ದೇವಸ್ಥಾನಗಳಿಗೆ ಶೇ. ೧೦ ರಷ್ಟು ತೆರಿಗೆ ವಿಧಿಸುವ ವಿಧೇಯಕದಲ್ಲಿ ಪಕ್ಷಪಾತ; ವಿಧೇಯಕವನ್ನು ಸರಕಾರಕ್ಕೆ ಹಿಂದಿರುಗಿಸಿದ ರಾಜ್ಯಪಾಲ ಗೆಹ್ಲೋಟ್‌ !

ಕರ್ನಾಟಕ ಸರಕಾರಕ್ಕೆ ಮುಖಭಂಗ !

ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್‌

ಬೆಂಗಳೂರು – ಕರ್ನಾಟಕದ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್‌ರವರು ದೇವಸ್ಥಾನಗಳಿಗೆ ತೆರಿಗೆಯನ್ನು ವಿಧಿಸುವ ಕಾಂಗ್ರೆಸ್‌ ಸರಕಾರದ ವಿಧೇಯಕ ವನ್ನು ಹಿಂದೆ ಕಳುಹಿಸಿದ್ದಾರೆ. ರಾಜ್ಯಪಾಲರು ‘ಈ ಕಾನೂನಿನಲ್ಲಿರುವ ಅನೇಕ ಕಲಮ್‌ಗಳು ಪಕ್ಷಪಾತದಿಂದ ಕೂಡಿವೆ’ ಎಂದು ಹೇಳುತ್ತ ಹಿಂದೆ ಕಳುಹಿಸಿದ್ದಾರೆ.

೧. ರಾಜ್ಯದ ಕಾಂಗ್ರೆಸ್‌ ಸರಕಾರವು ರಾಜ್ಯದಲ್ಲಿನ ದೇವಸ್ಥಾನಗಳ ಮೇಲೆ ತೆರಿಗೆಯನ್ನು ಜ್ಯಾರಿಗೊಳಿಸಲು ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಹಾಗೂ ಚಾರಿಟೇಬಲ್‌ ಎಂಡೋಮೆಂಟ್ಸ (ಸುಧಾರಣಾ) ವಿಧೇಯಕ ೨೦೨೪’ನ್ನು ವಿಧಾನಸಭೆಯಲ್ಲಿ ಸಮ್ಮತಿ ನೀಡಿತ್ತು. ಅದನ್ನು ವಿಧಾನ ಪರಿಷತ್ತಿನಲ್ಲಿ ತಿರಸ್ಕರಿಸಲಾದ ನಂತರ ಪುನಃ ವಿಧಾನಸಭೆಯಲ್ಲಿ ಸಮ್ಮತಿಸಿ ವಿಧಾನಪರಿಷತ್ತಿನಲ್ಲಿಯೂ ಸಮ್ಮತಿಗೊಳಿಸಲಾಯಿತು. ಅನಂತರ ಅದನ್ನು ರಾಜ್ಯಪಾಲರ ಹಸ್ತಾಕ್ಷರಕ್ಕಾಗಿ ಕಳುಹಿಸಲಾಗಿತ್ತು.

೨. ಈ ವಿಧೇಯಕದ ಅನ್ವಯ ರಾಜ್ಯದಲ್ಲಿ ೧೦ ಲಕ್ಷದಿಂದ ೧ ಕೋಟಿ ರೂಪಾಯಿಗಳಷ್ಟು ವಾರ್ಷಿಕ ಉತ್ಪನ್ನವಿರುವ ದೇವಸ್ಥಾನಗಳಿಂದ ಸರಕಾರವು ಶೇ. ೫ ರಷ್ಟು ತೆರಿಗೆ ವಸೂಲಿ ಮಾಡಲಿದೆ. ವರ್ಷಕ್ಕೆ ೧ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಉತ್ಪನ್ನವಿರುವ ದೇವಸ್ಥಾನಗಳಿಂದ ಸರಕಾರವು ಶೇ. ೧೦ ರಷ್ಟು ತೆರಿಗೆ ವಸೂಲಿ ಮಾಡಲಿದೆ. ಹಾಗೆಯೇ ಈ ಹಣವನ್ನು ‘ಸಿ’ ವರ್ಗದಲ್ಲಿನ ದೇವಸ್ಥಾನಗಳಿಗಾಗಿ ಬಳಸಲಾಗುವುದು. ದೇವಸ್ಥಾನದ ಕಾರ್ಯಕಾರಿ ಸಮಿತಿಯ ೪ ಸದಸ್ಯರ ಪೈಕಿ ಒಬ್ಬ ಸದಸ್ಯನು ವಿಶ್ವಕರ್ಮ ಸಮುದಾಯದವನಾಗಿರಬೇಕು. ಧಾರ್ಮಿಕ ದತ್ತಿ ವಿಭಾಗದ ಅಧೀನದಲ್ಲಿರುವ ದೇವಸ್ಥಾನಗಳ ಭೂಮಿಯ ಅತಿಕ್ರಮಣವನ್ನು ತೆರವುಗೊಳಿಸಲು ಕಾರ್ಯ ಸಮಿತಿಯನ್ನು ನೇಮಿಸುವ ಪ್ರಸ್ತಾಪವಿದೆ.

ಇತರ ಧಾರ್ಮಿಕ ಸಂಸ್ಥೆಗಳನ್ನು ಸೇರಿಸಲಾಗುವುದೇ ?

‘ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿ ತರಲಾದ ತಿದ್ದುಪಡಿಯನ್ನು ಇತರ ಧಾರ್ಮಿಕ ಸಂಸ್ಥೆಗಳನ್ನೂ ಸೇರಿಸಿ ಕೊಂಡು ಈ ಮಸೂದೆಯ ಮಾದರಿಯಲ್ಲಿ ಯಾವುದಾದರೂ ಕಾಯ್ದೆ ಮಾಡುವ ಪರಿಕಲ್ಪನೆ ರಾಜ್ಯ ಸರಕಾರಕ್ಕೆ ಇದೆಯೇ’ ಎಂದು ರಾಜ್ಯಪಾಲ ಗೆಹ್ಲೋಟ್‌ ಪ್ರಶ್ನಿಸಿದ್ದಾರೆ.

ರಾಜ್ಯಪಾಲರು ಕೇಳಿರುವ ವಿಷಯಗಳ ಸಂದರ್ಭದಲ್ಲಿ ಸ್ಪಷ್ಟೀಕರಣ ನೀಡಿ ವಿಧೇಯಕದ ಸ್ವೀಕೃತಿಗಾಗಿ ಪುನಃ ಕಳುಹಿಸಲಾಗುವುದು ಎಂದು ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಸುಧಾರಿತ ಕಾನೂನನ್ನು ಹಿಂದೆ ಕಳುಹಿಸುವ ರಾಜ್ಯಪಾಲರ ನಿರ್ಣಯಕ್ಕೆ ಸ್ವಾಗತ ! – ಕರ್ನಾಟಕ ದೇವಸ್ಥಾನ ಮಹಾಸಂಘ

ಶ್ರೀ. ಮೋಹನ ಗೌಡ

ಇದು ‘ಕರ್ನಾಟಕ ದೇವಸ್ಥಾನ ಮಠ ಹಾಗೂ ಧಾರ್ಮಿಕ ಸಂಸ್ಥೆಗಳ ಮಹಾಸಂಘ’ಕ್ಕೆ ದೊರೆತಿರುವ ವಿಜಯವಾಗಿದೆ. ಕರ್ನಾಟಕ ದೇವಸ್ಥಾನ ಮಹಾಸಂಘವು ಈ ಕಾನೂನನ್ನು ಖಂಡಿಸಿ ಸಂಪೂರ್ಣ ರಾಜ್ಯದಲ್ಲಿ ೧೫ ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಆಂದೋಲನಗಳನ್ನು ಮಾಡಿ ಅಲ್ಲಿನ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದರು. ಮಾನ್ಯ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್‌ ರವರ ಈ ಮಹತ್ವಪೂರ್ಣ ನಿರ್ಣಯವನ್ನು ಕರ್ನಾಟಕ ದೇವಸ್ಥಾನ ಮಠ ಹಾಗೂ ಧಾರ್ಮಿಕ ಸಂಸ್ಥೆಗಳ ಮಹಾಸಂಘವು ಸ್ವಾಗತಿಸು ತ್ತದೆ ಹಾಗೂ ಹಿಂದೂ ದೇವಸ್ಥಾನಗಳ ರಕ್ಷಣೆಗಾಗಿ ಮಹಾಸಂಘವು ಇದೇ ರೀತಿಯಲ್ಲಿ ಕಟಿಬದ್ಧವಾಗಿರುವುದು, ಎಂದು ಮಹಾಸಂಘದ ರಾಜ್ಯ ಸಂಯೋಜಕರಾದ ಶ್ರೀ. ಮೋಹನ ಗೌಡರವರು ಹೇಳಿದ್ದಾರೆ.