದು ಮೃತ ಪ್ರವೀಣರವರ ತಾಯಿ ಅಳಲು ತೋಡಿಕೊಂಡರು. ‘ಪ್ರವೀಣ ಹಂತಕರನ್ನು ಗಲ್ಲಿಗೇರಿಸಬೇಕು’, ಎಂದು ಒತ್ತಾಯಿಸಿದರು.

ಈ ಕೊಲೆ ಘಟನೆಯ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜುಲೈ ೨೮ಕ್ಕೆ ತಮ್ಮ ಸರಕಾರ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಆಯೋಜಿಸಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಬೊಮ್ಮಯಿಯವರು, “ಈ ಕೊಲೆಯಿಂದ ನಮ್ಮಲ್ಲಿ ಆಕ್ರೋಶ ನಿರ್ಮಾಣವಾಗಿದೆ” ಎಂದು ಹೇಳಿದರು.

ಇಂತಹ ಘಟನೆಗಳನ್ನು ಎದುರಿಸಲು ‘ಕಮಾಂಡೋ ಫೋರ್ಸ್’ ನಿರ್ಮಿಸುವೆವು !

ದೇಶ ವಿರೋಧಿ ಮತ್ತು ಭಯೋತ್ಪಾದಕ ಶಕ್ತಿಗಳನ್ನು ತೊಡೆದುಹಾಕಲು ವಿಶೇಷ ತರಬೇತಿ ಪಡೆದ ‘ಕಮಾಂಡೋ ಫೋರ್ಸ್’ ಅನ್ನು ರಾಜ್ಯದಲ್ಲಿ ಸ್ಥಾಪಿಸಲು ಸರಕಾರ ನಿರ್ಧರಿಸಿದೆ ಎಂದು ಬೊಮ್ಮಾಯಿ ಘೋಷಿಸಿದರು.

ಸಂಪಾದಕೀಯ ನಿಲುವು

ಮೊದಲು ಹಿಂದೂಗಳ ಮತ್ತು ಅವರ ನಾಯಕರ ಹತ್ಯೆಯನ್ನು ತಡೆಯಲು ಸರಕಾರ ಏನು ಮಾಡಲಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತಿದೆ !