ಜಗತ್ತಿನ ಸುಖ-ದುಃಖಗಳಲ್ಲಿ ಸಿಲುಕದೇ ಭಗವಂತನ ಭಕ್ತಿ ಮಾಡುವುದರ ಅಸಾಧಾರಣ ಮಹತ್ವ !

ಸೌ. ಶಕುಂತಲಾ ಬದ್ದಿ

೧. ಜಗತ್ತಿನ ಸುಖ-ದುಃಖಗಳ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಜೀವನವನ್ನು ಕಳೆಯದೇ ಅದನ್ನು ಪ್ರಭುಗಳ ಚರಣಗಳಲ್ಲಿಡಬೇಕು : ‘ಮನುಷ್ಯನ ಇಡೀ ಜೀವನ ಜಗತ್ತಿನ ಸುಖ-ದುಃಖಗಳ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿಯೇ ಕಳೆಯುತ್ತದೆ; ಆದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ತದ್ವಿರುದ್ಧ ಬಾಕಿ ಉಳಿದ ಸಮಸ್ಯೆಗಳಿಗೆ ಪರಿಹಾರ ಸಿಗದ ಕಾರಣ ಮಾನಸಿಕ ತೊಂದರೆಯೇ ಆಗುತ್ತದೆ. ಅದಕ್ಕಿಂತಲೂ ಜಗತ್ತಿನ ಈ ಸಮಸ್ಯೆಗಳ ಪಟ್ಟಿಯನ್ನು ಪ್ರಭುವಿನ ಚರಣಗಳ ಮೇಲಿಡಬೇಕು. (ಯೋಗ್ಯ ಕ್ರಿಯಮಾಣವನ್ನು ಬಳಸಿ ಸಂಸಾರದ ಭಾರವನ್ನು ಪರಮೇಶ್ವರನಿಗೆ ಒಪ್ಪಿಸಿ ಬಿಡಬೇಕು.) ನಾವು ನಮ್ಮ ಸಾಧನೆಯಾಗಬೇಕೆಂದು ಮತ್ತು ಆಧ್ಯಾತ್ಮಿಕ ಪ್ರಗತಿಯಲ್ಲಿ ಅಡೆತಡೆಯಾಗಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಭಗವಂತನ ಬಳಿಗೆ ಬಲ ಮತ್ತು ಆಶೀರ್ವಾದವನ್ನು ಬೇಡೋಣ.

೨. ಜಗತ್ತಿನ ಭಾರವನ್ನು ಗುರುಚರಣಗಳಿಗೆ ಒಪ್ಪಿಸುವುದರಿಂದ ಪರಮೇಶ್ವರನಿಗೆ ಸಮೀಪವಾಗಬಹುದು : ನನ್ನನ್ನು ಯಾರಾದರೂ ಅಪಮಾನಿಸಿದರೆ ಅಥವಾ ನನಗೆ ತೊಂದರೆ ನೀಡಿದರೆ, ಮೊದಲು ನನ್ನ ಮನಸ್ಸಿನಲ್ಲಿ ಪ್ರತಿಕ್ರಿಯೆ ಬರುತ್ತಿತ್ತು. ಈಗ ನಾನು ಸಂಸಾರದ ಭಾರವನ್ನು ಗುರುಚರಣಗಳಿಗೆ ಒಪ್ಪಿಸಿರುವುದರಿಂದ ನನಗೆ ಪ್ರತಿಕ್ರಿಯೆ ಬರುವುದು ನಿಂತಿತು. ತದ್ವಿರುದ್ಧ ನನ್ನ ಮನಸ್ಸಿನಲ್ಲಿ ‘ಭಗವಂತನಿಂದ ನಮಗಾದ ಸನ್ಮಾನ, ಎಂದರೆ ಗುರುಗಳ ಮಡಿಲಿಗೊಪ್ಪಿಸಿ ನೀಡಿದ ಗೌರವಾಧಾರ’ ಎಂಬ ವಿಚಾರವು ದೃಢವಾಯಿತು. (ಸಂಬಂಧಿಕರು ದೂರ ಮಾಡಿದರು, ಆದರೆ ಗುರುಗಳು (ಪರಾತ್ಪರ ಗುರು ಡಾ. ಆಠವಲೆಯವರು) ನಮ್ಮ ಜೀವನದಲ್ಲಿ ಬಂದರು. ಅವರು ನಮ್ಮನ್ನು ತಮ್ಮವರಾಗಿಸಿ ಕೊಂಡರು, ಇದು ನಮ್ಮ ಭಾಗ್ಯವಾಗಿದೆ.) ಈಗ ನನಗೆ, ‘ನನಗೆ ತೊಂದರೆ ನೀಡುವ ಅಥವಾ ನನ್ನನ್ನು ಅವಮಾನಿಸುವ ವ್ಯಕ್ತಿ ಗಳು ನನ್ನ ಗುರುವಾಗಿದ್ದಾರೆ; ಏಕೆಂದರೆ ಅವರಿಗೆ ಪ್ರತಿಕ್ರಿಯೆ ನೀಡದ ಕಾರಣ ನನ್ನಲ್ಲಿ ಸಹನೆ ಹೆಚ್ಚಾಗಿ ನಾನು ಆನಂದಮಯ ಪರಮೇಶ್ವರನ ಬಳಿ ಹೋಗುತ್ತಿದ್ದೇನೆ’, ಎಂದೆನಿಸುತ್ತದೆ.

೩. ಭಗವಂತನು ತನ್ನ ಬಳಿ ಏನನ್ನೂ ಇಟ್ಟುಕೊಳ್ಳುವುದಿಲ್ಲ, ಬದಲಾಗಿ ಭಕ್ತನಿಗೆ ಬಡ್ಡಿಸಹಿತ ಹಿಂದಿರುಗಿಸುತ್ತಾನೆ : ಭಗವಂತನು ನನ್ನ ಜೀವನದ ವಿಮೆಯನ್ನು ಮಾಡಿದ್ದಾನೆ. ನನ್ನ ಮೃತ್ಯುವಿನ ನಂತರ ಇತರ ಯಾರಿಗೂ ಅಲ್ಲ ಅದರ ಲಾಭ ನನಗೆ ಮಾತ್ರ ಆಗಲಿದೆ. ದೇವರೇ ನನ್ನಿಂದ ಭಕ್ತಿರೂಪಿ ಕಂತನ್ನು ತುಂಬಿಸಿಕೊಂಡಿದ್ದಾನೆ. ಅವನು ಅದನ್ನು ಬಡ್ಡಿಸಹಿತ ಹಿಂದಿರುಗಿಸುವನು; ಏಕೆಂದರೆ ಭಗವಂತನು ತನ್ನ ಬಳಿ ಏನೂ ಇಟ್ಟುಕೊಳ್ಳುವುದಿಲ್ಲ. ಭಕ್ತನು ಭಗವಂತನಿಗೆ ಏನೆಲ್ಲ ನೀಡುವನೋ, ಅದನ್ನು ಭಗವಂತನು ಭಕ್ತನಿಗೆ ಬಡ್ಡಿಸಹಿತ ಹಿಂದಿರುಗಿಸುತ್ತಾನೆ. ಆಗ ‘ಸ್ವೀಕರಿಸುವುದು ಅಥವಾ ನಿರಾಕರಿಸುವುದು’, ಎಂಬ ಪ್ರಶ್ನೆಯೇ ಬರುವುದಿಲ್ಲ.’

– ಸೌ. ಶಕುಂತಲಾ ಬದ್ದಿ (೬೦ ವರ್ಷ), ಖಾರಘರ, ನವಿ ಮುಂಬಯಿ. (೨೯.೧೧.೨೦೨೨)