ಶ್ರೀಗುರುಗಳಿಗೆ ಅಪೇಕ್ಷಿತ ರಾಮರಾಜ್ಯವು ಅಂತರ್ಬಾಹ್ಯದಲ್ಲಿ ಅವತರಿಸಬೇಕೆಂದು ಸಾಧನೆಗಾಗಿ ಜೀವವನ್ನು ಸವೆಸಿ ಪ್ರಯತ್ನಿಸುವ ಶುಭಸಂಕಲ್ಪ ಮಾಡಿರಿ !

ಯುಗಾದಿ ನಿಮಿತ್ತ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಶುಭಸಂದೇಶ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಯುಗಾದಿಯ ನಿಮಿತ್ತ ಶ್ರೀರಾಮ ಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಚರಣಗಳಲ್ಲಿ ಶರಣಾಗಿ ಸಾಧನೆಯ ಪ್ರಯತ್ನಗಳನ್ನು ವೃದ್ಧಿಸುವ ಶುಭಸಂಕಲ್ಪವನ್ನು ಮಾಡೋಣ !

ತ್ರೇತಾಯುಗದಲ್ಲಿ ಪ್ರಭು ಶ್ರೀರಾಮಚಂದ್ರನು ಅವತಾರಿ ಕಾರ್ಯ ಮಾಡುವಾಗ ತನ್ನ ತಂದೆಯ ಆಜ್ಞೆಯಂತೆ ೧೪ ವರ್ಷ ವನವಾಸದ ಕಠಿಣ ಕಾಲವನ್ನೂ ಅನುಭವಿಸಿದನು. ಅನಂತರ ಸಕಲ ಜನರ ಕಲ್ಯಾಣಕ್ಕಾಗಿ ಆದರ್ಶ ರಾಮರಾಜ್ಯವನ್ನು ಸ್ಥಾಪಿಸಿದನು. ಶ್ರೀವಿಷ್ಣುವಿನ ಅವತಾರ, ಆದರ್ಶ ರಾಜ ಪ್ರಭು ಶ್ರೀರಾಮನು ಮತ್ತು ಅವನ ಮಾರ್ಗದರ್ಶಕ ಗುರು ಮಹರ್ಷಿ ವಸಿಷ್ಠರ ಆಧ್ಯಾತ್ಮಿಕ ಶಕ್ತಿಯ ಆವಿಷ್ಕಾರವೇ ರಾಮರಾಜ್ಯ ! ಶ್ರೀರಾಮಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಗುರುದೇವರೂ ಈ ಕಲಿಯುಗದಲ್ಲಿ ನಿರಂತರವಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವತಾರಿ ಕಾರ್ಯವನ್ನು ಮಾಡುತ್ತಿದ್ದಾರೆ. ಪ್ರಸ್ತುತ ಆಪತ್ಕಾಲವು ಮುಗಿದ ಕೂಡಲೇ ಅವರ ಸಂಕಲ್ಪದಿಂದ ರಾಮರಾಜ್ಯದ ಅನುಭೂತಿಯನ್ನು ನೀಡುವ ಹಿಂದೂ ರಾಷ್ಟ್ರವು ಅವತರಿಸಲಿದೆ. ಶ್ರೀಗುರುಗಳ ಈ ಅವತಾರಿ ಕಾರ್ಯಕ್ಕಾಗಿ ಸಪ್ತರ್ಷಿ ಜೀವನಾಡಿಪಟ್ಟಿಯ ಮಾಧ್ಯಮದಿಂದ ನಮಗೆ ವಸಿಷ್ಠ, ವಿಶ್ವಾಮಿತ್ರ ಮೊದಲಾದ ಸಪ್ತರ್ಷಿಗಳ ಮಾರ್ಗದರ್ಶನ ಲಭಿಸುತ್ತಿದೆ. ಭಗವಂತನು ತನ್ನ ಈ ಅವತಾರಿ ಕಾರ್ಯದಲ್ಲಿ ನಮ್ಮನ್ನು ಸಾಕ್ಷೀದಾರರೆಂದು ಮಾಡಿದ್ದು ಅವನ ಈ ದಿವ್ಯ ಕಾರ್ಯದಲ್ಲಿ ನಮ್ಮನ್ನು ಸೇರಿಸಿದ್ದಾನೆ, ಇದಕ್ಕಾಗಿ ನಾವು ಅಂತರಂಗದಲ್ಲಿ ನಿರಂತರ ಕೃತಜ್ಞತಾಭಾವವನ್ನು ಅನುಭವಿಸೋಣ.

ಭಗವಂತನ ಕೃಪೆಯಿಂದ ಇದೇ ಜನ್ಮದಲ್ಲಿ ನಮ್ಮ ಉದ್ಧಾರ ವಾಗಲೆಂದು ಹಿಂದೂ ರಾಷ್ಟ್ರದ ಸ್ಥಾಪನೆಯ ಮೊದಲಿನ ಈ ಸಂಧಿಕಾಲದಲ್ಲಿ ಸಾಧನೆಯ ಪ್ರಯತ್ನಗಳ ವೇಗವನ್ನು ಹೆಚ್ಚಿಸೋಣ. ಅದಕ್ಕಾಗಿ ದೋಷ-ಅಹಂಗಳ ಕಲ್ಮಶಗಳನ್ನು ನಾಶಗೊಳಿಸಿ ಅಂತರಂಗವನ್ನು ಶುದ್ಧಗೊಳಿಸಬೇಕು ಮತ್ತು ಅಲ್ಲಿ ಈಶ್ವರೀ ಗುಣಗಳನ್ನು ಬೆಳೆಸಬೇಕು, ಇದಕ್ಕಾಗಿ ವ್ಯಷ್ಟಿ ಸಾಧನೆಯ ಪ್ರಯತ್ನಗಳನ್ನು ತಳಮಳದಿಂದ ಮತ್ತು ಜಿಗುಟುತನದಿಂದ ಮಾಡೋಣ. ಅದರ ಜೊತೆಗೆ ಹಿಂದೂ ರಾಷ್ಟ್ರವು ಭೂತಲದ ಮೇಲೆ ಶೀಘ್ರತೆಯಿಂದ ಅವತರಿಸಬೇಕು, ಅದಕ್ಕಾಗಿ ಸಮಷ್ಟಿ ಸಾಧನೆಗಾಗಿ ಜೀವ ಸವೆಸುವ ಶುಭಸಂಕಲ್ಪವನ್ನು ಮಾಡೋಣ. ನಿರ್ಮಲ ಮತ್ತು ಭಕ್ತಿಪೂರ್ಣ ಅಂತಃಕರಣದಿಂದ ಪ್ರಭು ಶ್ರೀರಾಮನ ಪರಮದಿವ್ಯ ಸುಕೋಮಲ ಚರಣಗಳಲ್ಲಿ ಶರಣಾಗಿ ಶ್ರೀಗುರುಗಳಿಗೆ ಅಪೇಕ್ಷಿತವಾದ ರಾಮರಾಜ್ಯವು ಅಂತರ್ಬಾಹ್ಯ ಶೀಘ್ರಾತಿಶೀಘ್ರ ಅವತರಿಸಬೇಕೆಂದು ಅವನ ಚರಣಗಳಲ್ಲಿ ಶ್ರದ್ಧೆಯಿಂದ ಪ್ರಾರ್ಥಿಸೋಣ !’ – ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರು

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಂದ ಪ್ರಭು ಶ್ರೀರಾಮನ ಚರಣಗಳಲ್ಲಾದ ಆರ್ತ ಪ್ರಾರ್ಥನೆ !

‘ಹೇ ಶ್ರೀರಾಮ, ನಾವು ತಳಮಳದಿಂದ ರಾಮರಾಜ್ಯದ ದಾರಿ ಕಾಯುತ್ತಿದ್ದೇವೆ ! ರಾಮರಾಜ್ಯದ ದಿವ್ಯ ವಾತಾವರಣವು ಈ ಭೂತಲದ ಮೇಲೆ ಮತ್ತೊಮ್ಮೆ ಅವತರಿಸಲಿ. ನಮಗೆ ಆ ಪರಮಾನಂದದ ಅನುಭೂತಿ ಪಡೆಯಲು ಸಾಧ್ಯವಾಗಲಿ. ಎಲ್ಲರಲ್ಲಿ ನವಚೈತನ್ಯ ಸಂಚರಿಸಲಿ. ಚರಾಚರ ಸೃಷ್ಟಿಯು ಮತ್ತೊಮ್ಮೆ ಆನಂದದಿಂದ ಪುಳಕಿತವಾಗಲಿ. ನಿನ್ನ ದಿವ್ಯ ಚರಣಸ್ಪರ್ಶದಿಂದ ಈ ಭೂತಲವನ್ನು ಉದ್ಧರಿಸು ರಘು ರಾಜಾ ! ಹೇ ಭಗವಂತಾ, ಈ ಭೂಮಿಯು ಮತ್ತೊಮ್ಮೆ ಮಂಗಲಮಯವಾಗಬೇಕು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ !’ – ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

‘ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರಿಂದಾದ ಪ್ರಾರ್ಥನೆಯು ತುಂಬಾ ಇಷ್ಟವಾಯಿತು ಮತ್ತು ‘ಪ್ರಾರ್ಥನೆಯನ್ನು ಹೇಗೆ ಮಾಡಬೇಕು ?’, ಎಂಬುದು ಅವರಿಂದ ಕಲಿಯಲು ಸಿಕ್ಕಿತು. ಅದಕ್ಕಾಗಿ ಎಲ್ಲ ಸಾಧಕರ ವತಿಯಿಂದ ನಾನು ಕೃತಜ್ಞತೆಯನ್ನು ವ್ಯಕ್ತ ಪಡಿಸುತ್ತೇನೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ