ಖಲಿಸ್ತಾನಿ ಭಯೋತ್ಪಾದಕ ಪನ್ನುನ ಬೆದರಿಕೆನಂತರ ಟೊರಂಟೊ (ಕೆನಡಾ) ವಿಮಾನನಿಲ್ದಾಣದಲ್ಲಿ ೧೦ ಜನರ ವಿಚಾರಣೆ !

ಓಟಾವಾ (ಕೆನಡಾ) – ‘ಸಿಖ್ ಫಾರ್ ಜಸ್ಟೀಸ್‘ ಈ ನಿಷೇದಿತ ಖಲಿಸ್ತಾನಿ ಸಂಘಟನೆಯ ಮುಖ್ಯಸ್ಥ ಗುರುಪತವಂತಸಿಂಗ್ ಪನ್ನು ‘ನವೆಂಬರ್ ೧೯ ರಂದು ಏರ್ ಇಂಡಿಯಾದ ವಿಮಾನಗಳನ್ನು ವಿಶ್ವ ಮಟ್ಟದಲ್ಲಿ ಗುರಿಯಾಗಿಸಲಾಗುವುದು ಮತ್ತು ಅವುಗಳನ್ನು ಹಾರಲು ಬಿಡುವುದಿಲ್ಲ‘, ಎಂದು ಬೆದರಿಕೆ ಹಾಕಿರುವ ವೀಡಿಯೋವನ್ನು ಪ್ರಸಾರ ಮಾಡಿದ್ದರು. ಇದರಲ್ಲಿ ಅವನು ನವೆಂಬರ್ ೧೯ ರಂದು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣವನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದ್ದನು. ‘ನವೆಂಬರ್ ೧೯ ರಂದು ವಿಶ್ವಕಪ್ ಕ್ರಿಕೆಟ್ ಸ್ಪರ್ಧೆಯ ಅಂತಿಮ ಹೋರಾಟ ನಡೆಯುವ ದಿನ’, ಎಂದು ಹೇಳಿದ್ದ. ಈ ಹಿನ್ನಲೆಯಲ್ಲಿ ಕೆನಡಾದ ಭದ್ರತಾ ದಳವು ಭದ್ರತೆಯನ್ನು ಹೆಚ್ಚಿಸಿದೆ.ಈ ಬೆದರಿಕೆಯ ಸಂದರ್ಭದಲ್ಲಿ ಭಾರತವು ಕೆನಡಾದೊಂದಿಗೆ ಚರ್ಚಿಸಿದೆ.ಇದರ ನಂತರ ನವೆಂಬರ್ ೧೦ ರಂದು ಕೆನಡಾದ ಟೊರಂಟೊ ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿರುವ ೧೦ ಜನರನ್ನು ಕಠಿಣ ತಪಾಸಣೆಗೆ ಒಳಪಡಿಸಿದೆ ಮತ್ತು ಅವರನ್ನು ನೇರವಾಗಿ ವಿಮಾನವನ್ನು ಹತ್ತದಂತೆ ತಡೆಯಲಾಯಿತು.ಈ ತನಿಖೆಯಲ್ಲಿ ಏನು ಫಲಿತಾಶ ಸಿಕ್ಕಿದೆ ,ಇದು ಸ್ಪಷ್ಟವಾಗಿ ಗೊತ್ತಾಗಿಲ್ಲ.ಇವರೆಲ್ಲರೂ ಕೆನಡಾದಿಂದ ಏರ್ ಇಂಡಿಯಾ ವಿಮಾನದಲ್ಲಿ ಹೋಗುವವರಿದ್ದರು