ಅರ್ಪಿತಾ ಮುಖರ್ಜಿಗೆ ಸೇರಿದ ಇನ್ನೊಂದು ಮನೆಯಲ್ಲಿ ೨೯ ಕೋಟಿ ರೂಪಾಯಿ ನಗದು ಪತ್ತೆ !

ಕೊಲ್ಕತ್ತಾ (ಬಂಗಾಲ) – ಬಂಗಾಲದ ಶಿಕ್ಷಕ ನೇಮಕಾತಿ ಹಗರಣ ಪ್ರಕರಣದಲ್ಲಿ ಈಡಿಯಿಂದ ರಾಜ್ಯದ ಸಚಿವ ಪಾರ್ಥ ಚಟರ್ಜಿ ಇವರ ಹತ್ತಿರದವರೆನ್ನಲಾದ ಅರ್ಪಿತಾ ಮುಖರ್ಜಿ ಇವರ ಉತ್ತರ ೨೪ ಪರಗಣ ಜಿಲ್ಲೆಯ ಬೇಲಘರಿಯಾದ ಇನ್ನೊಂದು ಮನೆಯ ಮೇಲೆ ದಾಳಿ ನಡೆಸಿ ೨೯ ಕೋಟಿ ರೂಪಾಯಿ ನಗದು ಮತ್ತು ೫ ಕೆಜಿ ಬಂಗಾರ ವಶಪಡಿಸಿಕೊಳ್ಳಲಾಗಿದೆ. ಈ ಮೊದಲು ಅವರ ಒಂದು ಮನೆಯ ದಾಳಿಯಲ್ಲಿ ೨೧ ಕೋಟಿ ರೂಪಾಯಿ ಮತ್ತು ೧ ಒಂದು ಕೋಟಿ ರೂಪಾಯಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇನ್ನೊಂದು ಕಡೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ಪಾರ್ಥ ಚಟರ್ಜಿ ಇವರನ್ನು ಸಂಪುಟದಿಂದ ವಜಾಗೊಳಿಸಲಾಗಿದೆ.

 

ಸಂಪಾದಕೀಯ ನಿಲುವು

ಇಷ್ಟೊಂದು ಹಣ ಸಂಗ್ರಹ ಮಾಡುವವರೆಗೂ ರಾಜ್ಯದ ಪೊಲೀಸರು ಮತ್ತು ಗುಪ್ತಚರ ಇಲಾಖೆಯವರು ನಿದ್ದೆ ಮಾಡುತ್ತಿದ್ದರೆ ? ಅಥವಾ ಅದನ್ನು ಕಂಡೂ ಕಾಣದಂತೆ ಮಾಡಲಯ ಆದೇಶವಿತ್ತೇ ?