ನವ ದೆಹಲಿ – ಭಾರತದಲ್ಲಿ ದೀಪಾವಳಿಯ ಆಚರಣೆ ನಡೆಯುತ್ತಿರುವಾಗ ಕಳೆದ ಅನೇಕ ವರ್ಷಗಳಿಂದ ವಿದೇಶಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ದೀಪಾವಳಿಯ ಆಚರಣೆ ನಡೆಯುತ್ತಿದೆ. ನವೆಂಬರ್ 8 ರಂದು ಬ್ರಿಟನ್ ನ ಪ್ರಧಾನ ಮಂತ್ರಿ ಋಷಿ ಸುನಕರವರು ತಮ್ಮ `10,ಡೌನಿಂಗ್ ಸ್ಟ್ರೀಟ್’ನಲ್ಲಿರುವ ನಿವಾಸಸ್ಥಳದಲ್ಲಿ ಪತ್ನಿ ಅಕ್ಷತಾರೊಂದಿಗೆ ದೀಪಾವಳಿಯನ್ನು ಆಚರಿಸಿದರು. ಈ ಸಮಯದಲ್ಲಿ ಅವರು ಅನೇಕ ಹಿಂದೂ ಗಣ್ಯರನ್ನು ಅಮಂತ್ರಿಸಿದ್ದರು. ಬ್ರಿಟನ್ ನ ಪ್ರಧಾನಮಂತ್ರಿ ಕಾರ್ಯಾಲಯವು ಸಾಮಾಜಿಕ ಮಾಧ್ಯಮಗಳಿಂದ `ಕತ್ತಲೆಯ ಮೇಲಿನ ಬೆಳಕಿನ ವಿಜಯದಿಂದಾಗಿಯೇ ಪ್ರಧಾನಮಂತ್ರಿ ಸುನಕರವರು ಹಿಂದೂ ಸಮಾಜದಲ್ಲಿನ ಜನರೊಂದಿಗೆ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ಸುನಕರವರು ಸಂಪೂರ್ಣ ಬ್ರಿಟನ್ ಹಾಗೂ ಜಗತ್ತಿಗೆ ದೀಪಾವಳಿಯ ಶುಭಾಶಯವನ್ನು ನೀಡಿದ್ದಾರೆ’ ಎಂದು ಹೇಳಿದೆ.
Tonight Prime Minister @RishiSunak welcomed guests from the Hindu community to Downing Street ahead of #Diwali – a celebration of the triumph of light over darkness.
Shubh Diwali to everyone across the UK and around the world celebrating from this weekend! pic.twitter.com/JqSjX8f85F
— UK Prime Minister (@10DowningStreet) November 8, 2023
ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರೂಡೊರವರು ದೀಪಾವಳಿಯನ್ನು ಆಚರಣೆ !
ಇದರಂತೆಯೇ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರೂಡೊರವರೂ ಭಾರತದೊಂದಿಗಿನ ಒತ್ತಡದ ಹಿನ್ನೆಲೆಯಲ್ಲಿ ದೀಪಾವಳಿಯನ್ನು ಆಚರಿಸಿದರು. ರಾಜಧಾನಿ ಒಟಾವದಲ್ಲಿನ ಪಾರ್ಲಮೆಂಟ್ ಹಿಲ್ ನಲ್ಲಿ ಟ್ರೂಡೊರವರು ದೀಪಪ್ರಜ್ವಲನೆ ಮಾಡಿದರು. ಇದರ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರ ಮಾಡಿ ಟ್ರೂಡೊರವರು, `ಕೆಲವು ದಿನಗಳಲ್ಲಿ ಸಂಪೂರ್ಣ ಜಗತ್ತು ದೀಪಾವಳಿಯನ್ನು ಆಚರಿಸಲಿದೆ. ಇದು ಕತ್ತಲೆಯ ಮೇಲಿನ ಬೆಳಕಿನ ವಿಜಯದ ಹಬ್ಬವಾಗಿದೆ, ಹೊಸ ಆಸೆಗಳ ಹಬ್ಬವಾಗಿದೆ. ನಮ್ಮೊಂದಿಗೆ ದೀಪಾವಳಿಯನ್ನು ಆಚರಿಸಿರುವ ಪ್ರತಿಯೊಬ್ಬರಿಗೂ ನಾನು ಅಭಾರಿಯಾಗಿದ್ದೇನೆ. ನಾನು ಈ ಹಬ್ಬವು ನಿಮ್ಮೆಲ್ಲರ ಆಯುಷ್ಯದಲ್ಲಿ ಹೋಸ ಪ್ರಕಾಶ ಹಾಗೂ ಆಸೆಯನ್ನು ತರಲಿ ಎಂದು ಆಶಿಸುತ್ತೇನೆ, ಎಂದು ಹೇಳಿದರು.
Later this week, people will celebrate Diwali and Bandi Chhor Divas – both of which symbolize the light we all need more of. To everyone at yesterday’s event on Parliament Hill: I hope the celebrations bring you optimism for the year ahead. Happy Diwali! Happy Bandi Chhor Divas! pic.twitter.com/WvmmgtiJR3
— Justin Trudeau (@JustinTrudeau) November 7, 2023
ಕೆನಡಾದ ಅಂಚೆ ಕಾರ್ಯಾಲಯದಿಂದ ಅಂಚೆ ಚೀಟಿ ಲೋಕಾರ್ಪಣೆ
ಕೆನಡಾದ ಅಂಚೆ ಕಾರ್ಯಾಲಯವು ದೀಪಾವಳಿಯ ನಿಮಿತ್ತ ಅಂಚೆ ಚೀಟಿಯನ್ನು ಪ್ರಕಾಶಿಸಿದೆ. ಕಳೆದ 5 ವರ್ಷಗಳಿಂದ ಅಂಚೆ ಕಾರ್ಯಾಲಯವು ಇಂತಹ ಅಂಚೆ ಚೀಟಿಗಳನ್ನು ಪ್ರಕಾಶಿತಗೊಳಿಸುತ್ತಿದೆ.
ಅಮೇರಿಕಾದ ಉಪರಾಷ್ಟ್ರಪತಿ ಕಮಲಾ ಹ್ಯಾರಿಸ್ ರವರ ಮನೆಯಲ್ಲಿ ದೀಪಾವಳಿ !
ಭಾರತೀಯ ಮೂಲದ ಅಮೇರಿಕಾದ ಉಪರಾಷ್ಟ್ರಪತಿ ಕಮಲಾ ಹ್ಯಾರಿಸ್ ರವರೂ ತಮ್ಮ ಅಧಿಕೃತ ಮನೆಯಲ್ಲಿ ದೀಪಾವಳಿಯನ್ನು ಆಚರಿಸಿದರು. ಹ್ಯಾರಿಸ್ ರವರು ಅತಿಥಿಗಳೊಂದಿಗೆ ಈ ಹಬ್ಬದ ಮಹತ್ವದ ಬಗ್ಗೆ ಚರ್ಚಿಸಿದರು. ಅವರು ಮಾತನಾಡುತ್ತ, ‘ಜಗತ್ತಿನಲ್ಲಿ ಅನೇಕ ವಿಷಯಗಳು ನಡೆಯುತ್ತಿರುವ ಸಮಯದಲ್ಲಿ ನಾವು ದೀಪಾವಳಿಯನ್ನು ಆಚರಿಸುತ್ತಿದ್ದೇವೆ. ಜಗತ್ತು ಒಂದು ಕಠಿಣ ಹಾಗೂ ಅಂಧಕಾರಮಯ ಕಾಲವನ್ನು ಕ್ರಮಿಸುತ್ತಿದೆ. ಈ ಹಬ್ಬವು ದೀಪಗಳನ್ನು ಹಚ್ಚಿ ಆಚರಿಸಲಾಗುವ ಹಬ್ಬವಾಗಿದೆ. ಈ ಹಬ್ಬವು ನಮಗೆ ಕತ್ತಲು ಹಾಗೂ ಬೆಳಕಿನ ನಡುವಿನ ಬೇಧವನ್ನು ತಿಳಿಸುತ್ತದೆ’ ಎಂದು ಹೇಳಿದರು.
ಅಟ್ಲಾಂಟಾ (ಅಮೇರಿಕಾ) ನಗರದ ಮಹಾಪೌರರಿಂದ ದೀಪಾವಳಿಯ ಆಚರಣೆ !
ಅಟ್ಲಾಂಟಾ(ಅಮೇರಿಕಾ)ದಲ್ಲಿ ಆಯೋಜಿಸಲಾಗಿದ್ದ ದೀಪಾವಳಿಯ ಮಹೋತ್ಸವದಲ್ಲಿ ನಗರದ ಮಹಾಪೌರ ಅಂದ್ರೆ ಡಿಕೆನ್ಸ್ ರವರು ಸಹಭಾಗಿಯಾಗಿದ್ದರು. ಈ ಸಮಯದಲ್ಲಿ ಡಿಕೆನ್ಸ್ ರವರು, ನಾವು ದೀಪಾವಳಿಯ ಆಚರಣೆಯಿಂದ ಆನಂದಗೊಂಡಿದ್ದೇವೆ ಎಂದು ಹೇಳಿದರು.