ಗುರುಗಳಲ್ಲಿ ಅಪಾರ ಶ್ರದ್ಧೆಯಿರುವ ಪ.ಪೂ. ಭಕ್ತರಾಜ ಮಹಾರಾಜರು !
ಶ್ರೀ ಅನಂತಾನಂದ ಸಾಯೀಶರು ತಮ್ಮ ಶಿಷ್ಯ ಪ.ಪೂ. ಭಕ್ತರಾಜ ಮಹಾರಾಜರಿಗೆ ವಿವಿಧ ಪ್ರಸಂಗ ಗಳಿಂದ ಗುರುತತ್ತ್ವದ ಅನುಭೂತಿಯನ್ನು ಹೇಗೆ ನೀಡಿದರು ? ಭಜನೆ ಬರೆಯಲು ಹೇಗೆ ಪ್ರೇರಣೆ ನೀಡಿದರು ? ಮತ್ತು ಪೂರ್ಣತ್ವಕ್ಕೆ ಕರೆದೊಯ್ದರು, ಈ ಬಗ್ಗೆ ವೈಶಿಷ್ಟ್ಯಗಳನ್ನು ಇಲ್ಲಿ ಕೊಡಲಾಗಿದೆ.
೧. ಶ್ರೀ ಅನಂತಾನಂದ ಸಾಯೀಶರು ‘ದಿನು ಪ್ರತಿದಿನವೂ ಉಪವಾಸ ಮಾಡುತ್ತಾನೆ’, ಎಂದು ಹೇಳುವುದು ಮತ್ತು ಅದು ಸತ್ಯ ಇರುವುದಾಗಿ ದಿನುವಿಗೆ ಅನುಭವಕ್ಕೆ ಬರುವುದು
‘ಒಮ್ಮೆ ಶ್ರೀ ಅನಂತಾನಂದ ಸಾಯೀಶರ ಬಳಿಗೆ ಓರ್ವ ಬ್ರಾಹ್ಮಣನು ಬಂದು ಅವರ ದರ್ಶನ ಪಡೆದು, ”ನಾನು ಪೂರ್ತಿ ಶ್ರಾವಣಮಾಸ
ಉಪವಾಸ ಮಾಡುತ್ತೇನೆ’’, ಎಂದನು. ಅದನ್ನು ಕೇಳಿ ಶ್ರೀ ಅನಂತಾನಂದ ಸಾಯೀಶರು ಅವನಿಗೆ, ”ನಮ್ಮ ದಿನು (ಟಿಪ್ಪಣಿ) ಯಾವಾಗಲೂ
ಉಪವಾಸ ಮಾಡುತ್ತಾನೆ’’, ಎಂದರು. ಇದನ್ನು ಕೇಳಿ ದಿನಕರನಿಗೆ, ‘ನಾನಂತೂ ದಿನದಲ್ಲಿ ೪-೫ ಬಾರಿ ತಿನ್ನುತ್ತೇನೆ ಮತ್ತು ಸದ್ಗುರುಗಳು ಉಪವಾಸ ಮಾಡುತ್ತಾನೆ’; ಎನ್ನುತ್ತಿದ್ದಾರೆ ಎಂದೆನಿಸಿತು. ಆದರೆ ದಿನಕರನ ಮನಸ್ಸಿನಲ್ಲಿ ‘ಸದ್ಗುರು
ಗಳು ಹೇಳುವುದು ಸತ್ಯವೇ ಇರುತ್ತದೆ’, ಎಂಬ ಪೂರ್ಣ ವಿಶ್ವಾಸವಿತ್ತು.
ಟಿಪ್ಪಣಿ – ಶ್ರೀ ಅನಂತಾನಂದ ಸಾಯೀಶರು ಪ.ಪೂ. ಭಕ್ತರಾಜ ಮಹಾರಾಜರಿಗೆ ‘ಭಕ್ತರಾಜ’ ಎಂದು ನಾಮಕರಣ ಮಾಡುವ ಮೊದಲಿನ ಹೆಸರು ‘ದಿನಕರ’ ಎಂದಿತ್ತು.
ಒಮ್ಮೆ ದಿನಕರನು ಲೋಧಿಪುರದಿಂದ ರಾಮಜಿಯವರ ಕಡೆಗೆ (ಪ.ಪೂ. ರಾಮಾನಂದ ಮಹಾರಾಜರ ಬಳಿಗೆ) ಕಾಲ್ನಡಿಗೆಯಲ್ಲಿ (ಆಗ ಕಾಲ್ನಡಿಗೆ ಅಥವಾ ಸೈಕಲ್ ಮೇಲೆ ತಿರುಗಾಡುವುದು ಇರುತ್ತಿತ್ತು.) ಹೋಗುತ್ತಿರುವಾಗ ಅವರಿಗೆ ಇಂದೂರಿನ ಎರಡೂ ಅರಮನೆಗಳ ನಡುವೆ ಮುದ್ರಿತ ಕಾಗದದ ಒಂದು ಹಾಳೆ ಕಾಣಿಸಿತು. ಅವನು ಅದನ್ನು ಎತ್ತಿಕೊಂಡು ಓದಿದನು. ಅದು ಸಂತ ತುಕಾರಾಮರ ಗಾಥೆಯ ಪುಟವಾಗಿತ್ತು ಮತ್ತು ಅದರಲ್ಲಿ, ‘ನಾಮ ಘೆತಾ ಗ್ರಾಸೋಗ್ರಾಸಿ ತೊ ನರ ಜೆವುನಿ ಉಪವಾಸಿ | (ನಾಮವನ್ನು ಜಪಿಸುತ್ತಾ ಒಂದೊಂದು ತುತ್ತು ತಿಂದರೆ ಆ ವ್ಯಕ್ತಿಯು ಉಂಡರೂ ಉಪವಾಸವಿದ್ದಂತೆ ಆಗುತ್ತದೆ) ಎಂದು ಬರೆದಿತ್ತು. ಅದನ್ನು ಓದಿದ ನಂತರ ಅವನಿಗೆ ಸದ್ಗುರುಗಳ ಮಾತುಗಳು ನೆನಪಾದವು ಮತ್ತು ಅವನ ಮನಸ್ಸು ಶಾಂತವಾಗಿ ಅವನಿಗೆ ಸಮಾಧಾನವೆನಿಸಿತು.
೨. ಶ್ರೀ. ಅನಂತಾನಂದ ಸಾಯೀಶ ಇವರು ದಿನಕರನಿಗೆ ಭಜನೆಗಳನ್ನು ಬರೆಯಲು ಪ್ರೇರಣೆ ನೀಡುವುದಕ್ಕಾಗಿ ಪ್ರಸಂಗಗಳನ್ನು ಸೃಷ್ಟಿಸುವುದು
೨ ಅ. ಶ್ರೀ ಅನಂತಾನಂದ ಸಾಯೀಶರು ದಿನಕರನಿಗೆ ಒಂದು ವಸ್ತುವನ್ನು ತರಲು ಒಂದು ರೂಪಾಯಿಯನ್ನು ಕೊಟ್ಟು ಐದು ರೂಪಾಯಿಗಳ ಲೆಕ್ಕ ಕೇಳುವುದು : ದಿನುವಿಗೆ, ಶ್ರೀ ಭಕ್ತರಾಜ ಮಹಾರಾಜರಾಗುವ ಮೊದಲು ಭಜನೆ ಬರೆಯುವ ಜ್ಞಾನವು ಮೊದಲಿನಿಂದಲೂ ಇರಲಿಲ್ಲ. ಅವರಿಗೆ ಆ ಜ್ಞಾನ ಮತ್ತು ಪ್ರೇರಣೆ ಅವರ ಗುರುಗಳಿಂದ (ಶ್ರೀ ಅನಂತಾನಂದ ಸಾಯೀಶರಿಂದ) ದೊರಕಿತು. ಆ ಪ್ರೇರಣೆಯನ್ನು ಸೃಷ್ಟಿಸಲು ಕೆಲವೊಮ್ಮೆ ಸದ್ಗುರುಗಳು ವಾತಾವರಣವನ್ನು ಸೃಷ್ಟಿಸುತ್ತಿದ್ದರು. ಶ್ರೀ ಭಕ್ತರಾಜರೆಂದರೆ ಸದ್ಗುರುಗಳ ದಿನು ! ಒಮ್ಮೆ ಶ್ರೀ ಗುರುಗಳು ದಿನುವಿಗೆ ಒಂದು ರೂಪಾಯಿ ಕೊಟ್ಟು ಮಾರುಕಟ್ಟೆಯಿಂದ ಕೆಲವು ವಸ್ತುಗಳನ್ನು ತರಲು ಹೇಳಿದರು. ದಿನು ವಸ್ತುಗಳನ್ನು ತಂದುಕೊಟ್ಟು ಉಳಿದ ಹಣವನ್ನು ಸದ್ಗುರುಗಳ ಮುಂದೆ ಇಟ್ಟನು. ಆಗ ಸಿಟ್ಟಿನಿಂದ ಕೆಂಡಾಮಂಡಲರಾದ ಸದ್ಗುರುಗಳು ”ಈ ಹಣ ಏಕೆ ಕಡಿಮೆ ಇದೆ ? ನಾನು ನಿನಗೆ ಐದು ರೂಪಾಯಿಗಳನ್ನು ಕೊಟ್ಟಿದ್ದೆನು, ಉಳಿದ ರೂಪಾಯಿ (ಲೆಕ್ಕ) ಎಲ್ಲಿ ?’’ ಎಂದು ಕೇಳಿದರು.
೨ ಆ. ಶ್ರೀ ಅನಂತಾನಂದ ಸಾಯೀಶರ ಮೇಲೆ ಸಂಪೂರ್ಣ ಶ್ರದ್ಧೆ ಇದ್ದುದರಿಂದ ದಿನುವಿಗೆ ‘ಅವರು ಸತ್ಯವೇ ಹೇಳುತ್ತಿದ್ದಾರೆ’, ಎಂದು ಅನಿಸುವುದು; ಆದರೆ ಅವರ ಮಾತುಗಳಲ್ಲಿನ ಅರ್ಥ ತಿಳಿಯದೇ ಅವನು ಮನಸ್ಸಿನಲ್ಲಿಯೇ ಹೆದರುವುದು : ಈ ಸಮಯದಲ್ಲಿ ಅಲ್ಲಿರುವ ಜನರು, ”ಒಂದೇ ರೂಪಾಯಿ ಕೊಟ್ಟಿದ್ದಿರಿ’’, ಎಂದರು. ಆಗ ಸದ್ಗುರುಗಳು ಅವರಿಗೆ, ”ಇವನ ಬಗ್ಗೆ ನಿಮಗೇನೂ ಗೊತ್ತಿಲ್ಲ’’ ಎಂದು ಹೇಳಿದರು. ದಿನುವಿಗೆ ಪೂರ್ತಿ ವಿಶ್ವಾಸವಿತ್ತು, ‘ಸದ್ಗುರುಗಳು ಏನು ಹೇಳುವರೋ ಅದು ಸತ್ಯವಾಗಿದೆ’; ಆದರೆ ಅರ್ಥ ತಿಳಿಯದ ಕಾರಣ ಅವನು ಒಳಗೆ ಗಾಬರಿಗೊಂಡಿದ್ದನು. ಅವನ ಮನಸ್ಸಿನಲ್ಲಿ ಮೇಲಿಂದ ಮೇಲೆ ವಿಚಾರಗಳು ಬರುತ್ತಿದ್ದವು, ‘ಸದ್ಗುರುಗಳು ೫ ರೂಪಾಯಿಗಳ ಲೆಕ್ಕ ಕೇಳಿದರೆ, ಅದನ್ನು ಹೇಗೆ ಕೊಡುವುದು ? ಮರುದಿನ ಶ್ರೀ. ದತ್ತಾ ದೇಶಪಾಂಡೆಯವರನ್ನು ಕರೆದುಕೊಂಡು ದಿನು (ಶ್ರೀ ಭಕ್ತರಾಜ ಮಹಾರಾಜ) ರಾಮಬಾಗದಲ್ಲಿನ ಮಾಮಾ ಭಾಂಜೆ ಎಂಬ ದರ್ಗಾದ ಬಳಿಯ ಜಾಗದಲ್ಲಿ ಏಕಾಂತದಲ್ಲಿ ಕುಳಿತಾಗ ಅವನಿಗೆ ಸ್ಫೂರ್ತಿ ಬಂದು ಅವನು ಭಜನೆ ಬರೆದನು.
”ದಯೇಚ್ಯಾ ಸಾಗರ ನಾಥಾ | ಬುದ್ಧೀಚ್ಯಾ ದಾತಾ ಶಾಂತೀ ದ್ಯಾ ಹೃದಯಾ ||’’ (ಮರಾಠಿ)
ಅರ್ಥ : ”ದಯಾಸಾಗರನಾದ ನಾಥನೇ | ಬುದ್ಧಿಯ ದಾತನೆ, ಹೃದಯಕ್ಕೆ ಶಾಂತಿಯನ್ನು ನೀಡು ||’’
ಅದರಲ್ಲಿ ಮುಖ್ಯವಾಗಿ ಈ ರೀತಿ ಬರೆದನು, ಅದು ಹೀಗಿತ್ತು ‘ಪಂಚತತ್ತ್ವ ದೇಹ ಚರಣಿ ಖರ್ಚಿಲಾ |’ (ಮರಾಠಿ)
ಅರ್ಥ : ಪಂಚತತ್ತ್ವದಿಂದ ಕೂಡಿದ ದೇಹವು ನಿನ್ನ ಚರಣಗಳಲ್ಲಿ ಸವೆಯುತ್ತಿದೆ |
೨. ಇ. ಸದ್ಗುರುಗಳ ಗಮನವು ದಿನುವಿಗೆ ತತ್ತ್ವದೊಂದಿಗೆ ಏಕ ರೂಪ ಮಾಡುವುದರ ಕಡೆಗೆ ಇರುವುದು : ‘ಪಂಚತತ್ತ್ವಗಳಿಂದ ಕೂಡಿದ ದೇಹವನ್ನು ಗುರುಚರಣಗಳಲ್ಲಿ ಅರ್ಪಿಸಿದೆನು’, ಎಂಬ ಅಹಂಕಾರವಾಗಿರಬಹುದು; ಆದ್ದರಿಂದ ಶ್ರೀ ಗುರುಗಳು ಆ ರೀತಿ ಪ್ರಸಂಗ ನಿರ್ಮಿಸಿ ಈ ಭಜನೆಯನ್ನು ಬರೆಯುವ ಸ್ಫೂರ್ತಿಯನ್ನು ನೀಡಿರಬಹುದು. ಈ ಭಜನೆಯನ್ನು ಹಾಡಿದ ನಂತರ ಅವರು, ”ಹಿಸಾಬ್ ಮಿಲ್ ಗಯಾ |’’ (ಲೆಕ್ಕ ಸಿಕ್ಕಿತು) ಎಂದರು. ಈ ರೀತಿ ಸದ್ಗುರುಗಳ ದೃಷ್ಟಿಯು ದಿನುವಿಗೆ ತತ್ತ್ವದೊಂದಿಗೆ ಏಕರೂಪ ಮಾಡುವುದರತ್ತ ಇರುತ್ತಿತ್ತು.
೩. ಶ್ರೀ ಭಕ್ತರಾಜ ಇವರಿಗೆ ಸದ್ಗುರುಗಳ ಸಾನಿಧ್ಯವು ಕೇವಲ ೧ ವರ್ಷ ೧೦ ತಿಂಗಳ ವರೆಗೆ ಸಿಕ್ಕಿತು; ಆದರೆ ಈ ಅವಧಿಯಲ್ಲಿ ಅವರು ದಿನುವನ್ನು ಪೂರ್ಣತ್ವಕ್ಕೆ ಒಯ್ದರು. ಸದ್ಗುರುಗಳು, ”ಮೈ ದಿನುಕಿ ಮಾಲಾ ಜಪತಾ ಹೂ | ಮೈನೆ ಉಸಕೋ ಸಬ್‌ಕುಚ್ಛ ದಿಯಾ |’’ ಎಂದು ಹೇಳುತ್ತಿದ್ದರು.
೪. ಔಷಧ ಮಾರಾಟದ ವ್ಯಾಪಾರದಲ್ಲಿಯೂ ಸತತವಾಗಿ ಹರಿಚಿಂತನೆಯಲ್ಲಿರುವುದು ಮತ್ತು ಅದರಿಂದ ಅಂತಃಸ್ಫೂರ್ತಿಯಿಂದ ಭಜನೆಗಳನ್ನು ಬರೆಯುವ ಪ.ಪೂ. ಭಕ್ತರಾಜ ಮಹಾರಾಜರು !
ಶ್ರೀ ಭಕ್ತರಾಜ ಮಹಾರಾಜರು ತ್ರಿಶೂಲ ದಂತಮಂಜನ, ಮನೋಹರ ಚೂರ್ಣ, ಕೆಮ್ಮಿನ ಮಾತ್ರೆಗಳು, ನೇತ್ರಬಿಂದು. ಚಂದ್ರಬಿಂದು ಇವುಗಳನ್ನು ಮಾರಾಟ ಮಾಡಿ ಸಂಸಾರವನ್ನು ನಡೆಸುತ್ತಿದ್ದರು; ಆದರೆ ಇದೆಲ್ಲವನ್ನು ಮಾಡುತ್ತಿರುವಾಗ ಅವರ ಎಲ್ಲ ಗಮನವು ಹರಿಚಿಂತನೆ ಮತ್ತು ಭಜನೆಗಳಲ್ಲಿಯೇ ಇರುತ್ತಿತ್ತು. ಹೀಗೆಯೇ ಒಮ್ಮೆ ಔಷಧಗಳನ್ನು ಮಾರಾಟ ಮಾಡಲು ಅವರು ಮಧ್ಯಪ್ರದೇಶದಲ್ಲಿನ ಧಾರ ಮತ್ತು ಮಾಂಡ್ವಾಗೆ ಹೋಗಿರುವಾಗ ದಾರಿಯಲ್ಲಿ ಅವರು ‘ದೇವಾ, ತುಝೇಚ ಮೀ ಲೇಕರು |’ (ಅರ್ಥ : ದೇವರೇ, ನಾನು ನಿನ್ನ ಮಗುವಾಗಿದ್ದೇನೆ) ಮತ್ತು ‘ಕಸೆ ಆಳವು ಮೀ |’, (ಅರ್ಥ ನಾನು ಹೇಗೆ ಮೊರೆಯಿಡಲಿ |’,) ಈ ಭಜನೆಯನ್ನು ಬರೆದರು ಮತ್ತು ಪುನಃ ಬಂದ ನಂತರ ಗುರುಗಳ ಎದುರು ಹಾಡಿದರು.
೫. ಪೂರ್ವಸುಕೃತದಿಂದ ತುಂಬಿದ ಪ.ಪೂ. ಭಕ್ತರಾಜ ಮಹಾರಾಜರು !
ಶ್ರೀ ಅನಂತಾನಂದ ಸಾಯೀಶರು ೪೦ ವರ್ಷ ನರ್ಮದಾ ನದಿಯಲ್ಲಿ ನಿಂತು ತಪಸ್ಸು ಮಾಡಿದರು. ಅವರು ಈ ಎಲ್ಲ ತಪಸ್ಸನ್ನು ದಿನುವಿಗೆ ನೀಡಿ ದಿನೂನನ್ನು ‘ಭಕ್ತರಾಜ’ ಎಂದು ಮಾಡಿದರು. ಹಾಗೆ ನೋಡಿದರೆ ಈ ಜನ್ಮದಲ್ಲಿ ಶ್ರೀ ಭಕ್ತರಾಜ ಮಹಾರಾಜರು ಯಾವ ತಪಸ್ಸನ್ನು ಮಾಡಲಿಲ್ಲ. ಇದರ ಅರ್ಥ ಅವರ ಪೂರ್ವಸುಕೃತ ಚೆನ್ನಾಗಿತ್ತು.
– ಶ್ರೀ. ವಸಂತ (ಅಣ್ಣಾ) ಧಾಡಕರ (ಪ.ಪೂ. ಭಕ್ತರಾಜ ಮಹಾರಾಜರ ಭಕ್ತ), ಇಂದೂರ, ಮಧ್ಯಪ್ರದೇಶ. (ಆಧಾರ : ಭಕ್ತರಾಜ ಗಾರುಡಿ ಆಲಾ)