ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿರಿ – https://sanatanprabhat.org/kannada/104610.html
೫. ಸಾಧಕರಿಗೆ ಆನಂದವನ್ನು ನೀಡಿದಾಗಲೆಲ್ಲ, ‘ನಾನು ಪರಾತ್ಪರ ಗುರು ಡಾ. ಆಠವಲೆಯವರಿಗೇ ಆನಂದವನ್ನು ನೀಡುತ್ತಿದ್ದೇನೆ’, ಎಂಬ ಭಾವ ಸಾಧಕನಲ್ಲಿರುವುದು
ಶ್ರೀ. ರಾಜೇಶ ದೋಂತುಲ : ‘ಸದ್ಯ ನನಗೆ, ‘ನಾನು ಸಾಧಕರಿಗೆ ಹೇಗೆ ಮತ್ತು ಏನು ಹೇಳಿ ಆನಂದ ನೀಡಲಿ ?’ ಎಂದು ಬಹಳ ಬಾರಿ ಅನಿಸುತ್ತದೆ. ಅವರಿಗೆ ತೊಂದರೆ ಆಗುವುದನ್ನು ನೋಡಿದರೆ ನನಗೆ ಅದು ಸಹನೆ ಆಗುವುದಿಲ್ಲ. ಅವರಿಗೆ ಆನಂದದಲ್ಲಿ ಇರಿಸಿದೊಡನೆ, ‘ನಾನು ನಿಮಗೇ (ಪರಾತ್ಪರ ಗುರು ಡಾ. ಆಠವಲೆಯವರಿಗೇ) ಆನಂದವನ್ನು ನೀಡುತ್ತಿದ್ದೇನೆ’, ಎಂಬ ಭಾವವನ್ನು ಇಟ್ಟುಕೊಳ್ಳುತ್ತೇನೆ.
೬. ‘ಸೇವೆಯನ್ನು ಮಾಡುವಾಗ ಪರಾತ್ಪರ ಗುರು ಡಾಕ್ಟರರ ಬಗ್ಗೆ ಕೃತಜ್ಞತಾಭಾವವದಲ್ಲಿದ್ದರೆ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುವುದಿಲ್ಲ’, ಎಂದು ಸಾಧಕನು ಹೇಳುವುದು
ಪರಾತ್ಪರ ಗುರು ಡಾ. ಆಠವಲೆ : ಸಾಧಕರಿಗೆ ನಾಮಜಪ, ಸಾಧನೆ ಮತ್ತು ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಮಾಡಲು ಹೇಳುವೆಯಲ್ಲ ?
ಶ್ರೀ. ರಾಜೇಶ ದೋಂತುಲ : ಹೌದು ಗುರುದೇವರೇ. ಈಗ ನಾನು ಆಧ್ಯಾತ್ಮಿಕ ದೃಷ್ಟಿಕೋನಗಳನ್ನು ನೀಡಿ ಸಾಧಕರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇನೆ. ಬಹಳ ಸಾಧಕರು, ಮನಸ್ಸಿನಲ್ಲಿ ಈ ವಿಚಾರವಿದೆ, ಆ ವಿಚಾರವಿದೆ’, ಇದರದ್ದೇ ಗುಂಗಿನಲ್ಲಿರುತ್ತಾರೆ. ಅದಕ್ಕೆ ಬದಲು ‘ನನ್ನ ಗುರುದೇವರು ನನಗೆ ಇಷ್ಟೆಲ್ಲ ಉಪಾಯಗಳನ್ನು ನೀಡಿದ್ದಾರೆ’, ಎಂಬ ಅರಿವನ್ನು ಇಟ್ಟುಕೊಂಡು ಅವರು ತಮ್ಮ ಮನಸ್ಸನ್ನು ಸೇವೆಯಲ್ಲಿ ತೊಡಗಿಸಬೇಕು. ಸೇವೆಯನ್ನು ಮಾಡುವಾಗ ಇದೇ ರೀತಿ ವಿಚಾರವನ್ನಿಟ್ಟುಕೊಂಡರೆ, ‘ನಾವು ನಕಾರಾತ್ಮಕವಾಗುವುದಿಲ್ಲ’, ಎಂದು ನನಗೆ ಅನಿಸುತ್ತದೆ.
ಪರಾತ್ಪರ ಗುರು ಡಾ. ಆಠವಲೆ : ಬಹಳ ಚೆನ್ನಾಗಿದೆ !
೭. ‘ಇಡೀ ಭಾರತವೇ ಪರಾತ್ಪರ ಗುರು ಡಾಕ್ಟರರಲ್ಲಿ ಸೇರಿರುವುದರಿಂದ ಅವರಿಗಾಗಿ ಏನಾದರೂ ಮಾಡಿದರೆ ಅದು ಭಾರತಕ್ಕಾಗಿಯೇ ಮಾಡಿದಂತಾಗುತ್ತದೆ’, ಎಂಬ ಭಾವ ಸಾಧಕನಲ್ಲಿರುವುದು
ಶ್ರೀ. ರಾಜೇಶ ದೋಂತುಲ : ತಮ್ಮ ರಕ್ಷಣೆಯೆಂದರೆ, ತಮ್ಮ ರಕ್ಷಣೆ ಮಾತ್ರವಲ್ಲ, ಅದು ಸಂಪೂರ್ಣ ಭಾರತದ್ದೇ ರಕ್ಷಣೆ ಯಾಗಿದೆ. ಗುರುದೇವರೇ, ನಮಗೆ, ಇಡೀ ಭಾರತವೇ ತಮ್ಮೊಳಗೆ (ಗುರುದೇವರಲ್ಲಿಯೇ) ಸೇರಿಕೊಂಡಿದೆ. ನೀವೇ ನಮ್ಮ ಸರ್ವಸ್ವರಾಗಿರುವಿರಿ. ನಾವು ತಮಗಾಗಿ ಏನಾದರೂ ಮಾಡಿದರೆ ಎಲ್ಲವೂ ತನ್ನಿಂದತಾನೇ ಆಗಿ ಬಿಡುತ್ತದೆ. ನಮಗೆ ಬೇರೇನೂ ಮಾಡುವ ಆವಶ್ಯಕತೆಯೇ ಇಲ್ಲ. ಪರಾತ್ಪರ ಗುರು ಡಾ. ಆಠವಲೆ : ಇಲ್ಲಿ ಭಾವವು ಮಹತ್ವದ್ದಾಗಿದೆ.
೮. ಯಾವನಾದರೊಬ್ಬ ಸಾಧಕನು ಭಾವದ ಸ್ಥಿತಿಗೆ ಬಂದಾಗ ಅವನ ವ್ಯಷ್ಟಿ ಸಾಧನೆ ಮುಗಿದಿರುವುದರಿಂದ ಅವನು ಸಮಷ್ಟಿ ಸಾಧನೆ ಮಾಡುವುದು ಆವಶ್ಯಕವಾಗಿರುವುದು
ಶ್ರೀ. ರಾಜೇಶ ದೋಂತುಲ : ಗುರುದೇವರೇ ತಾವು, ‘ನನ್ನ ವ್ಯಷ್ಟಿ ಸಾಧನೆಯ ಪ್ರಯತ್ನ ಚೆನ್ನಾಗಿ ನಡೆಯುತ್ತಿದೆ ಮತ್ತು ಈಗ ನಾನು ಸಮಷ್ಟಿಯ ಕಾರ್ಯವನ್ನು ಮಾಡಬೇಕಾಗಿದೆ’, ಎಂದು ಹೇಳಿದ್ದಿರಿ.
ಪರಾತ್ಪರ ಗುರು ಡಾ. ಆಠವಲೆ : ಅಂದರೇ ಯಾವನಾದರೊಬ್ಬ ಸಾಧಕನು ಭಾವದ ಸ್ಥಿತಿಗೆ ಬಂದನೆಂದರೆ, ಅವನ ವ್ಯಷ್ಟಿ ಸಾಧನೆ ಮುಗಿದಿರುತ್ತದೆ. ಅವನು ಸಮಷ್ಟಿ ಸಾಧನೆಯನ್ನು ಮಾಡುವುದು ಆವಶ್ಯಕವಾಗಿರುತ್ತದೆ.
ಶ್ರೀ. ರಾಜೇಶ ದೋಂತುಲ : ವ್ಯಷ್ಟಿ ಸಾಧನೆಯನ್ನು ಮಾಡಿ ಸಮಷ್ಟಿ ಸಾಧನೆಯನ್ನು ಮಾಡುವ ಒಬ್ಬ ರಾಜೇಶನಿದ್ದನು; ಆದರೆ ಈಗ ಇಬ್ಬರು ರಾಜೇಶರಿದ್ದಾರೆ. ಅವರಲ್ಲಿ ಒಬ್ಬನ (ಅಂದರೆ ರಾಜೇಶನ) ವ್ಯಷ್ಟಿ ಸಾಧನೆಯ ಸಂಸ್ಕಾರ ಪೂರ್ಣ ಗೊಂಡಿತು. ಆದುದರಿಂದ ಅವನು ಯಾವಾಗಲೂ ವ್ಯಷ್ಟಿ ಸಾಧನೆಯನ್ನು ಮಾಡುತ್ತಲೇ ಇರುತ್ತಾನೆ. ಇನ್ನೊಬ್ಬ ರಾಜೇಶ ನಿದ್ದಾನೆ, ಅವನು ಸಮಷ್ಟಿಯ ವಿಚಾರ ಮಾಡುತ್ತಾನೆ. ಒಂದೇ ಸಮಯಕ್ಕೆ ೨-೨ ರಾಜೇಶರು ! ಈಗ ವ್ಯಷ್ಟಿ ಸಾಧನೆಯ ಜೊತೆಗೆ ಸಮಷ್ಟಿ ಸಾಧನೆಯೂ ಆಗುತ್ತದೆ. ಆದುದರಿಂದ ಈಗ ‘ವ್ಯಷ್ಟಿ ಸಾಧನೆಯ ಕಡೆಗೆ ಗಮನ ನೀಡಬೇಕು’, ಎಂದು ಅನಿಸುವುದೇ ಇಲ್ಲ. ಗುರುದೇವರೇ, ಇದು ನಿಮ್ಮ ಕೃಪೆಯೇ ಆಗಿದೆ. ತಮ್ಮ ಕೃಪೆಯಿಂದಲೇ ನಾನು ಇಲ್ಲಿದ್ದೇನೆ ಗುರುದೇವರೇ. ಈ ರಾಜೇಶನ ಅಸ್ತಿತ್ವವು, ತಮ್ಮ ಕೃಪೆಯೇ ಆಗಿದೆ. ಬಾಕಿ ಏನೂ ಇಲ್ಲ ಗುರುದೇವರೇ !
ಪರಾತ್ಪರ ಗುರು ಡಾ. ಆಠವಲೆ : ಬಹಳ ಚೆನ್ನಾಗಿದೆ !’