ಯುಗಾದಿ ಅಂದರೆ ಸಂಕಲ್ಪಶಕ್ತಿಯ ಮುಹೂರ್ತ

ಯುಗಾದಿ ಹಿಂದೂಗಳ ಮಹತ್ವದ ಹಬ್ಬವಾಗಿದೆ. ಹಿಂದೂಗಳ ಹೊಸ ವರ್ಷ ಈ ದಿನದಿಂದ ಪ್ರಾರಂಭವಾಗುತ್ತದೆ. ಈ ದಿನದಂದು ಪೃಥ್ವಿಯಲ್ಲಿ ಬ್ರಹ್ಮನ ಮತ್ತು ವಿಷ್ಣುವಿನ ತತ್ತ್ವಗಳು ಅಗಾಧ ಪ್ರಮಾಣದಲ್ಲಿ ಕಾರ್ಯನಿರತವಾಗಿ ರುತ್ತವೆ. ಇದೇ ದಿನದಂದು ವನವಾಸ ವನ್ನು ಮುಗಿಸಿ ಮರಳಿದ ಪ್ರಭು ಶ್ರೀರಾಮ ನನ್ನು ಮುಂಬಾಗಿಲಿನಲ್ಲಿ ಬ್ರಹ್ಮಧ್ವಜ ನಿಲ್ಲಿಸಿ ಪ್ರಜೆಗಳು ಸ್ವಾಗತಿಸಿದರು. ಅಂದಿನಿಂದ ಬ್ರಹ್ಮಧ್ವಜ ಸ್ಥಾಪನೆಯು ಪ್ರಾರಂಭವಾಗಿದೆ. ಈ ದಿನದಂದು ಪ್ರಜಾಪತಿಯ ಲಹರಿಗಳು ದೊಡ್ಡ ಪ್ರಮಾಣದಲ್ಲಿ ಕಾರ್ಯನಿರತ ವಾಗಿರುತ್ತವೆ. ಈ ಲಹರಿಗಳ ಮಾಧ್ಯಮದಿಂದ ಪ್ರತ್ಯಕ್ಷ ಈಶ್ವರನ ತತ್ತ್ವವು ಕಾರ್ಯನಿರತವಾಗಿರುತ್ತದೆ. ಅಲ್ಲದೇ ಈ ದಿನ ರಾಮತತ್ತ್ವ ಶೇ. ೧೦೦ ರಷ್ಟು ಅಧಿಕ ಕಾರ್ಯನಿರತವಾಗಿರುತ್ತದೆ. ಬ್ರಹ್ಮಧ್ವಜದ ಮಾಧ್ಯಮ ದಿಂದ ಕಾರ್ಯನಿರತ ಈಶ್ವರನ ಶಕ್ತಿಯು ಜೀವಕ್ಕೆ ಲಾಭದಾಯಕವಾಗಿರುತ್ತದೆ.

ಯುಗಾದಿಹಬ್ಬವನ್ನು ಯಾವ ರೀತಿ ಆಚರಿಸುವಿರಿ ?

ಯುಗಾದಿಹಬ್ಬವೆಂದರೆ ಹೊಸವರ್ಷಾರಂಭದ ದಿನವಾಗಿದೆ, ಆನಂದೋತ್ಸವವನ್ನು ಆಚರಿಸುವ ದಿನವಾಗಿದೆ. ಶ್ರೀರಾಮನ ಬಗ್ಗೆ ಇರುವ ಶ್ರದ್ಧೆಯಿಂದ ಈ ವಿಜಯಗಾಥೆಯನ್ನು ಈ ದಿನ ನಾವು ಸ್ಮರಿಸುತ್ತೇವೆ. ಈ ಶ್ರದ್ಧೆಯನ್ನೇ ಬಹಿರಂಗವಾಗಿ ಮುರಿಯ ಲಾಗುತ್ತಿದೆ. ಎಲ್ಲಿ ಧರ್ಮಹಾನಿಯಾಗುತ್ತದೆಯೋ, ಅಲ್ಲಿ ಅದನ್ನು ನ್ಯಾಯಸಮ್ಮತವಾಗಿ ತಡೆಯಲು ಯುಗಾದಿಹಬ್ಬದ ಶುಭ ಮುಹೂರ್ತದಲ್ಲಿ ನಿರ್ಧರಿಸಿರಿ, ಆಗ ಮಾತ್ರ ಹಬ್ಬವನ್ನು ನಿಜವಾದ ಅರ್ಥದಿಂದ ಆಚರಿಸಿದಂತಾಗುತ್ತದೆ !

ಬ್ರಹ್ಮಧ್ವಜದ ಪೂಜೆಯನ್ನು ಸೂರ್ಯೋದಯದ ಸಮಯದಲ್ಲಿ ಏಕೆ ಮಾಡಬೇಕು ?

ಸೂರ್ಯೋದಯದ ಸಮಯದಲ್ಲಿ ಪ್ರಕ್ಷೇಪಿಸುವ ಚೈತನ್ಯವು ತುಂಬಾ ಸಮಯ ಉಳಿಯುತ್ತಿರುವುದರಿಂದ ಸೂರ್ಯೋದಯದ ನಂತರ ೫-೧೦ ನಿಮಿಷಗಳೊಳಗೆ ಬ್ರಹ್ಮಧ್ವಜದ ಪೂಜೆಯನ್ನು ಮಾಡಬೇಕು. ಯುಗಾದಿಹಬ್ಬದಂದು ತೇಜ ಮತ್ತು ಪ್ರಜಾಪತಿ ಲಹರಿಗಳು ದೊಡ್ಡ ಪ್ರಮಾಣದಲ್ಲಿ ಕಾರ್ಯನಿರತವಾಗುತ್ತವೆ. ಸೂರ್ಯೋದಯದ ಸಮಯದಲ್ಲಿ ಈ ಲಹರಿಗಳಿಂದ ಪ್ರಕ್ಷೇಪಿಸುವ ಚೈತನ್ಯವು ತುಂಬಾ ಸಮಯ ಉಳಿಯುತ್ತವೆ. ಅವು ಜೀವದ ಕೋಶಗಳಲ್ಲಿ ಸಂಗ್ರಹಿಸಲ್ಪಡುತ್ತವೆ; ಅವಶ್ಯಕತೆಗನುಸಾರ ಆ ಜೀವದಿಂದ ಅವುಗಳನ್ನು ಬಳಸಲಾಗುತ್ತದೆ.

ಯುಗಾದಿಯ ವಿಷಯದಲ್ಲಿ ಮಹಾಭಾರತದಲ್ಲಿನ ಕಥೆ

ಮಹಾಭಾರತದಲ್ಲಿ ಒಂದು ಕಥೆಯಿದೆ. ಚೇದಿಯ ರಾಜನಾದ ವಸು ಈತನು ಕಾಡಿಗೆ ತೆರಳಿ, ಕಠಿಣ ತಪಸ್ಸನ್ನು ಪ್ರಾರಂಭಿಸಿದನು. ದೇವರು ಅವನ ಮೇಲೆ ಪ್ರಸನ್ನರಾಗಿ, ಅವನಿಗೆ ಶುಭದಾಯಕವಾದ ವೈಜಯಂತಿ ಮಾಲೆಯನ್ನು ಕೊಟ್ಟರು. ಅಲ್ಲದೇ ನಿರಂತರ ಪರ್ಯಟನೆಗಾಗಿ ಒಂದು ವಿಮಾನವನ್ನು ಮತ್ತು ರಾಜ್ಯದ ಆಡಳಿತವನ್ನು ನಡೆಸಲು ರಾಜದಂಡವನ್ನು ಕೊಟ್ಟರು. ಈ ದೈವೀ ಪ್ರಸಾದದಿಂದ ವಸು ಸಂತೋಷದಿಂದ ಗದ್ಗದಿತನಾದನು. ಅವನು ಆ ರಾಜದಂಡದ ಒಂದು ತುದಿಗೆ ಜರಿಯ ರೇಷ್ಮೆಯ ವಸ್ತ್ರವನ್ನು ಇಟ್ಟು, ಅದರ ಮೇಲೆ ಬಂಗಾರದ ತಂಬಿಗೆಯನ್ನು ಕೂಡಿಸಿ ಅದನ್ನು ಪೂಜಿಸಿದನು. ಇದನ್ನೇ ಇಂದಿನ ಬ್ರಹ್ಮಧ್ವಜದ ಮೂಲಸ್ವರೂಪವೆಂದು ಹೇಳಲಾಗುತ್ತದೆ.

ಬ್ರಹ್ಮಧ್ವಜವನ್ನು ಇಳಿಸುವಾಗ ಏನು ಪ್ರಾರ್ಥನೆ ಮಾಡಬೇಕು !

ಸೂರ್ಯಾಸ್ತವಾದ ತಕ್ಷಣ ಬ್ರಹ್ಮಧ್ವಜವನ್ನು ಇಳಿಸಬೇಕು !

ಯಾವ ಭಾವದಿಂದ ಬ್ರಹ್ಮಧ್ವಜದ ಪೂಜೆಯನ್ನು ಮಾಡಲಾಗುತ್ತದೆಯೋ, ಅದೇ ಭಾವದಿಂದ ಬ್ರಹ್ಮಧ್ವಜವನ್ನು ಕೆಳಗೆ ಇಳಿಸಬೇಕು, ಆಗಲೇ ಜೀವಕ್ಕೆ ಅದರಲ್ಲಿನ ಚೈತನ್ಯ ಸಿಗುತ್ತದೆ. ಸಿಹಿ ಪದಾರ್ಥಗಳ ನೈವೇದ್ಯವನ್ನು ತೋರಿಸಿ ಮತ್ತು ಪ್ರಾರ್ಥನೆ ಮಾಡಿ ಬ್ರಹ್ಮಧ್ವಜವನ್ನು ಕೆಳಗೆ ಇಳಿಸಬೇಕು. ಬ್ರಹ್ಮಧ್ವಜಕ್ಕೆ ಹಾಕಿದ ಎಲ್ಲ ಸಾಹಿತ್ಯಗಳನ್ನು ದೈನಂದಿನದಲ್ಲಿ ಬಳಸುವ ವಸ್ತುಗಳ ಹತ್ತಿರ ಇಡಬೇಕು. ಬ್ರಹ್ಮಧ್ವಜಕ್ಕೆ ಅರ್ಪಿಸಿದ ಹೂವುಗಳು ಮತ್ತು ಮಾವಿನ ಎಲೆಗಳನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಬೇಕು. ಬ್ರಹ್ಮಧ್ವಜವನ್ನು ಸೂರ್ಯಾಸ್ತದ ನಂತರ ತಕ್ಷಣ ಕೆಳಗೆ ಇಳಿಸ ಬೇಕು. ಸೂರ್ಯಾಸ್ತದ ನಂತರ ೧ ರಿಂದ ೨ ಗಂಟೆಗಳಲ್ಲಿ ವಾತಾವರಣದಲ್ಲಿ ಅನಿಷ್ಟ ಶಕ್ತಿಗಳು ಕಾರ್ಯನಿರತವಾಗುತ್ತವೆ. ಸೂರ್ಯಾಸ್ತದ ನಂತರವೂ ಬ್ರಹ್ಮಧ್ವಜವನ್ನು ಹಾಗೆಯೇ ಇಟ್ಟರೆ ಅದರಲ್ಲಿ ಅನಿಷ್ಟ ಶಕ್ತಿಗಳು ಪ್ರವೇಶಿಸಬಹುದು. ಆ ಶಕ್ತಿಗಳಿಂದ ನಮಗೆ ತೊಂದರೆಯಾಗುತ್ತದೆ.

ಶುಭಾಶಯಪತ್ರವನ್ನು ಯುಗಾದಿಯಂದೇ ನೀಡಿ !

ನಾವು ಜನವರಿ ತಿಂಗಳಿನ ಪ್ರಾರಂಭದಲ್ಲಿ ಹೊಸವರ್ಷದ ಶುಭಾಶಯಪತ್ರವನ್ನು ನಮ್ಮ ಸಂಬಂಧಿಕರಿಗೆ ಮತ್ತು ಮಿತ್ರರಿಗೆ ಕಳುಹಿಸುತ್ತೇವೆ. ಅದರ ಬದಲು ಚೈತ್ರ ಶುಕ್ಲ ಪಕ್ಷ ಪಾಡ್ಯದಂದು ಶುಭಾಶಯಪತ್ರ ಕಳುಹಿಸಲು ಪ್ರಾರಂಭಿಸಿ; ಏಕೆಂದರೆ ಇದುವೇ ನಿಜವಾದ ವರ್ಷಾರಂಭದ ದಿನವಾಗಿದೆ.