ನವ ದೆಹಲಿ – ಭಾರತ ಮ್ಯಾನಮಾರ್ ಗಡಿಯಲ್ಲಿ ವಿದ್ರೋಹಿಗಳಿಂದ ನಿರ್ಮಿಸಲಾದ ಕೇಂದ್ರದಲ್ಲಿ ಮ್ಯಾನ್ಮಾರದಿಂದ ವೈಮಾನಿಕದಾಳಿ ನಡೆಸಿದೆ. ಈ ದಾಳಿಯ ನಂತರ ಮಿಜೋರಾಂದಲ್ಲಿ ಹೈಅಲರ್ಟ್ ನ ಆದೇಶ ನೀಡಲಾಗಿದೆ. ಈ ವೈಮಾನಿಕ ದಾಳಿಯಲ್ಲಿ ಎಷ್ಟು ಬಂಡಾಯಗಾರರು ಹತರಾಗಿದ್ದಾರೆ ? ಇದರ ಮಾಹಿತಿ ಇನ್ನೂ ದೊರೆತಿಲ್ಲ. ಈಗ ಮ್ಯಾನ್ಮಾರದಲ್ಲಿನ ಪರಿಸ್ಥಿತಿ ಜಟಿಲವಾಗುತ್ತಿದೆ.
ಬಂಡಾಯಗಾರರಿಂದ ಸೈನ್ಯಕ್ಕೆ ಸವಾಲು !
ಮ್ಯಾನ್ಮಾರದಲ್ಲಿನ ಸೈನ್ಯದ ಅಧಿಕಾರಕ್ಕೆ ಬಂಡಾಯಗಾರರ ಗುಂಪಿನ ಸವಾಲನ್ನು ಎದುರಿಸಬೇಕಾಗುತ್ತದೆ. ಭಾರತ ಮ್ಯಾನ್ಮಾರ್ ಗಡಿಯ ಹತ್ತಿರದ ಉತ್ತರಕ್ಕೆ ಶಾನ ರಾಜ್ಯದಲ್ಲಿ ಈ ಹಿಂದೆ ಭಯಾನಕ ಚಕಮಕಿ ನಡೆದಿತ್ತು. ೨೦೨೧ ರಲ್ಲಿ ನಡೆದಿರುವ ಅಧಿಕಾರ ಬದಲಾವಣೆಯ ನಂತರ ದೇಶದಲ್ಲಿ ಸೈನ್ಯದ ಅಧಿಕಾರ ಸ್ಥಾಪಿತವಾಯಿತು. ಮ್ಯಾನ್ಮಾರದ ಸೈನ್ಯದಿಂದ ನೇಮಕವಾಗಿರುವ ರಾಷ್ಟ್ರಪತಿಯಿಂದ ಒಂದು ಮನವಿ ಪ್ರಸಾರ ಮಾಡಿ ಬಂಡಾಯಗಾರರನ್ನು ಹೆಚ್ಚು ಪ್ರಭಾವಿಯಾಗಿ ನಿಭಾಯಿಸಿದೆ ಇರುವುದರಿಂದ ವಿಫಲವಾಗಿರುವುದರಿಂದ ದೇಶದ ವಿಭಜನೆ ಆಗುವ ಅಪಾಯ ಕಾದಿದೆ ಎಂದು ಒಪ್ಪಿಕೊಂಡಿದ್ದಾರೆ.
ಗಡಿಯ ಭಾಗದಲ್ಲಿ ಬಂಡಾಯಗಾರರ ನಿಯಂತ್ರಣ !
ಸರಕಾರದ ವಿರೋಧಿ ಬಂಡಾಯಗಾರರ ಗುಂಪಿನಿಂದ ೧೦೦ ಕ್ಕೂ ಹೆಚ್ಚಿನ ಸೈನ್ಯದ ಕೇಂದ್ರಗಳ ಮೇಲೆ ನಿಯಂತ್ರಣ ಪಡೆದಿದೆ. ಗಡಿಯ ಹೊರಗೆ ವ್ಯಾಪಾರಕ್ಕೆ ಅನುಮತಿ ನೀಡುವ ಮತ್ತು ಶೇಕಡಾ ೪೦ ರಷ್ಟು ವಸೂಲಿಯ ಮೂಲವಾಗಿರುವ ಮುಖ್ಯ ಗಡಿಯ ಕ್ರಾಸಿಂಗ್ ನಲ್ಲಿ ಸರಕಾರ ನಿಯಂತ್ರಣ ಕಳೆದುಕೊಳ್ಳುತ್ತಿದೆ. ಚೀನಾದಿಂದ ಎರಡು ಕಡೆಯಿಂದ ಯುದ್ಧ ನಿಲ್ಲಿಸಲು ಕರೆ ನೀಡಿದೆ. ಚೀನಾವು ಮ್ಯಾನ್ಮಾರದ ದುರ್ಗಮ ಪ್ರದೇಶದಲ್ಲಿ ವಿದ್ಯುತ್ ದ ಮೂಲಭೂತ ಸೌಲಭ್ಯಕ್ಕಾಗಿ ಅಬ್ಜಗಟ್ಟಲೆ ಡಾಲರ್ ಬಂಡವಾಳ ಹೂಡಿದೆ.
೯೦ ಸಾವಿರ ಜನರು ಸ್ಥಳಾಂತರ !
ಸೈನ್ಯ ಮತ್ತು ಬಂಡಾಯಗಾರರ ನಡುವಿನ ಹೆಚ್ಚುತ್ತಿರುವ ಸಂಘರ್ಷದಿಂದ ಸುಮಾರು ೯೦ ಸಾವಿರ ಜನರು ಸ್ಥಳಾಂತರಿತರಾಗಿದ್ದಾರೆ. ವಿಶ್ವ ಸಂಸ್ಥೆಯ ಮಾಹಿತಿ ಪ್ರಕಾರ ಗುಂಡಿನ ದಾಳಿ ಮತ್ತು ವೈಮಾನಿಕ ದಾಳಿ ನಡೆಯುತ್ತಿರುವ ಶಾನ ರಾಜ್ಯದಲ್ಲಿ ಸುಮಾರು ೫೦ ಸಾವಿರ ಜನರು ಸ್ಥಳಾಂತರಿತರಾಗಿದ್ದಾರೆ. ಕೆಲವರು ಚೀನಾದಲ್ಲಿ ಆಶ್ರಯ ಪಡೆದಿದ್ದಾರೆ. ನೆರೆಯ ಸಾಗಿಂಗ್ ಮತ್ತು ಕಾಚಿನ್ ಈ ಪ್ರದೇಶದಲ್ಲಿ ೪೦ ಸಾವಿರಗಿಂತಲೂ ಹೆಚ್ಚಿನ ಜನರು ಸ್ಥಳಾಂತರಿತರಾಗಿದ್ದಾರೆ.