ಜನವರಿ 2024 ರಲ್ಲಿ ಚೀನಾದ ಮತ್ತೊಂದು ಬೇಹುಗಾರಿಕಾ ಹಡಗು ಶ್ರೀಲಂಕಾಕ್ಕೆ ಬರಲಿದೆ !

ಕೊಲಂಬೊ (ಶ್ರೀಲಂಕಾ) – ಚೀನಾದ ಮತ್ತೊಂದು ಬೇಹುಗಾರಿಕಾ ಹಡಗು ‘ಶಿಯಾಂಗ್ ಯೆಂಗ್ ಹಾಂಗ್ -3’ ಜನವರಿ 2024 ರಲ್ಲಿ ಶ್ರೀಲಂಕಾಕ್ಕೆ ಆಗಮಿಸಲಿದೆ. ಇಲ್ಲಿಯವರೆಗೆ, ಚೀನಾದ ಬೇಹುಗಾರಿಕಾ ಹಡಗು ‘ಶಿ ಯಾನ್-6’ ಮತ್ತು ಇನ್ನೊಂದು ಹಡಗು ಶ್ರೀಲಂಕಾ ಬಂದರಿಗೆ ಬಂದು ಹೋಗಿದೆ. ಭಾರತ ಎರಡು ಬಾರಿ ಆಕ್ಷೇಪಿಸಿದ ಬಳಿಕವೂ ಶ್ರೀಲಂಕಾ ಈ ಹಡಗುಗಳನ್ನು ಶ್ರೀಲಂಕಾ ಬಂದರಿಗೆ ಪ್ರವೇಶಿಸಲು ಅವಕಾಶ ನೀಡಿತ್ತು. ‘ಶಿಯಾಂಗ್ ಯೆಂಗ್ ಹಾಂಗ್ -3’ ಹಡಗನ್ನು 2021 ರಲ್ಲಿ, ಇಂಡೋನೇಶಿಯಾ ತನ್ನ ರಹಸ್ಯ ಮಾಹಿತಿಯನ್ನು ಚೀನಾದ ಮಿಲಿಟರಿಗೆ ಕಳುಹಿಸುವಾಗ ಬಂಧಿಸಿತ್ತು.

ಯುದ್ಧಕ್ಕಾಗಿ ಜಲಾಂತರ್ಗಾಮಿ ನೌಕೆಗಳ ಮಾರ್ಗಕ್ಕೆ ನಕ್ಷೆ ನಿರ್ಮಿಸುವುದು ಚೀನಾದ ಉದ್ದೇಶ !

ಈ ನಿಟ್ಟಿನಲ್ಲಿ ಶ್ರೀಲಂಕಾ ರಕ್ಷಣಾ ತಜ್ಞರು, ಚೀನಾದ ಹಡಗುಗಳು ನಿರಂತರವಾಗಿ ಶ್ರೀಲಂಕಾಕ್ಕೆ ಆಗಮಿಸುತ್ತಿರುವುದರ ಹಿಂದೆ 2 ಕಾರಣಗಳಿವೆ. ಮೊದಲನೆಯದು ಸಮುದ್ರ ಯುದ್ಧಕ್ಕಾಗಿ ಸ್ವಂತ ಜಲಾಂತರ್ಗಾಮಿ ನೌಕೆಗಳಿಗಾಗಿ ಸಮುದ್ರ ನೆಲೆಯ ನಕ್ಷೆ ರೂಪಿಸುವುದು ಮತ್ತು ಎರಡನೆಯದು ಸಮುದ್ರದ ಖನಿಜಗಳನ್ನು ಶೋಧಿಸುವುದಾಗಿದೆ. ಭಾರತದ ಗಡಿಯಲ್ಲಿ ಸಂಶೋಧನೆಯ ಹೆಸರಿನಲ್ಲಿ ಚೀನಾ ಈ ಕೆಲಸ ಮಾಡುತ್ತಿದೆ. ಆದ್ದರಿಂದ ಚೀನಾದ ನಿಯೋಜನೆಯಂತೆ ಪ್ರತಿ ವರ್ಷ ಅಂತಹ 2 ಹಡಗುಗಳು ಶ್ರೀಲಂಕಾಕ್ಕೆ ಬರುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಭಾರತದ ವಿರೋಧ ಇರುವಾಗಲೂ ಶ್ರೀಲಂಕಾ ಚೀನಾದ ಹಡಗುಗಳಿಗೆ ಅನುಮತಿ ನೀಡುತ್ತದೆ. ಇದರಿಂದ ಚೀನಾದ ತುಲನೆಯಲ್ಲಿ ಭಾರತದ ಒತ್ತಡದ ಪರಿಣಾಮ ಶ್ರೀಲಂಕಾ ಮೇಲೆ ಪ್ರಭಾವ ಬೀರುತ್ತಿಲ್ಲ ಎಂದು ಕಂಡು ಬರುತ್ತಿದೆ. ಈ ಪರಿಸ್ಥಿತಿ ಭಾರತಕ್ಕೆ ಅಪಾಯಕಾರಿ!