ಭಾವಸತ್ಸಂಗದ ಮಹತ್ವವನ್ನು ತಿಳಿಸುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆ !
‘೨೦೧೬ ರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನಕ್ಕನುಸಾರ ಸನಾತನದ ಸಾಧಕರಿಗಾಗಿ ರಾಷ್ಟ್ರೀಯ ಸ್ತರದಲ್ಲಿ ಭಾವಸತ್ಸಂಗ ಆರಂಭವಾಯಿತು. ವಾರದಲ್ಲಿ ಒಂದು ಬಾರಿ (ಪ್ರತಿ ಗುರುವಾರ) ನಡೆಯುವ ಈ ಭಾವಸತ್ಸಂಗದಲ್ಲಿ ಆಧ್ಯಾತ್ಮಿಕ ಕಥೆಗಳನ್ನು ಮತ್ತು ಅವುಗಳ ಭಾವಾರ್ಥವನ್ನು ಹೇಳಲಾಗುತ್ತದೆ. ಈ ಭಾವಸತ್ಸಂಗವನ್ನು ಸನಾತನದ ಭಾವವಿರುವ ಸಾಧಕಿಯರು ತೆಗೆದುಕೊಳ್ಳುತ್ತಾರೆ. ಭಾವಸತ್ಸಂಗದಲ್ಲಿ, ಭಾವಜಾಗೃತಿಗಾಗಿ ಹೇಗೆ ಪ್ರಯತ್ನಿಸಬೇಕು ? ಸಾಧನೆಯನ್ನು ಹೆಚ್ಚಿಸಲು ಯಾವ ಪ್ರಯತ್ನಗಳನ್ನು ಮಾಡಬೇಕು ? ಈ ಬಗ್ಗೆ ಮಾರ್ಗದರ್ಶನವನ್ನೂ ಮಾಡಲಾಗುತ್ತದೆ. ಈ ಭಾವಸತ್ಸಂಗದಿಂದ ಅನೇಕ ಸಾಧಕರಿಗೆ ಸಾಧನೆಯಲ್ಲಿ ಸಹಾಯವಾಗಿದೆ. ‘ಭಾವಸತ್ಸಂಗ ತೆಗೆದುಕೊಳ್ಳುವುದು ಅಥವಾ ಅದನ್ನು ಕೇಳುವುದು ಇದರಿಂದ ಸಾಧಕರಲ್ಲಿನ ಸೂಕ್ಷ್ಮ-ಊರ್ಜೆಯ (‘ಔರಾ’ದ) ಮೇಲೆ ಏನು ಪರಿಣಾಮವಾಗುತ್ತದೆ ?’, ಎಂಬುದನ್ನು ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ ಮಾಡಲು ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಈ ಉಪಕರಣವನ್ನು ಬಳಸಲಾಯಿತು. ಈ ಉಪಕರಣದಿಂದ ವಸ್ತು, ವಾಸ್ತು ಮತ್ತು ವ್ಯಕ್ತಿಯಲ್ಲಿನ ಸಕಾರಾತ್ಮಕ ಮತ್ತು ನಕಾರಾತ್ಮಕ ಊರ್ಜೆಯನ್ನು ಅಳೆಯಲು ಬರುತ್ತದೆ.
೧. ಪರೀಕ್ಷಣೆಯ ನೋಂದಣಿಗಳ ವಿವೇಚನೆ
ಈ ಪ್ರಯೋಗದಲ್ಲಿ ಭಾವಸತ್ಸಂಗವನ್ನು ತೆಗೆದುಕೊಳ್ಳುವ ಇಬ್ಬರು ಸಾಧಕಿಯರು ಮತ್ತು ಭಾವಸತ್ಸಂಗವನ್ನು ಕೇಳುವ ೪ ಜನ ಸಾಧಕ-ಸಾಧಕಿಯರು ಭಾಗವಹಿಸಿದ್ದರು. ಭಾವಸತ್ಸಂಗದ ಮೊದಲು ಮತ್ತು ಭಾವಸತ್ಸಂಗದ ನಂತರ ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಈ ಉಪಕರಣದ ಮೂಲಕ ಎಲ್ಲರ ಪರೀಕ್ಷಣೆಯನ್ನು ಮಾಡಲಾಯಿತು. ಈ ನೋಂದಣಿಗಳನ್ನು ಮುಂದೆ ಕೊಡಲಾಗಿದೆ.
ಮೇಲಿನ ನೋಂದಣಿಯಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ :
ಅ. ಭಾವಸತ್ಸಂಗವನ್ನು ಕೇಳಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕಿಯಲ್ಲಿದ್ದ ನಕಾರಾತ್ಮಕ ಊರ್ಜೆಯ ಪ್ರಭಾವಲಯ ಇಲ್ಲವಾಯಿತು ಮತ್ತು ಅವಳಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ಹೆಚ್ಚಾಯಿತು.
ಆ. ಭಾವಸತ್ಸಂಗವನ್ನು ಕೇಳಿದ ನಂತರ ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕನ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ಹೆಚ್ಚಾಯಿತು.
ಇ. ಭಾವಸತ್ಸಂಗವನ್ನು ತೆಗೆದುಕೊಳ್ಳುವ ಸಾಧಕಿಯರ ಸಕಾರಾತ್ಮಕ ಊರ್ಜೆ ಬಹಳ ಹೆಚ್ಚಾಯಿತು.
ನಿಷ್ಕರ್ಷ : ‘ಭಾವಸತ್ಸಂಗವನ್ನು ಕೇಳುವುದರಿಂದ ವ್ಯಕ್ತಿಯ ಸೂಕ್ಷ್ಮ ಊರ್ಜೆಯ ಮೇಲೆ ಸಕಾರಾತ್ಮಕ ಪರಿಣಾಮವಾಗುತ್ತದೆ’, ಎಂಬುದು ಇದರಿಂದ ಸ್ಪಷ್ಟವಾಯಿತು.
೨. ಪರೀಕ್ಷಣೆಯಲ್ಲಿನ ನೋಂದಣಿಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
೨ ಅ. ಭಾವಸತ್ಸಂಗವನ್ನು ಕೇಳುವ ಪರೀಕ್ಷಣೆಯಲ್ಲಿನ ಎಲ್ಲರ ಮೇಲೆ (ಅವರ ಸೂಕ್ಷ್ಮ-ಊರ್ಜೆಯ ಮೇಲೆ) ಸಕಾರಾತ್ಮಕ ಪರಿಣಾಮವಾಗುವುದರ ಹಿಂದಿನ ಕಾರಣ : ಭಾವಸತ್ಸಂಗದಲ್ಲಿನ ವಿಷಯಗಳು ಸಾಧನೆಗೆ ಪ್ರೋತ್ಸಾಹ ನೀಡುವಂತಹದ್ದಾಗಿರುತ್ತವೆ. ಭಾವ ಸತ್ಸಂಗದಲ್ಲಿ ಹೇಳಲಾಗುವ ಆಧ್ಯಾತ್ಮಿಕ ಕಥೆಗಳಿಂದ ಕೇಳುಗರ ಅಂತರ್ಮುಖತೆ ಹೆಚ್ಚಾಗುತ್ತದೆ ಮತ್ತು ಅವರ ಮನಸ್ಸಿ ನಲ್ಲಿ ಈಶ್ವರನ ಬಗ್ಗೆ ಭಕ್ತಿಭಾವ ಉತ್ಪನ್ನವಾಗುತ್ತದೆ. ಈ ಭಾವಸತ್ಸಂಗದಿಂದ ಭಾವ, ಚೈತನ್ಯ ಮತ್ತು ಆನಂದದ ಸ್ಪಂದನಗಳು ಪ್ರಕ್ಷೇಪಣೆಯಾದವು. ಆದುದರಿಂದ ಪರೀಕ್ಷಣೆಯಲ್ಲಿರುವ ಎಲ್ಲರ ಸುತ್ತಲೂ ಸಾತ್ತ್ವಿಕ ಸ್ಪಂದನಗಳ ವಲಯ ತಯಾರಾಯಿತು. ಭಾವಸತ್ಸಂಗವನ್ನು ಕೇಳುವ ಮೊದಲು ನಕಾರಾತ್ಮಕ ಊರ್ಜೆ ಇದ್ದ ಸಾಧಕರ ನಕಾರಾತ್ಮಕ ಊರ್ಜೆ ಸಂಪೂರ್ಣವಾಗಿ ಇಲ್ಲವಾಯಿತು ಮತ್ತು ಎಲ್ಲರಲ್ಲಿ ಸಕಾರಾತ್ಮಕ ಊರ್ಜೆ ಹೆಚ್ಚಾಯಿತು.
೨ ಆ. ಭಾವಸತ್ಸಂಗವನ್ನು ತೆಗೆದುಕೊಳ್ಳುವ ಸಾಧಕರಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾದುದರ ಹಿಂದಿನ ಕಾರಣ : ಭಾವಸತ್ಸಂಗವನ್ನು ತೆಗೆದುಕೊಳ್ಳುವ ಸಾಧಕರಲ್ಲಿ ಮೂಲದಲ್ಲಿಯೇ ಈಶ್ವರನ ಬಗ್ಗೆ ಭಾವವಿದೆ. ರಾಷ್ಟ್ರೀಯ ಮಟ್ಟದ ಭಾವಸತ್ಸಂಗವನ್ನು ತೆಗೆದುಕೊಳ್ಳುವುದು, ಈ ಸಮಷ್ಟಿ ಸೇವೆಯನ್ನು ಇಬ್ಬರೂ ಭಾವಪೂರ್ಣವಾಗಿ ಮಾಡಿದುದರಿಂದ ಅವರಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾಯಿತು.
ಸಂಕ್ಷಿಪ್ತದಲ್ಲಿ ‘ವ್ಯಕ್ತಿಯು ಭಕ್ತಿಭಾವವನ್ನು ಮೂಡಿಸುವಂತಹ ಭಾವಸತ್ಸಂಗವನ್ನು ಕೇಳುವುದು ಎಲ್ಲರ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆ’, ಎಂದು ಈ ಪರೀಕ್ಷಣೆಯಿಂದ ಸ್ಪಷ್ಟವಾಯಿತು.’
– ಶ್ರೀ. ಗಿರೀಶ ಪಂಡಿತ ಪಾಟೀಲ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨.೭.೨೦೨೪)
ವಿ-ಅಂಚೆ : [email protected]