ಬಾಂಗ್ಲಾದೇಶದಲ್ಲಿ ಶರಣಾಗುವಾಗ ನಾಚಿಕೆಯಾಗಲಿಲ್ಲವೇ? – Maulana Fazlur Rahman

ಮೌಲಾನಾ ಫಜ್ಲುರ್ ರೆಹಮಾನ್ ಅವರಿಂದ ಪಾಕಿಸ್ತಾನಿ ಸೇನೆಗೆ ಪ್ರಶ್ನೆ

(ಮೌಲಾನಾ ಎಂದರೆ ಇಸ್ಲಾಂ ಧರ್ಮದ ಪಂಡಿತ)

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಇಸ್ಲಾಮಿಕ್ ಪಕ್ಷ ‘ಜಮಿಯತ್ ಉಲೇಮಾ-ಎ-ಇಸ್ಲಾಂ (ಫಝಲ್)’ ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಅವರು ಮತ್ತೊಮ್ಮೆ ಪಾಕಿಸ್ತಾನಿ ಸೇನೆಯ ನಾಯಕತ್ವವನ್ನು ಟೀಕಿಸಿದ್ದಾರೆ. ‘ಮೌಲಾನಾ ಡೀಸೆಲ್’ ಎಂದೇ ಪ್ರಸಿದ್ಧರಾಗಿರುವ ಫಜ್ಲುರ್ ರೆಹಮಾನ್, “ಬಾಂಗ್ಲಾದೇಶದಲ್ಲಿ ಪಾಕಿಸ್ತಾನಿ ಸೇನೆಯು ಭಾರತೀಯ ಸೇನೆಯ ಮುಂದೆ ಶರಣಾದಾಗ ಅವರಿಗೆ ನಾಚಿಕೆಯಾಗಲಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೂ ಮುನ್ನ ಮೌಲಾನಾ ಫಜ್ಲುರ್ ಅವರು, “ನಿಮಗೆ ರಾಜಕೀಯವೇ ಮಾಡಬೇಕಿದ್ದರೆ ಸಮವಸ್ತ್ರ ಕಳಚಿ ಚುನಾವಣೆ ಸ್ಪರ್ಧಿಸಿ” ಎಂದು ಸೇನಾಧಿಕಾರಿಗಳಿಗೆ ಸವಾಲು ಹಾಕಿದ್ದರು.

ದೇಶವನ್ನು ರಕ್ಷಿಸುವ ಜವಾಬ್ದಾರಿ ಜನರದಲ್ಲ, ಸಂಬಳ ಪಡೆಯುವ ಸೈನಿಕರದ್ದು!

ಭಯೋತ್ಪಾದನೆಯ ವಿರುದ್ಧ ಹೋರಾಡಲು ಸಾಮಾನ್ಯ ನಾಗರಿಕರ ಸಶಸ್ತ್ರ ಗುಂಪುಗಳನ್ನು ರಚಿಸುವ ಬೇಡಿಕೆಯನ್ನು ಅವರು ತಿರಸ್ಕರಿಸಿದರು. ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, “ದೇಶವನ್ನು ರಕ್ಷಿಸುವ ಜವಾಬ್ದಾರಿ ಸಾಮಾನ್ಯ ನಾಗರಿಕರದಲ್ಲ, ಸರಕಾರಿ ಸಂಸ್ಥೆಗಳದ್ದು. ನೀವು (ಸೇನಾಪಡೆ) ನನ್ನ ಮೇಲೆ ನಿಮ್ಮ ರಕ್ತದ ಉಪಕಾರವನ್ನು ಏಕೆ ತೋರಿಸುತ್ತಿದ್ದೀರಿ? ನಿಮ್ಮ ಸೈನಿಕರು ಅದಕ್ಕಾಗಿಯೇ ಸಮವಸ್ತ್ರ ಧರಿಸಿದ್ದಾರೆ. ನಾವು ಬೆವರು ಸುರಿಸಿ ಸಂಪಾದಿಸಿದ ಹಣದಿಂದ ನೀಡುವ ತೆರಿಗೆಯಿಂದ ನೀವು ಸಂಬಳ ಪಡೆಯುತ್ತೀರಿ ಮತ್ತು ಆಯುಧಗಳನ್ನು ಹಿಡಿದು ಅವರೊಂದಿಗೆ ಹೋರಾಡಲು ನಮಗೆ ಹೇಳುತ್ತೀರಿ. ನಾನು ಯಾವುದೇ ಸಂಬಳ ಪಡೆಯುತ್ತಿಲ್ಲ. ನಾನು ಯಾವುದೇ ಸಶಸ್ತ್ರ ಗುಂಪುಗಳನ್ನು ಮಾಡುವುದಿಲ್ಲ” ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೇವಲ ಶರಣಾಗತಿ ಮಾತ್ರವಲ್ಲ, ಅವರ ಪ್ಯಾಂಟ್‌ಗಳನ್ನು ಬಿಚ್ಚಿಸಲಾಗಿತ್ತು. ಭಾರತವು ಆತ್ಮಘಾತುಕ ದಯೆ ತೋರಿ 92,000 ಪಾಕಿಸ್ತಾನಿ ಸೈನಿಕರನ್ನು ಬಿಡುಗಡೆ ಮಾಡಿತ್ತು!