ಯುಗಾದಿಯೆಂದರೆ ಹಿಂದೂಗಳ ನವವರ್ಷಾರಂಭ ದಿನ ಮತ್ತು ಸೃಷ್ಟಿಯ ಆರಂಭ ದಿನ

ಯುಗಾದಿ ಎಂದರೆ ಹಿಂದೂಗಳ ನವವರ್ಷಾರಂಭದ ದಿನ ಮತ್ತು ಸೃಷ್ಟಿಯ ಆರಂಭದಿನ ! ಈ ದಿನದಂದು ಬ್ರಹ್ಮಾಂಡದಲ್ಲಿನ ಪ್ರಜಾಪತಿ ಈ ದೇವತೆಯ ಲಹರಿಗಳು ಪೃಥ್ವಿಯ ಮೇಲೆ ಅತ್ಯಧಿಕ ಪ್ರಮಾಣದಲ್ಲಿ ಬರುತ್ತವೆ. ಧರ್ಮಧ್ವಜದಿಂದ ವಾತಾವರಣದಲ್ಲಿನ ಪ್ರಜಾಪತಿ ಲಹರಿಗಳು ಕಲಶದಿಂದ ಮನೆಯಲ್ಲಿ ಪ್ರವೇಶಿಸುತ್ತವೆ. ಮರುದಿನದಿಂದ ಈ ಕಲಶದಲ್ಲಿನ ನೀರು ಕುಡಿಯಲು ತೆಗೆದುಕೊಳ್ಳಬೇಕು. ಧರ್ಮಧ್ವಜದ ಪೂಜೆಯಿಂದ ಪ್ರಜಾಪತಿ ಲಹರಿಗಳಿಂದ ಪೂಜಕನಿಗೆ ಮತ್ತು ಅವನ ಕುಟುಂಬದವರಿಗೆ ಲಾಭವಾಗುತ್ತದೆ. ಹಿಂದೂಗಳು ಈ ಹಬ್ಬವನ್ನು ಒಟ್ಟಿಗೆ ಸೇರಿ ಆಚರಿಸಿದರೆ ಅದರಿಂದ ಹಿಂದೂಸಂಘಟನೆ ಮತ್ತು ಸಂಸ್ಕೃತಿಯ ರಕ್ಷಣೆಯಾಗುತ್ತದೆ.

ಯುಗಾದಿಯ ಶುಭಮುಹೂರ್ತದಲ್ಲಿ ಮಾಡಬೇಕಾದ ಪ್ರತಿಜ್ಞೆ ಮತ್ತು ಪ್ರಾರ್ಥನೆ

ಶಾಲಿವಾಹನ ಎಂಬ ರಾಜನು ಶತ್ರುವಿನ ವಿರುದ್ಧ ಜಯಗಳಿಸಿದನು. ಶಕರು ಹೂಣರವನ್ನು ಸೋಲಿಸಿದರು. ಹಾಗಾಗಿ ಯುಗಾದಿಯು ಹಿಂದೂಗಳ ಯಶಸ್ಸಿನ ಮತ್ತು ವಿಜಯೋತ್ಸವದ ದಿನವಾಗಿದೆ. ಈ ಶುಭಮುರ್ಹೂತದಂದು ಮಾಡಿದ ಪ್ರತಿಜ್ಞೆ (ಸಂಕಲ್ಪ) ಮತ್ತು ಪ್ರಾರ್ಥನೆ ಫಲಪ್ರದವಾಗುವುದರಿಂದ ಕೆಳಗೆ ನೀಡಿದಂತೆ ಪ್ರತಿಜ್ಞೆ ಮತ್ತು ಪ್ರಾರ್ಥನೆ ಮಾಡಬೇಕು.

ಪ್ರತಿಜ್ಞೆ

೧. ‘ನಾವೆಲ್ಲ ಹಿಂದೂಗಳು ಯುಗಾದಿಯ ಶುಭಮುಹೂರ್ತ ದಲ್ಲಿ ಭಾರತ ಸಹಿತ ಇಡೀ ಪೃಥ್ವಿಯಲ್ಲಿ ಹಿಂದೂ ಧರ್ಮ ಸ್ಥಾಪಿಸಿ ಅಖಿಲ ಮನುಕುಲಕ್ಕೆ ಸುಸಂಸ್ಕ್ರತ ಮತ್ತು ಸುಖ-ಸಮೃದ್ಧ ಜೀವನ ನೀಡಲು ನಿಶ್ಚಯಿಸುತ್ತೇವೆ.

೨. ವ್ಯಷ್ಟಿ ಸಾಧನೆ, ಎಂದರೆ ನಾಮಜಪ ಧರ್ಮಾಚರಣೆ ಮಾಡಿ ಮತ್ತು ಸಮಷ್ಟಿ ಸಾಧನೆ, ಎಂದರೆ ಹಿಂದೂ ರಾಷ್ಟ್ರ ಹಾಗೂ ಧರ್ಮರಕ್ಷಣೆ ಮಾಡಿ ಹಿಂದೂ ಧರ್ಮ ಪತಾಕೆಯನ್ನು ಇಡೀ ವಿಶ್ವದಲ್ಲಿ ಹಾರಿಸೋಣ’, ಎಂದು ನಾವು ಬ್ರಹ್ಮಧ್ವಜದ ಎದುರು ಪ್ರತಿಜ್ಞೆ ಮಾಡುತ್ತೇವೆ.’

ಪ್ರಾರ್ಥನೆ

‘ಹೇ ಬ್ರಹ್ಮದೇವ, ಹೇ ವಿಷ್ಣು, ಈ ಬ್ರಹ್ಮಧ್ವಜದ ಮಾಧ್ಯಮದಿಂದ ವಾತಾವರಣದಲ್ಲಿ ವಿದ್ಯಮಾನವಾಗಿರುವ ಪ್ರಜಾಪತಿ, ಸೂರ್ಯ ಮತ್ತು ಸಾತ್ತ್ವಿಕ ಲಹರಿಗಳನ್ನು ನಾವು ಗ್ರಹಿಸುವಂತಾಗಲಿ. ಅದರಲ್ಲಿ ಸಿಗುವ ಶಕ್ತಿಯ ಚೈತನ್ಯವು ಸತತವಾಗಿರಲಿ. ಅದೇ ರೀತಿ ನನಗೆ ಪ್ರಾಪ್ತವಾದ ಶಕ್ತಿಯು ನಮ್ಮಿಂದ ಸಾಧನೆಗಾಗಿ, ಗುರುಸೇವೆಗಾಗಿ, ಹಾಗೆಯೇ ರಾಷ್ಟ್ರ ಮತ್ತು ಧರ್ಮದ ಕಾರ್ಯಕ್ಕಾಗಿ ಉಪಯೋಗವಾಗಲಿ’ ಇದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ.

ಅಭ್ಯಂಗಸ್ನಾನ

ಶರೀರಕ್ಕೆ ಎಣ್ಣೆಯನ್ನು ಹಚ್ಚಿ ಅದನ್ನು ತಿಕ್ಕಿ ತ್ವಚೆಯಲ್ಲಿ ಇಂಗಿಸಿ ನಂತರ ಬಿಸಿ ನೀರಿನಿಂದ ಸ್ನಾನ ಮಾಡುವುದೆಂದರೆ ಅಭ್ಯಂಗಸ್ನಾನ. ಯುಗಾದಿ ಪಾಡ್ಯದಂದು ಮುಂಜಾನೆ ಬೇಗನೇ ಎದ್ದು ಮೊದಲು ಅಭ್ಯಂಗ ಸ್ನಾನವನ್ನು ಮಾಡಬೇಕು. ಅಭ್ಯಂಗ ಸ್ನಾನ ಮಾಡುವಾಗ ದೇಶಕಾಲ ಕಥನ ಮಾಡಬೇಕು. ಬ್ರಹ್ಮದೇವನ ಜನ್ಮವಾದಾಗಿನಿಂದ ಇಲ್ಲಿಯವರೆಗೆ ಬ್ರಹ್ಮದೇವನ ಎಷ್ಟು ವರ್ಷಗಳಾದವು; ಯಾವ ವರ್ಷದಲ್ಲಿನ ಯಾವ ಮತ್ತು ಎಷ್ಟನೆಯ ಮನ್ವಂತರವು ನಡೆದಿದೆ; ಈ ಮನ್ವಂತರದಲ್ಲಿನ ಎಷ್ಟನೆಯ ಮಹಾಯುಗ ಮತ್ತು ಆ ಮಹಾಯುಗದಲ್ಲಿನ ಯಾವ ಉಪಯುಗ ನಡೆದಿದೆ, ಇವೆಲ್ಲವುಗಳ ಉಲ್ಲೇಖವು ದೇಶಕಾಲಕಥನದಲ್ಲಿ ಇರುತ್ತದೆ. ಈ ರೀತಿ ದೇಶಕಾಲ ಕಥನ ಮಾಡುವುದಿರುತ್ತದೆ. ಇದರಿಂದ ಇದಕ್ಕಿಂತ ಮೊದಲು ಎಷ್ಟು ದೊಡ್ಡ ಕಾಲವು ಗತಿಸಿದೆ ಮತ್ತು ಉಳಿದ ಕಾಲವೂ ಎಷ್ಟು ದೊಡ್ಡ ದಾಗಿದೆ ಎನ್ನುವುದರ ಕಲ್ಪನೆಯು ಬರುತ್ತದೆ. ‘ನಾನು ಬಹಳ ದೊಡ್ಡವನಾಗಿದ್ದೇನೆ’ ಎಂದು ಪ್ರತಿಯೊಬ್ಬನಿಗೂ ಅನಿಸುತ್ತಿರುತ್ತದೆ;

ತೋರಣವನ್ನು ಕಟ್ಟುವುದು

ಸ್ನಾನದ ಬಳಿಕ ಮಾವಿನ ಎಲೆಯ ತೋರಣವನ್ನು ತಯಾರಿಸಿ ಕೆಂಪು ಹೂವುಗಳೊಂದಿಗೆ ಕಟ್ಟಬೇಕು; ಏಕೆಂದರೆ ಕೆಂಪು ಬಣ್ಣ ಶುಭ ಸೂಚಕವಾಗಿದೆ.