ಯುಗಾದಿಯ ದಿನದಂದು ವರ್ಷ ಫಲ ಕೇಳುವುದರ ಲಾಭ !

‘ವರ್ಷದ ಆರಂಭದಲ್ಲಿ ಆ ವರ್ಷದಲ್ಲಿ ಘಟಿಸುವ ಒಳ್ಳೆಯ-ಕೆಟ್ಟ ಘಟನೆಗಳ ಬಗ್ಗೆ ಮಾಹಿತಿ ತಿಳಿದರೆ ಅದರಂತೆ ಉಪಾಯ ಯೋಜನೆ ಮಾಡಿ ಮೊದಲೇ ವ್ಯವಸ್ಥೆ ಮಾಡಿಕೊಳ್ಳಲು ಸುಲಭವಾಗುತ್ತದೆ. ಇದುವೇ ವರ್ಷಫಲ ಕೇಳುವುದರ ನಿಜವಾದಲಾಭವಾಗಿದೆ; ಆದ್ದರಿಂದ ಯುಗಾದಿಯ ದಿನದಂದು ವರ್ಷಫಲ ಕೇಳಬೇಕು. ಇದರ ಕೆಲವು ಉದಾಹರಣೆ ನೋಡೋಣ.

೧. ಮಳೆ ಬೇಗನೆ ಆರಂಭವಾಗುತ್ತಿದ್ದರೆ, ಆಗ ಅದರ ಪ್ರಕಾರ ಕೃಷಿ ಭೂಮಿಯನ್ನು ಮೊದಲೇ ಸಿದ್ಧಗೊಳಿಸಿ ಇಡಲು ಸಾಧ್ಯವಾಗುತ್ತದೆ.

೨. ಮಳೆಗಾಲದಲ್ಲಿ ಅಡಚಣೆ ಬರುವುದಿದ್ದರೆ ಅಥವಾ ಮಳೆಯ ಪ್ರಮಾಣ ಕಡಿಮೆ ಇದ್ದರೆ, ಆಗ ಇಂತಹ ಸಮಯದಲ್ಲಿ ಬಾವಿ ಮುಂತಾದರ ಉಪಯೋಗವಾಗಬೇಕು; ಎಂದು ಬೇಕಾಗುವ ಸಾಮಾಗ್ರಿಗಳು ನೀಟಾಗಿ ಸಿದ್ಧವಾಗಿ ಇಡಬಹುದು.

೩. ಬರಗಾಲ ಇದ್ದರೆ ಆಗ ಧಾನ್ಯ ಮತ್ತು ಮೇವು ಇದರ ಮಿತವ್ಯಯ ಮಾಡಿಕೊಂಡು ಅಥವಾ ಯಾವ ದೇಶದಲ್ಲಿ ಹೇರಳವಾಗಿ ಇರುವುದು, ಅಲ್ಲಿಂದ ಧಾನ್ಯ ಮೇವು ತಂದು ಸಂಗ್ರಹ ಮಾಡಬಹುದು ಮತ್ತು ಬರುವ ಅಡಚಣೆಗಳ ಕಾಲದಲ್ಲಿ ವ್ಯವಸ್ಥೆ ಮಾಡಿ ಇಟ್ಟುಕೊಳ್ಳಬಹುದು.

೪. ಯಾವ ಬೆಳೆ ಬೆಳೆಯುವ ಸಾಧ್ಯತೆ ಇದೆ ಇದನ್ನು ತಿಳಿದು ಅದರ ಪ್ರಕಾರ ಬೀಜಗಳು ಮತ್ತು ಗೊಬ್ಬರ ಮುಂತಾದವು ತಂದು ಇಡಬಹುದು.