ಭಾರತದ ಮೇಲೆ ಹತ್ಯೆ ಆರೋಪ ಹೊರಿಸಿದ ಕೆನಡಾ; ಭಾರತದ ಉನ್ನತ ಅಧಿಕಾರಿಗಳಿಗೆ ದೇಶ ತೊರೆಯುವಂತೆ ಆದೇಶ !

ಜೂನ್‌ನಲ್ಲಿ ಕೆನಡಾದ ಸರ್ರೆ ನಗರದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಪ್ರಕರಣದಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿ ಕೆನಡಾದ ಭಾರತೀಯ ಉಚ್ಚಾಯುಕ್ತರನ್ನು 5 ದಿನಗಳೊಳಗೆ ದೇಶವನ್ನು ತೊರೆಯುವಂತೆ ಆದೇಶಿಸಿದೆ.

ಶ್ರೀಲಂಕಾದಿಂದ ಮತ್ತೊಮ್ಮೆ ಚೀನಾದ ಬೇಹುಗಾರಿಕೆ ಹಡಗನ್ನು ಬಂದರಿನಲ್ಲಿ ನಿಲ್ಲಿಸಲು ಅನುಮತಿ !

ಶ್ರೀಲಂಕಾ ಮತ್ತೊಮ್ಮೆ ಚೀನಾದ ಬೇಹುಗಾರಿಕಾ ಹಡಗಿಗೆ ಕೊಲಂಬೊ ಬಂದರಿನಲ್ಲಿ ನಿಲ್ಲಿಸಲು ಅನುಮತಿ ನೀಡಿ ಭಾರತಕ್ಕೆ ದ್ರೋಹವೆಸಗಿದೆ. ಕಳೆದ ವರ್ಷವೂ ಭಾರತದ ವಿರೋಧದ ನಂತರ ಶ್ರೀಲಂಕಾ ಚೀನಾದ ಬೇಹುಗಾರಿಕೆ ಮಾಡುವ ಹಡಗನ್ನು ಹಂಬನಟೊಟಾ ಬಂದರಿನಲ್ಲಿ ನಿಲ್ಲಿಸುವ ಅನುಮತಿ ನೀಡಿತ್ತು.

ಹಿಂದೂ ಮಹಾಸಾಗರದಲ್ಲಿ ಚೀನಾದ ಸವಾಲನ್ನು ಎದುರಿಸಲು ಭಾರತೀಯ ನೌಕಾಪಡೆಯಿಂದ ಪ್ರಯತ್ನ !

ಭಾರತೀಯ ನೌಕಾಪಡೆಯು ತನ್ನ ಬಲವನ್ನು ವೇಗವಾಗಿ ಹೆಚ್ಚಿಸುತ್ತಿದೆ. 68 ಹೊಸ ಯುದ್ಧನೌಕೆಗಳನ್ನು ಖರೀದಿಸಲು ಬೇಡಿಕೆ ಇಡಲಾಗಿದೆ. ಇದಕ್ಕಾಗಿ 2 ಲಕ್ಷ ಕೋಟಿ ಖರ್ಚು ಮಾಡಲಾಗುವುದು. ಹಿಂದಿ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಸವಾಲುಳೇ ಇದಕ್ಕೆ ಕಾರಣವಾಗಿದೆ.

ಪಾಶ್ಚಿಮಾತ್ಯ ದೇಶಗಳು ಸರಿ ಇಲ್ಲ, “ಈ ಮನಸ್ಥಿತಿಯಿಂದ ಹೊರ ಬರಬೇಕಾಗಿದೆ ! – ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ

ನನ್ನ ಅಭಿಪ್ರಾಯದಲ್ಲಿ ನಮಗೆ ‘ಹಿಂದಿನ ಕಾಲದ ಘಟನೆಗಳಿಂದ ನಿರ್ಮಾಣವಾಗಿರುವ ಪಾಶ್ಚಿಮಾತ್ಯ ದೇಶಗಳು ಸರಿ ಇಲ್ಲ, ಅವು ಅಭಿವೃದ್ದಿಶೀಲ ರಾಷ್ಟ್ರಗಳ ವಿರುದ್ಧವಾಗಿವೆ” ಎಂಬ ಮನಸ್ಥಿತಿಯಿಂದ ಹೊರಬರಬೇಕು ಎಂದು ಭಾರತದ ವಿದೇಶಾಂಗ ಸಚಿವ ಡಾ.ಎಸ್,ಜೈಶಂಕರ ಇವರು ಹೇಳಿದರು.

ನೂತನ ಸಂಸತ್‌ ಭವನದ ಪ್ರಾಂಗಣದಲ್ಲಿ ರಾಷ್ಟ್ರದ್ವಜಾರೋಹಣ !

ಇಲ್ಲಿನ ನೂತನ ಸಂಸತ್‌ ಭವನದ ಪ್ರಾಂಗಣದಲ್ಲಿ ಸೆಪ್ಟೆಂಬರ್‌ ೧೭ ರಂದು ಉಪರಾಷ್ಟ್ರಪತಿ ಜಗದೀಪ ಧನಖಡ ಇವರ ಹಸ್ತದಿಂದ ಧ್ವಜಾರೋಹಣ ಮಾಡಲಾಯಿತು. ಈ ಸಮಯದಲ್ಲಿ ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಇವರೂ ಉಪಸ್ಥಿತರಿದ್ದರು.

‘ನೇಪಾಳದ ಕಡೆಗೆ ಈಗಾಗಲೇ ವಿದ್ಯುತ್ ಕೊರತೆ ಇದ್ದಾಗ ಅದನ್ನು ಭಾರತಕ್ಕೆ ಏಕೆ ಮಾರುತ್ತಿದೆ ? (ಅಂತೆ) – ನೇಪಾಳದಲ್ಲಿನ ಚೀನಾದ ರಾಯಭಾರಿ ಚೆನ ಸೊಂಗ

‘ನೇಪಾಳವು ಏನು ಮಾಡಬೇಕು ಮತ್ತು ಏನು ಮಾಡಬಾರದು, ಎಂಬುದನ್ನು ಹೇಳುವ ಅಧಿಕಾರವನ್ನು ಚೀನಾಗೆ ಯಾರು ನೀಡಿದರು ? ಎಂಬ ಪ್ರಶ್ನೆಯನ್ನು ನೇಪಾಳದ ಜನತೆಯು ಚೀನಾಗೆ ಕೇಳಬೇಕು !

ಲಂಡನ್ ನಲ್ಲಿ ಐತಿಹಾಸಿಕ “ಇಂಡಿಯಾ ಕ್ಲಬ್” ಬಂದ್ !

ಇಲ್ಲಿಯ ಐತಿಹಾಸಿಕ “ಇಂಡಿಯಾ ಕ್ಲಬ್’ ಅನ್ನು ಸೆಪ್ಟೆಂಬರ್ ೧೭ ರಿಂದ ಮುಚ್ಚಲಾಗಿದೆ. ಈ ಕ್ಲಬ್ ಭಾರತದ ಸ್ವಾತಂತ್ಯ್ರ ಚಳುವಳಿಗೆ ಸಂಬಂಧಿಸಿತ್ತು. ಈ ಸ್ಥಳದಲ್ಲಿ ಅನೇಕ ಸ್ವಾತಂತ್ಯ್ರವೀರರು, ಕ್ರಾಂತಿಕಾರರು ಇರುತ್ತಿದ್ದರು ಹಾಗೂ ಬಂದುಹೋಗಿ ಮಾಡುತ್ತಿದ್ದರು.

ಕೆನಡಾವು ಭಾರತದೊಂದಿಗಿನ ಮುಕ್ತ ವ್ಯಾಪಾರದ ಬಗೆಗಿನ ಚರ್ಚೆಯನ್ನು ಮುಂದೂಡಿತು !

ಕೆನಡಾದ ಪ್ರಧಾನಿ ಜಸ್ಟಿನ ಟ್ರುಡೊರವರ ಭಾರತದ್ವೇಷಿ ಹಾಗೂ ಖಲಿಸ್ತಾನಪ್ರೇಮಿ ಮಾನಸಿಕತೆಯು ಎಲ್ಲಿಯವರೆಗೆ ನಷ್ಟ ಆಗುವುದಿಲ್ಲವೋ ಅಲ್ಲಿಯವೆರೆಗೆ ಕೆನಡಾದಿಂದ ಯಾವುದೇ ಅಪೇಕ್ಷೆಯನ್ನಿಡುವುದು ವ್ಯರ್ಥವೇ ಆಗಿದೆ !

ಶ್ರೀರಾಮ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಆಸಕ್ತಿ ತೋರಿಸಿದ ದಕ್ಷಿಣ ಕೊರಿಯಾ !

ದಕ್ಷಿಣ ಕೊರಿಯಾಗೆ ಅಯೋಧ್ಯೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿಯೂ ಅತ್ಯಂತ ಮಹತ್ವದ್ದಾಗಿದೆ. ಭಾರತ ಸರಕಾರವು ದಕ್ಷಿಣ ಕೊರಿಯಾಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಗೆ ಆಹ್ವಾನಿಸಿದರೆ ಭಾಗವಹಿಸಲಿದೆ

ಸನಾತನವನ್ನು ಮುಗಿಸಲು ನೋಡುವ ‘ಘಮಂಡಿಯಾ’ (ದುರಹಂಕಾರಿ) ಮೈತ್ರಿಕೂಟವನ್ನು ತಡೆಯಿರಿ ! – ಪ್ರಧಾನಿ ಮೋದಿ

ಭಾರತದಲ್ಲಿ ದೇಶ ಮತ್ತು ಸಮಾಜದಲ್ಲಿ ಬಿರುಕು ಮೂಡಿಸುವ ಕೆಲಸದಲ್ಲಿ ತೊಡಗಿರುವ ಕೆಲವು ಪಕ್ಷಗಳಿವೆ. ಅವರು ಒಟ್ಟಾಗಿ ಸೇರಿ ‘ಐ.ಏನ್.ಡಿ.ಐ.ಎ.’ (ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲೈನ್ಸ್ – ಇಂಡಿಯಾ) ಹೆಸರಿನ ಒಂದು ಮೈತ್ರಿಕೂಟ ಮಾಡಿಕೊಂಡಿದೆ.