ಸಮಾಲೋಚನೆಯ ಸಮಯದಲ್ಲಿ ಮೂಲ ವಿಷಯವನ್ನು ಪಕ್ಕಕ್ಕೆ ಸರಿಸಿ ವ್ಯಕ್ತಪಡಿಸಿರುವ ರಾಷ್ಟ್ರ ಭಾವನೆ !
ಕೋಲಕಾತಾ (ಬಂಗಾಳ) – ಮಾಜಿ ಜಗಪ್ರಸಿದ್ಧ ಬ್ಯಾಟ್ಸ್ಮನ್ ಸುನಿಲ್ ಗಾವಸ್ಕರ್ ಇವರು ಭಾರತ ಮತ್ತು ದಕ್ಷಿಣ ಆಫ್ರಿಕಾ ಇವರಲ್ಲಿನ ಪಂದ್ಯದ ಸಮಯದಲ್ಲಿ ಭಾರತೀಯ ರಾಷ್ಟ್ರಧ್ವಜದ ವಿಡಂಬನೆ ಆಗಿರುವುದನ್ನು ಗಮನಕ್ಕೆ ತಂದು ಕೊಟ್ಟರು. ಪಂದ್ಯದ ಮಧ್ಯಂತರ ಸಮಯದಲ್ಲಿ ಸಮಾಲೋಚನೆ ಮಾಡುವಾಗ ಗಾವಸ್ಕರ್ ಹೇಳಿದರು, ಕ್ಷಮಿಸಿ ಆದರೆ ಈಗ ಒಂದು ದೃಶ್ಯದಿಂದ ನನ್ನ ಮನಸ್ಸು ವಿಚಲಿತವಾಗಿದೆ. ಈಗ ಮೈದಾನದಲ್ಲಿ ಕೆಲವು ಜನರು ಭಾರತೀಯ ರಾಷ್ಟ್ರಧ್ವಜದ ವಿಡಂಬನೆ ಮಾಡುವುದನ್ನು ನಾನು ನೋಡಿದೆ, ಅವರ ಕೈಯಲ್ಲಿರುವ ರಾಷ್ಟ್ರಧ್ವಜದ ಮೇಲೆ ಒಂದು ಕಂಪನಿಯ ಜಾಹೀರಾತು ಮಾಡಲಾಗಿತ್ತು. ಇದು ಬಹಳ ತಪ್ಪಾಗಿದೆ. ಈಗ ಆ ಜನರು ಕಾಣುತ್ತಿಲ್ಲ ; ಆದರೆ ನನ್ನ ಆಶಯ ಏನೆಂದರೆ ಪೊಲೀಸರು ಕೇವಲ ರಾಷ್ಟ್ರಧ್ವಜ ಅಷ್ಟೇ ಅಲ್ಲದೆ ಸಂಬಂಧಿತರಿಗೂ ಮತ್ತೆ ಈ ರೀತಿ ಮಾಡದಿರಲು ಎಚ್ಚರಿಕೆ ಕೂಡ ನೀಡಬೇಕು.
ಸಂಪಾದಕೀಯ ನಿಲುವುಅಂತರಾಷ್ಟ್ರೀಯ ಮಟ್ಟದಲ್ಲಿನ ಕ್ರಿಕೆಟ್ ಪಂದ್ಯದಲ್ಲಿ ಈ ರೀತಿಯ ರಾಷ್ಟ್ರನಿಷ್ಠೆ ತೋರಿಸುವುದು ಇದು ಸ್ತುತ್ಯವಾಗಿದೆ. ಇದರ ಬಗ್ಗೆ ಗಾಬಸ್ಕರ್ ಇವರಿಗೆ ಅಭಿನಂದನೆ ! |