ಯುಗಾದಿಯ ದಿನದಂದು ವರ್ಷ ಫಲ ಕೇಳುವುದರ ಲಾಭ !

‘ವರ್ಷದ ಆರಂಭದಲ್ಲಿ ಆ ವರ್ಷದಲ್ಲಿ ಘಟಿಸುವ ಒಳ್ಳೆಯ-ಕೆಟ್ಟ ಘಟನೆಗಳ ಬಗ್ಗೆ ಮಾಹಿತಿ ತಿಳಿದರೆ ಅದರಂತೆ ಉಪಾಯ ಯೋಜನೆ ಮಾಡಿ ಮೊದಲೇ ವ್ಯವಸ್ಥೆ ಮಾಡಿಕೊಳ್ಳಲು ಸುಲಭವಾಗುತ್ತದೆ. ಇದುವೇ ವರ್ಷಫಲ ಕೇಳುವುದರ ನಿಜವಾದಲಾಭವಾಗಿದೆ; ಆದ್ದರಿಂದ ಯುಗಾದಿಯ ದಿನದಂದು ವರ್ಷಫಲ ಕೇಳಬೇಕು.

ಬ್ರಹ್ಮಧ್ವಜದ ಬಾಗಿರುವ ಸ್ಥಿತಿ

ಬ್ರಹ್ಮಧ್ವಜವನ್ನು ಸ್ವಲ್ಪ ಬಾಗಿರುವ ಸ್ಥಿತಿಯಲ್ಲಿ ಇಟ್ಟರೆ ಅದರ ರಜೋಗುಣೀ ಈಶ್ವರಿ ಚೈತನ್ಯದ ಲಹರಿಗಳನ್ನು  ಪ್ರಕ್ಷೇಪಿಸುವ ಕ್ಷಮತೆ ಹೆಚ್ಚಾಗುವುದರಿಂದ ಜೀವಗಳಿಗೆ ವಾತಾವರಣದಲ್ಲಿರುವ ಚೈತನ್ಯದಿಂದ ದೀರ್ಘಕಾಲ ಲಾಭ ದೊರೆಯಲು ಸಹಾಯವಾಗುತ್ತದೆ.

ಯುಗಾದಿಯ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂದೇಶ !

ಯುಗಾದಿ ಹಬ್ಬದ ದಿನದಿಂದ ತಮ್ಮ ವೈಯಕ್ತಿಕ ಮತ್ತು ಸಾಮಾಜಿಕಜೀವನದಲ್ಲಿ ರಾಮರಾಜ್ಯವನ್ನು ಸ್ಥಾಪಿಸುವ ಸಂಕಲ್ಪವನ್ನು ಮಾಡಿರಿ !

ಯುಗಾದಿಯೆಂದರೆ ಹಿಂದೂಗಳ ನವವರ್ಷಾರಂಭ ದಿನ ಮತ್ತು ಸೃಷ್ಟಿಯ ಆರಂಭ ದಿನ

ಯುಗಾದಿ ಎಂದರೆ ಹಿಂದೂಗಳ ನವವರ್ಷಾರಂಭದ ದಿನ ಮತ್ತು ಸೃಷ್ಟಿಯ ಆರಂಭದಿನ ! ಈ ದಿನದಂದು ಬ್ರಹ್ಮಾಂಡದಲ್ಲಿನ ಪ್ರಜಾಪತಿ ಈ ದೇವತೆಯ ಲಹರಿಗಳು ಪೃಥ್ವಿಯ ಮೇಲೆ ಅತ್ಯಧಿಕ ಪ್ರಮಾಣದಲ್ಲಿ ಬರುತ್ತವೆ. ಧರ್ಮಧ್ವಜದಿಂದ ವಾತಾವರಣದಲ್ಲಿನ ಪ್ರಜಾಪತಿ ಲಹರಿಗಳು ಕಲಶದಿಂದ ಮನೆಯಲ್ಲಿ ಪ್ರವೇಶಿಸುತ್ತವೆ.

ಶ್ರೀಗುರುಗಳಿಗೆ ಅಪೇಕ್ಷಿತ ರಾಮರಾಜ್ಯವು ಅಂತರ್ಬಾಹ್ಯದಲ್ಲಿ ಅವತರಿಸಬೇಕೆಂದು ಸಾಧನೆಗಾಗಿ ಜೀವವನ್ನು ಸವೆಸಿ ಪ್ರಯತ್ನಿಸುವ ಶುಭಸಂಕಲ್ಪ ಮಾಡಿರಿ !

ಯುಗಾದಿಯ ನಿಮಿತ್ತ ಶ್ರೀರಾಮ ಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಚರಣಗಳಲ್ಲಿ ಶರಣಾಗಿ ಸಾಧನೆಯ ಪ್ರಯತ್ನಗಳನ್ನು ವೃದ್ಧಿಸುವ ಶುಭಸಂಕಲ್ಪವನ್ನು ಮಾಡೋಣ !

ವರ್ಷಾರಂಭದಲ್ಲಿ ಶುದ್ಧ ಕನ್ನಡದಲ್ಲಿ ಮಾತನಾಡಿ ಸ್ವಭಾಷಾಭಿಮಾನ ಕಾಪಾಡಿ

ಪ್ರತಿ ಜೀವವು ಯೋಗ್ಯ ಅಂದರೆ ಶುದ್ಧ ಭಾಷೆ ಉಚ್ಚರಿಸುವುದಾಗಿದೆ. ಅದರೊಂದಿಗೆ ಭಾಷೆಯಲ್ಲಿರುವ ದೇವರೂಪಿ ಚೈತನ್ಯವನ್ನು ಸ್ವತಃ ಗ್ರಹಿಸಲು ಪ್ರಯತ್ನಿಸಿದರೆ ವಾಯುಮಂಡಲ ಹಾಗೂ ಸಮಾಜ ಶುದ್ಧಗೊಳ್ಳುತ್ತದೆ.

ಯುಗಾದಿ ಅಂದರೆ ಸಂಕಲ್ಪಶಕ್ತಿಯ ಮುಹೂರ್ತ

ಯುಗಾದಿ ದಿನದಂದು ಪೃಥ್ವಿಯಲ್ಲಿ ಬ್ರಹ್ಮನ ಮತ್ತು ವಿಷ್ಣುವಿನ ತತ್ತ್ವಗಳು ಅಗಾಧ ಪ್ರಮಾಣದಲ್ಲಿ ಕಾರ್ಯನಿರತವಾಗಿ ರುತ್ತವೆ. ಇದೇ ದಿನದಂದು ವನವಾಸ ವನ್ನು ಮುಗಿಸಿ ಮರಳಿದ ಪ್ರಭು ಶ್ರೀರಾಮ ನನ್ನು ಮುಂಬಾಗಿಲಿನಲ್ಲಿ ಬ್ರಹ್ಮಧ್ವಜ ನಿಲ್ಲಿಸಿ ಪ್ರಜೆಗಳು ಸ್ವಾಗತಿಸಿದರು.

ದೇವಸ್ಥಾನಗಳಿಗೆ ಶೇ. ೧೦ ರಷ್ಟು ತೆರಿಗೆ ವಿಧಿಸುವ ವಿಧೇಯಕದಲ್ಲಿ ಪಕ್ಷಪಾತ; ವಿಧೇಯಕವನ್ನು ಸರಕಾರಕ್ಕೆ ಹಿಂದಿರುಗಿಸಿದ ರಾಜ್ಯಪಾಲ ಗೆಹ್ಲೋಟ್‌ !

ಕರ್ನಾಟಕದ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್‌ರವರು ದೇವಸ್ಥಾನಗಳಿಗೆ ತೆರಿಗೆಯನ್ನು ವಿಧಿಸುವ ಕಾಂಗ್ರೆಸ್‌ ಸರಕಾರದ ವಿಧೇಯಕ ವನ್ನು ಹಿಂದೆ ಕಳುಹಿಸಿದ್ದಾರೆ. ರಾಜ್ಯಪಾಲರು ‘ಈ ಕಾನೂನಿನಲ್ಲಿರುವ ಅನೇಕ ಕಲಮ್‌ಗಳು ಪಕ್ಷಪಾತದಿಂದ ಕೂಡಿವೆ’ ಎಂದು ಹೇಳುತ್ತ ಹಿಂದೆ ಕಳುಹಿಸಿದ್ದಾರೆ.