ಭಕ್ತಿಯೋಗದ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳು ಮತ್ತು ಇತರ ಯೋಗಮಾರ್ಗಗಳ ತುಲನೆಯಲ್ಲಿ ಭಕ್ತಿಮಾರ್ಗದಿಂದ ಸಾಧನೆ ಮಾಡಿ ಸಂತಪದವಿ ಪ್ರಾಪ್ತವಾದವರ ಸಂಖ್ಯೆ ಹೆಚ್ಚಿಸರಲು ಕಾರಣಗಳು !

ಅಧ್ಯಾತ್ಮದಲ್ಲಿ ಜ್ಞಾನಯೋಗ, ಧ್ಯಾನಯೋಗ, ಕರ್ಮಯೋಗ, ಹಠಯೋಗ, ಶಕ್ತಿಪಾತಯೋಗ, ನಾಮಸಂಕೀರ್ತನಯೋಗ ಮತ್ತು ಭಕ್ತಿಯೋಗ ಹೀಗೆ ವಿವಿಧ ಯೋಗಮಾರ್ಗಗಳಿವೆ. ವಿವಿಧ ಯೋಗಮಾರ್ಗ ಗಳಿಗನುಸಾರ ಸಾಧನೆಯನ್ನು ಮಾಡಲು ಆವಶ್ಯಕವಾಗಿರುವ ಗುಣಗಳು ಮತ್ತು ಅವುಗಳಿಂದ ವಿಕಸಿತವಾಗುವ ಗುಣಗಳು ಮುಂದಿನಂತಿವೆ. ನಾವು ಹಿಂದಿನ ವಾರದ ಯೋಗಮಾರ್ಗಗಳ ಬಗೆಗಿನ ಕೆಲವು ಭಾಗಗಳನ್ನು ನೋಡಿದೆವು. ಇಂದು ಅಂತಿಮ ಭಾಗವನ್ನು ನೋಡೋಣ.

ಕು. ಮಧುರಾ ಭೋಸಲೆ

ಭಾಗ – ೪

ಭಕ್ತಿಯೋಗ ಮತ್ತು ಜ್ಞಾನಯೋಗ

ಭಕ್ತಿಯೋಗದಲ್ಲಿ ಮನಸ್ಸಿಗೆ ಆನಂದದ ಅರಿವಾದರೆ ಜ್ಞಾನಯೋಗ ದಲ್ಲಿ ದೊರಕಿದ ಜ್ಞಾನದಿಂದ ಬುದ್ಧಿಗೆ ಆನಂದ ಅರಿವಾಗುತ್ತದೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨೭.೬.೨೦೨೩)

೬ ಈ. ಶಿವನ ಸಗುಣ ರೂಪದಲ್ಲಿ ಸಿಲುಕಿದ ಸಂತ ನರಹರಿ ಅಕ್ಕಸಾಲಿಗರ ಮೇಲಾದ ಶಿವಕೃಪೆಯಿಂದ ಅವರ ಸೂಕ್ಷ್ಮ ಅಹಂಕಾರವು ಕರಗಿ ಹೋಗುವುದು ಮತ್ತು ಶ್ರೀ ವಿಠ್ಠಲನಲ್ಲಿ ಅವರ ಭಕ್ತಿಯು ದೃಢವಾಗುವುದು : ಸಂತ ನರಹರಿ ಅಕ್ಕಸಾಲಿಗರು ಪಂಢರಪುರದ ಸಂತರಾಗಿದ್ದು, ಅವರು ಪರಮ ಶಿವಭಕ್ತರಾಗಿದ್ದರು. ಅವರಿಗೆ, ‘ಈ ಜಗತ್ತಿನಲ್ಲಿ ಕೇವಲ ಶಿವನೇ ಸರ್ವಸ್ವವಾಗಿದ್ದಾನೆ’ ಎಂದು ಅನಿಸುತ್ತಿತ್ತು. ಆದುದರಿಂದ ಅವರು ಇತರ ಯಾವುದೇ ದೇವರ ದರ್ಶನವನ್ನು ಪಡೆಯು ತ್ತಿರಲಿಲ್ಲ ಮತ್ತು ಅವರನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಸಂತ ನರಹರಿ ಅಕ್ಕಸಾಲಿಗರ ಈ ಸೂಕ್ಷ್ಮ ಅಹಂಅನ್ನು ನಾಶ ಮಾಡಲು ಶಿವ ಕೃಪೆಯಿಂದ ಒಂದು ಲೀಲೆಯು ಘಟಿಸಿತು. ವ್ಯಕ್ತಿಯೊಬ್ಬನು ಶ್ರೀ ವಿಠ್ಠಲನಿಗೆ ಚಿನ್ನದ ಸೊಂಟದ ಉಡದಾರವನ್ನು ಅರ್ಪಿಸ ಬೇಕೆಂದು ಹರಕೆ ಹೊತ್ತಿದ್ದನು. ಆ ಹರಕೆಯನ್ನು ತೀರಿಸಲು ಅವನು ಸಂತ ನರಹರಿ ಅಕ್ಕಸಾಲಿಗನ ಬಳಿ ಬರುತ್ತಾನೆ. ಆ ಹರಕೆಯನ್ನು ತೀರಿಸಲು ಅವರಿಗೆ ಪ್ರತ್ಯಕ್ಷದಲ್ಲಿ ಪಾಂಡುರಂಗನ ದೇವಸ್ಥಾನಕ್ಕೆ ಹೋಗಿ ಆ ಮೂರ್ತಿಯ ಸೊಂಟದ ಅಳತೆ ಯನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿತ್ತು; ಆದರೆ ನರಹರಿಯು, ಶಿವನ ಹೊರತು ಬೇರೆ ಯಾವುದೇ ದೇವರ ದರ್ಶನ ಪಡೆಯುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದನು. ಆದುದರಿಂದ ಅವನು ಕಣ್ಣುಗಳಿಗೆ ಪಟ್ಟಿಯನ್ನು ಕಟ್ಟಿಕೊಂಡನು ಮತ್ತು ಅವನು ಶ್ರೀ ವಿಠ್ಠಲನ ದೇವಸ್ಥಾನಕ್ಕೆ ಹೋದನು. ಅಲ್ಲಿ ಅವನು ಶ್ರೀ ವಿಠ್ಠಲನ ಸೊಂಟದ ಅಳತೆಯನ್ನು ದಾರದಿಂದ ತೆಗೆದುಕೊಳ್ಳುವಾಗ, ಅವನಿಗೆ ತಾನು ಶಿವಲಿಂಗವನ್ನೇ ಸ್ಪರ್ಶಿಸು ತ್ತಿದ್ದೇನೆ, ಎಂದರಿವಾಯಿತು. ಹೀಗೆ ೩-೪ ಬಾರಿ ಆದಾಗ ಅವನು ಕಣ್ಣುಗಳ ಮೇಲಿನ ಪಟ್ಟಿಯನ್ನು ಪಕ್ಕಕ್ಕೆ ಸರಿಸಿ ನೋಡಿದಾಗ, ಅಲ್ಲಿ ಶ್ರೀ ವಿಠ್ಠಲ ಕಾಣಿಸುತ್ತಿದ್ದನು ಮತ್ತು ಕಣ್ಣುಗಳ ಮೇಲೆ ಪಟ್ಟಿಯನ್ನು ಕಟ್ಟಿದಾಗ ಪುನಃ ಶಿವಲಿಂಗವು ಕಾಣಿಸುತ್ತಿತ್ತು. ಅನಂತರ ಅವನಿಗೆ ಶಿವನ ಕೃಪೆಯಿಂದ, ‘ಶಿವ ಮತ್ತು ವಿಷ್ಣು (ಶ್ರೀವಿಷ್ಣುವಿನ ಒಂದು ರೂಪ ಶ್ರೀ ವಿಠ್ಠಲ) ಇವರು ಬೇರೆಯಲ್ಲ, ಒಬ್ಬರೇ ಆಗಿದ್ದಾರೆ’ ಎಂದು ಜ್ಞಾನವಾಯಿತು. ಅನಂತರ ಸಂತ ನರಹರಿ ಅಕ್ಕಸಾಲಿಗರ ಸೂಕ್ಷ್ಮ ಅಹಂಕಾರ ಕರಗಿ ನೀರಾಯಿತು ಮತ್ತು ಅವರ ಶ್ರೀ ವಿಠ್ಠಲನ ಮೇಲಿನ ಭಕ್ತಿಯು ದೃಢವಾಯಿತು.

೭. ಭಕ್ತಿಯೋಗಕ್ಕೆ ಶ್ರೀಗುರುಕೃಪಾಯೋಗದ ಜೊತೆ ನೀಡಿದರೆ ಭಕ್ತಿಮಾರ್ಗಿ ಜೀವದ ಪರಮ ಕಲ್ಯಾಣವಾಗುವುದು : ಈ ರೀತಿ ಮೇಲಿನ ಉದಾಹರಣೆಗಳಿಂದ, ಭಕ್ತಿಮಾರ್ಗದ ಜೀವವು ಒಂದು ವೇಳೆ ಭಾವ ಅಥವಾ ಭಕ್ತಿಯ ಬಲದಿಂದ ಭಗವಂತನೊಂದಿಗೆ ನೇರ ಅನುಸಂಧಾನ ಸಾಧಿಸಿ ಶೀಘ್ರ ಆಧ್ಯಾತ್ಮಿಕ ಉನ್ನತಿ ಮಾಡಿಕೊಂಡರೂ, ಭಕ್ತಿಮಾರ್ಗದವರ ಸೂಕ್ಷ್ಮ ಅಹಂಕಾರವು ನಾಶವಾಗಲು ಅವರಿಗೆ ಶ್ರೀಗುರುಗಳ ಕೃಪೆಯಾಗುವುದು ಅತ್ಯಂತ ಆವಶ್ಯಕವಾಗಿರುತ್ತದೆ’, ಎಂದು ಗಮನಕ್ಕೆ ಬರುತ್ತದೆ. ಆದುದರಿಂದಲೇ ಕಲಿಯುಗದಲ್ಲಿ ‘ನಾಮದ ಒಂದು ಆಧಾರ’ವಾಗಿರುವ ಭಕ್ತಿಮಾರ್ಗವು ಸಾಧನೆಯ ದೃಷ್ಟಿಯಿಂದ ಶ್ರೇಷ್ಠವಾಗಿದ್ದರೂ, ಅದಕ್ಕೆ ಶ್ರೀಗುರುಕೃಪಾಯೋಗದ ಜೊತೆ ಸಿಕ್ಕರೆ ಮಾತ್ರ ಭಕ್ತಿಮಾರ್ಗದ ಜೀವವು ಮೋಕ್ಷಪ್ರಾಪ್ತಿಯನ್ನು ಮಾಡಿ ಕೊಳ್ಳಬಹುದು; ಇಲ್ಲವಾದರೆ ಅದಕ್ಕೆ ಭಕ್ತಿಯ ಸೂಕ್ಷ್ಮ ಅಹಂ ಉಂಟಾಗಿ ಅದರ ಆಧ್ಯಾತ್ಮಿಕ ಉನ್ನತಿಯು ಕುಂಠಿತ ವಾಗುತ್ತದೆ ಅಥವಾ ಅಧೋಗತಿ ಯಾಗುತ್ತದೆ. ಇದರಿಂದ ಕಲಿಯುಗದಲ್ಲಿ ‘ಶ್ರೀಗುರುಕೃಪಾಯೋಗಕ್ಕೆ ಅಸಾಧಾರಣ ಮಹತ್ವವಿದೆ’, ಎಂದು ಗಮನಕ್ಕೆ ಬರುತ್ತದೆ.

೮. ಇತರ ಯೋಗಮಾರ್ಗಗಳಿಗಿಂತ ಭಕ್ತಿಯೋಗಕ್ಕನುಸಾರ ಸಾಧನೆ ಮಾಡಿ ಸಂತಪದವಿ ಪ್ರಾಪ್ತಮಾಡಿಕೊಂಡವರು ಹೆಚ್ಚಿರುವುದರ ಆಧ್ಯಾತ್ಮಿಕ ಕಾರಣಗಳು : ಈ ರೀತಿ ಭಕ್ತಿಮಾರ್ಗಿ ಸಾಧಕರ ಪ್ರವಾಸ ಅನೇಕದಿಂದ ಏಕಕ್ಕೆ ಬರುವುದು (ಅನೇಕ ದೇವತೆಗಳ ಉಪಾಸನೆಯಿಂದ ಒಂದು ದೇವತೆಯ ಉಪಾಸನೆ ಮಾಡುವುದು), ಸ್ಥೂಲದಿಂದ ಸೂಕ್ಷ್ಮಕ್ಕೆ ಹೋಗುವುದು (ಕರ್ಮಕಾಂಡದಿಂದ ಉಪಾಸನಾಕಾಂಡದೆಡೆಗೆ ಮತ್ತು ಉಪಾಸನಾಕಾಂಡದಿಂದ ಭಕ್ತಿಕಾಂಡದೆಡೆಗೆ), ಭಕ್ತಿಯ ಮಾಧ್ಯಮದಿಂದ ಮನೋಲಯ, ಬುದ್ಧಿಲಯ, ಅಹಂಲಯ ಮತ್ತು ಚಿತ್ತಲಯವು ಬೇಗನೆ ಆಗುವುದು, ಸಕಾಮದಿಂದ ನಿಷ್ಕಾಮ ಸಾಧನೆಯ ಕಡೆಗೆ ಮಾರ್ಗಕ್ರಮಿಸುವುದು (ಸಾಪೇಕ್ಷ ಅಂದರೆ ‘ಸಕಾಮ’ ಭಕ್ತಿ ಮಾಡದೇ ನಿರಪೇಕ್ಷ, ಅಂದರೆ ‘ನಿಷ್ಕಾಮ’ ಭಕ್ತಿ ಮಾಡುವುದು) ಮತ್ತು ಸಗುಣದಿಂದ ನಿರ್ಗುಣದತ್ತ ಹೋಗುವುದು (ಗುರು ಅಥವಾ ದೇವರ ಸಗುಣ ರೂಪದಲ್ಲಿ ಸಿಲುಕದೇ ಅವರ ನಿರ್ಗುಣರೂಪದ ಕಡೆಗೆ, ಅಂದರೆ ತತ್ತ್ವರೂಪದ ಕಡೆಗೆ ಮಾರ್ಗಕ್ರಮಣ ವಾಗುತ್ತದೆ. ಮಗುವಿನಂತಹ ‘ನಿಷ್ಕಪಟ ಭಾವ’ ಅಥವಾ ‘ಮುಗ್ಧಭಾವ’ವು ಭಕ್ತಿಯೋಗದ ಸ್ಥಾಯಿಭಾವವಾಗಿದೆ. ಈ ಭಾವಾವಸ್ಥೆಯಲ್ಲಿ ಭಕ್ತನು ಬುದ್ಧಿಯಿಂದ ವಿಚಾರ ಮಾಡದೇ ಕೇವಲ ಭಾವದ ಸ್ತರದಲ್ಲಿ ವಿಚಾರ ಮಾಡುತ್ತಿರುತ್ತಾನೆ. ಆದುದರಿಂದ ಅವನ ವೃತ್ತಿ, ವಿಚಾರ ಮತ್ತು ಕೃತಿ ಇವುಗಳಲ್ಲಿ ಯಾವುದೇ ಅಪೇಕ್ಷೆ ಇರದೇ ಅವನ ವೃತ್ತಿ, ವಿಚಾರ ಮತ್ತು ಕೃತಿ ನಿರಪೇಕ್ಷ ಮತ್ತು ಶುದ್ಧವಾಗಿರುತ್ತದೆ. ಆದುದರಿಂದ ಭಕ್ತನ ಮುಗ್ಧಭಾವವನ್ನು ನೋಡಿ ಅವನ ಮೇಲೆ ಭಗವಂತನ ಕೃಪೆಯಾಗಿ ಅವನ ಆಧ್ಯಾತ್ಮಿಕ ಉನ್ನತಿ ಮಾಡಿಸಿಕೊಂಡು ಅವನಿಗೆ ಸಂತಪದವಿಯನ್ನು ಪ್ರದಾನಿಸುತ್ತಾನೆ.

ಶ್ರೀಗುರುಚರಣಗಳಲ್ಲಿ ಕೃತಜ್ಞತೆ ಮತ್ತು ಪ್ರಾರ್ಥನೆ

ಶ್ರೀಗುರುಗಳ ಕೃಪೆಯಿಂದಲೇ ಭಕ್ತಿಯೋಗದ ಆಧ್ಯಾತ್ಮಿಕ ಸ್ತರದಲ್ಲಿನ ಅನನ್ಯಸಾಧಾರಣ ಮಹತ್ವವು ಗಮನಕ್ಕೆ ಬಂದಿತು’, ಇದಕ್ಕಾಗಿ ನಾನು ಶ್ರೀಗುರುಚರಣಗಳಲ್ಲಿ ಕೃತಜ್ಞಳಾಗಿದ್ದೇನೆ. ‘ನಮ್ಮೆಲ್ಲ ಆಜ್ಞಾನಿಜೀವಗಳ ಮೇಲೆ ಶ್ರೀಗುರುಗಳ ಕೃಪೆ ಹೀಗೆಯೇ ಅಖಂಡವಾಗಿರಲಿ’, ಇದೇ ಅವರ ಚರಣಗಳಲ್ಲಿ ಸವಿನಯ ಪ್ರಾರ್ಥನೆಯಾಗಿದೆ.’

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ), (ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ. ೮.೬.೨೦೨೩)

(ಮುಕ್ತಾಯ)