ಯುಗಾದಿಯ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂದೇಶ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಯುಗಾದಿ ಹಬ್ಬದ ದಿನದಿಂದ ತಮ್ಮ ವೈಯಕ್ತಿಕ ಮತ್ತು ಸಾಮಾಜಿಕಜೀವನದಲ್ಲಿ ರಾಮರಾಜ್ಯವನ್ನು ಸ್ಥಾಪಿಸುವ ಸಂಕಲ್ಪವನ್ನು ಮಾಡಿರಿ !

‘ಯುಗಾದಿ ಅಂದರೆ ಯುಗಾದಿಯ ಚೈತ್ರ ಶುಕ್ಲ ಪಾಡ್ಯವು ಹಿಂದೂಗಳ ಹೊಸ ವರ್ಷಾರಂಭದ ದಿನವಾಗಿದೆ ! ಹಿಂದೂ ಧರ್ಮದ ಮೂರುವರೆ ಮುಹೂರ್ತಗಳಲ್ಲಿ ಶುಭಕಾರ್ಯಗಳ ಸಂಕಲ್ಪವನ್ನು ಮಾಡಲಾಗುತ್ತದೆ. ಯುಗಾದಿ ಹಬ್ಬವು ಮೂರುವರೆ ಮುಹೂರ್ತಗಳಲ್ಲಿ ಒಂದು ಮುಹೂರ್ತವಾಗಿದೆ. ಅಯೋಧ್ಯೆಯಲ್ಲಿ ಇತ್ತೀಚೆಗೆ ರಾಮಲಲ್ಲಾ (ಶ್ರೀರಾಮನ ಬಾಲಕ ರೂಪದಲ್ಲಿನ ಮೂರ್ತಿ) ವಿರಾಜಮಾನರಾದ ನಂತರ ದೇಶಕ್ಕೆ ಆಧ್ಯಾತ್ಮಿಕ ಅಧಿಷ್ಠಾನವು ಪ್ರಾಪ್ತವಾಗಿದೆ. ಈಗ ದೇಶಕ್ಕೆ ರಾಮರಾಜ್ಯದ ಆವಶ್ಯಕತೆಯಿದೆ ! ಪ್ರಭು ಶ್ರೀರಾಮನು ಎಲ್ಲ ಜನರ ಕಲ್ಯಾಣಕ್ಕಾಗಿ ಆದರ್ಶ ರಾಮರಾಜ್ಯವನ್ನು ಸ್ಥಾಪಿಸಿದನು. ರಾಮರಾಜ್ಯವೆಂದರೆ ಅಧ್ಯಾತ್ಮಪರಾಯಣ (ಸಾತ್ತ್ವಿಕ) ಜನರ ಆದರ್ಶ ರಾಜ್ಯ ! ಸದ್ಯದ ಭ್ರಷ್ಟ ಪ್ರಜಾಪ್ರಭುತ್ವದಲ್ಲಿ ರಾಮರಾಜ್ಯದ ಕಲ್ಪನೆಯು ದುರ್ಲಭವಾಗಿದೆ; ಆದರೆ ಸದ್ಯದ ಕಾಲವು ಸಂಕ್ರಮಣಕಾಲವಾಗಿರುವುದರಿಂದ ಈ ಕಾಲದಲ್ಲಿ ರಾಮರಾಜ್ಯದ ಸ್ಥಾಪನೆಯನ್ನು ಆರಂಭಿಸುವುದು ಸುಲಭವಾಗಿದೆ. ರಾಷ್ಟ್ರದಲ್ಲಿ ರಾಮರಾಜ್ಯ ತರುವ ಮೊದಲು ಜನತೆಯು ತಮ್ಮ ಜೀವನದಲ್ಲಿ ಮತ್ತು ಸಾಮಾಜಿಕ ಜೀವನದಲ್ಲಿ ರಾಮರಾಜ್ಯವನ್ನು ತರಲು ಸತತವಾಗಿ ಕೆಲವು ವರ್ಷಗಳ ಕಾಲ ಪ್ರಯತ್ನಿಸಬೇಕಾಗುತ್ತದೆ. ವೈಯಕ್ತಿಕ ಜೀವನದಲ್ಲಿ ರಾಮರಾಜ್ಯವನ್ನು ತರಲು ಸ್ವತಃ ಸಾಧನೆಯನ್ನು ಮಾಡಬೇಕಾಗಲಿದೆ, ಹಾಗೆಯೇ ನೈತಿಕ ಮತ್ತು ಸದಾಚಾರಿಯಾಗಿ ಜೀವಿಸುವ ಸಂಕಲ್ಪವನ್ನು ಮಾಡಬೇಕಾಗಲಿದೆ. ಸಾಮಾಜಿಕ ಜೀವನದಲ್ಲಿ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯನ್ನು ವಿರೋಧಿಸಲು ಪ್ರಯತ್ನಶೀಲರಾಗಬೇಕಾಗಿದೆ. ಸಾತ್ತ್ವಿಕವಾಗಿರುವÀ ಸಮಾಜದ ಮುಂದಾಳತ್ವದಿಂದಲೇ ಅಧ್ಯಾತ್ಮಾಧಾರಿತ ರಾಷ್ಟ್ರರಚನೆ, ಅಂದರೆ ರಾಮರಾಜ್ಯ ಬರಲು ಸಾಧ್ಯವಿದೆ; ಆದ್ದರಿಂದಲೇ ಈ ಯುಗಾದಿಹಬ್ಬದ ದಿನದಿಂದ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ರಾಮರಾಜ್ಯವನ್ನು ತರುವ ಸಂಕಲ್ಪವನ್ನು ಮಾಡಿರಿ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧೫.೩.೨೦೨೪)