ಕಲಾಪಗಳ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲು ನಿಷೇಧ

ನವ ದೆಹಲಿ – ನ್ಯಾಯಾಲಯವೆಂದರೆ ೨೪ ಗಂಟೆಗಳ ಕಾಲ ನಡೆಯುವ ಮನರಂಜನಾ ವಾಹಿನಿಯಲ್ಲ, ಎಂದು ಸರ್ವೋಚ್ಚ ನ್ಯಾಯಾಲಯ ತೀವ್ರ ಕಿಡಿಕಾರಿದೆ. ಪೂರ್ವಾನುಮತಿ ಪಡೆಯದೆ ನ್ಯಾಯಾಲಯದ ಕಲಾಪಗಳ ವೀಡಿಯೊ ಅಥವಾ ಆಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದಕ್ಕೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿತು. ಪತ್ರಕರ್ತೆ ಹರ್ಷಿತಾ ಗ್ರೋವರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವಾಗ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿತು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಮತ್ತು ನ್ಯಾಯಮೂರ್ತಿ ಜೋಯ್ ಮಾಲ್ಯಾ ಬಾಗಚಿ ಅವರ ಪೀಠವು ಈ ಆದೇಶ ನೀಡಿದೆ. ಸರ್ವೋಚ್ಚ ನ್ಯಾಯಾಲಯದ ಪ್ರಧಾನ ಕಾರ್ಯದರ್ಶಿ ಅಥವಾ ಸಂಬಂಧಪಟ್ಟ ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಅವರ ಪೂರ್ವಾನುಮತಿ ಪಡೆಯದೆ ನ್ಯಾಯಾಲಯದ ಕಲಾಪಗಳ ಯಾವುದೇ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಆದಾಗ್ಯೂ, ಈ ಆದೇಶದಿಂದ ಮಾಧ್ಯಮಗಳ ಸುದ್ದಿ ಸಂಗ್ರಹಣೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದೂ ನ್ಯಾಯಾಲಯ ತಿಳಿಸಿದೆ. ಕೇಂದ್ರ ಸರಕಾರದ ಪರ ವಾದ ಮಂಡಿಸಿದ ಮಹಾನ್ಯಾಯಾಭಿಕರ್ತ (ಅಟಾರ್ನಿ ಜನರಲ್) ತುಷಾರ್ ಮೆಹತಾ ಅವರೂ ಕೂಡ ಈ ವಿಷಯವನ್ನು ಬೆಂಬಲಿಸಿದರು.
ನಾನು ಹೇಳದೇ ಇರುವ ವಿಷಯಗಳು ಪತ್ರಿಕೆಗಳಲ್ಲಿ ನನ್ನ ಹೆಸರಿನಲ್ಲಿ ಪ್ರಕಟವಾಗಿದ್ದವು ! – ಮುಖ್ಯ ನ್ಯಾಯಮೂರ್ತಿ

ಈ ಸಮಯದಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರು ತಮ್ಮ ಸ್ವಂತ ಅನುಭವವನ್ನು ಹಂಚಿಕೊಳ್ಳುತ್ತಾ, ನಾನು ಸ್ವತಃ ಎಂದಿಗೂ ಹೇಳದ ಮಾತುಗಳು ಪತ್ರಿಕೆಗಳಲ್ಲಿ ನನ್ನ ಹೆಸರಿನಲ್ಲಿ ಪ್ರಕಟವಾದ ಅನುಭವ ನನಗೆ ಇತ್ತೀಚೆಗೆ ಆಯಿತು, ಎಂದು ಹೇಳಿದರು. ಒಂದು ಪ್ರಕರಣದಲ್ಲಿ ಅರ್ಜಿಯೇ ಸಲ್ಲಿಕೆಯಾಗದಿದ್ದರೂ, ‘ಮುಖ್ಯ ನ್ಯಾಯಮೂರ್ತಿಗಳು ವಿಚಾರಣೆಗೆ ನಿರಾಕರಿಸಿದರು’ ಎಂಬ ತಪ್ಪು ಸುದ್ದಿ ಪ್ರಸಾರವಾಗಿತ್ತು ಎಂದು ಅವರು ಉಲ್ಲೇಖಿಸಿದರು.
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ
ಪೋಷಕರು ಮತ್ತು ಹಿರಿಯರು ಇಂದಿನ ಯುವ ಪೀಳಿಗೆಯೊಂದಿಗೆ ಸಂವಾದ ನಡೆಸಬೇಕು! – ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್
ಸರಕಾರದೊಂದಿಗೆ ರಾಜಿ ಮಾಡಿಕೊಳ್ಳಬೇಕಿದ್ದರೆ, ೨೬ ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವ ಅಗತ್ಯವಿರಲಿಲ್ಲ! – Sonam Wangchuk
ಮುಖ್ಯ ಆರೋಪಿ ಬ್ರಿಜೇಂದ್ರ ಗುಪ್ತನನ್ನು ಬಿಹಾರದಿಂದ ಬಂಧಿಸಿದ ಪೊಲೀಸರು!
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ
ನಿಮ್ಮಿಂದಾಗಿ ದೇಶದ ಅಪಕೀರ್ತಿಯಾಯಿತು, ಕೋಟ್ಯಂತರ ರೂಪಾಯಿ ನಷ್ಟವಾಯಿತು !