‘ಅರಾಮ್ ಕೊ’ ಎಂಬ ವಿಶ್ವದ ಅತಿ ದೊಡ್ಡ ತೈಲ ಸಂಸ್ಥೆಯ ಮೇಲೆ ದಾಳಿ

ಯೆಮೆನ್‌ನ ಕ್ಷಿಪಣಿಗಳಿಂದ ತತ್ತರಿಸಿದ ಸೌದಿ ಅರೇಬಿಯಾ

ರಿಯಾದ್ (ಸೌದಿ ಅರೇಬಿಯಾ) – ಯೆಮೆನ್ ಸೌದಿ ಅರೇಬಿಯಾದ ಮೇಲೆ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಲ್ಲಿ ಜಿಜಾನ್ ಕೈಗಾರಿಕಾ ನಗರದ ‘ಅರಾಮ್ ಕೊ’ ಸಂಸ್ಥೆಗೆ ಸಂಬಂಧಿಸಿದ ತೈಲ ಸೌಲಭ್ಯ ಕೇಂದ್ರವೊಂದಕ್ಕೆ ಹಾನಿಯಾಗಿದೆ. ಈ ದಾಳಿಯ ನಂತರ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತು. ಯಾನ್ಬು ಪ್ರಾಂತ್ಯಕ್ಕೆ ತುರ್ತು ಪರಿಸ್ಥಿತಿಯ ಎಚ್ಚರಿಕೆಯನ್ನು ಘೋಷಿಸಲಾಯಿತು. ಯೆಮೆನ್‌ನ ದಾಳಿಗೆ ಪ್ರತ್ಯುತ್ತರವಾಗಿ ಜುಲೈ ೨೪ ರ ರಾತ್ರಿ ಸೌದಿ ಅರೇಬಿಯಾವು ಯೆಮೆನ್‌ನ ಹೂತಿ ಬಂಡುಕೋರರ ನಿಯಂತ್ರಣದಲ್ಲಿರುವ ಹೊದೈದಾ ನಗರದ ಮೇಲೆ ದಾಳಿ ನಡೆಸಿತು. ಇದರ ಕುರಿತು ಹೂತಿ ವಿದೇಶಾಂಗ ಸಚಿವಾಲಯವು ‘ಸೌದಿ ಈ ದಾಳಿಗೆ ಭಾರೀ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದೆ. ಇದರಿಂದಾಗಿ ಯೆಮೆನ್ ಮತ್ತು ಸೌದಿ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ಉತ್ತುಂಗಕ್ಕೆ ತಲುಪಿದೆ.