೧. ಸಂಬಂಧಪಟ್ಟ ಋಷಿಗಳು : ಶಾಂಡಿಲ್ಯಋಷಿ, ಗರ್ಗಾಚಾರ್ಯ, ಸಾಂದೀಪನಿಋಷಿ, ಮಹರ್ಷಿ ವ್ಯಾಸ ಮುಂತಾದ ಋಷಿಗಳು ಶ್ರೀಕೃಷ್ಣನ ಭಕ್ತರಾಗಿದ್ದಾರೆ.
೨. ಸಂಬಂಧಪಟ್ಟ ಭಕ್ತರು : ವಸುದೇವ, ದೇವಕಿ, ಯಶೋದಾ, ನಂದರಾಜ, ಬಲರಾಮ, ರಾಧೆ, ಗೋಪಿ, ಸುದಾಮ, ಅರ್ಜುನ, ಅಕ್ರೂರ, ಉದ್ಧವ, ಭೀಷ್ಮಾಚಾರ್ಯ, ವಿದುರ ಹೀಗೆ ಶ್ರೀಕೃಷ್ಣನ ಅನೇಕ ಭಕ್ತರಿದ್ದರು.
೩. ಶ್ರೀಕೃಷ್ಣನ ಆರಾಧನೆ ಮಾಡುವ ವಿವಿಧ ಕೃಷ್ಣಭಕ್ತರು
ಅ. ವಾತ್ಸಲ್ಯಭಾವವಿರುವ ದೇವಕಿ ಮತ್ತು ವಸುದೇವ ಹಾಗೂ ನಂದರಾಜ ಮತ್ತು ಯಶೋದಾ
ಆ. ಸಖ್ಯಭಾವವಿರುವ ಗೋಪ
ಇ. ಮಧುರಾಭಕ್ತಿಯನ್ನು ಮಾಡುವ ಗೋಪಿ ಮತ್ತು ರಾಧಾ
ಈ. ಕಾಂತಾಭಕ್ತಿ ಮಾಡುವ ರುಕ್ಮಿಣಿ, ಸತ್ಯಭಾಮಾ, ಕಾಲಿಂದಿ ಮುಂತಾದ ರಾಣಿಯರು
ಉ. ವಂದನಭಕ್ತಿ ಮಾಡುವ ಅಕ್ರೂರ
ಊ. ಸಖ್ಯಭಕ್ತಿ ಮಾಡುವ ಅರ್ಜುನ
ಎ. ಆತ್ಮನಿವೇದನೆಭಕ್ತಿ ಮಾಡುವ ಬಲಿರಾಜ
ಐ. ವಿರೋಧಭಕ್ತಿ ಮಾಡುವ ಕಂಸ, ಚಾಣೂರ, ಬಾಣಾಸುರ, ಜರಾಸಂಧ, ದುರ್ಯೋಧನ, ಶಕುನಿ, ಶಿಶುಪಾಲ ಮುಂತಾದ ದುರ್ಜನರು.
೪. ಸಂಬಂಧಪಟ್ಟ ಸಂತರು : ಕಲಿಯುಗದಲ್ಲಿ ಸಂತ ಮೀರಾ, ಸಂತ ಸೂರದಾಸ, ಸಂತ ನರಸಿ ಮೆಹತಾ, ಸಂತ ಜ್ಞಾನೇಶ್ವರ, ಸಂತ ಏಕನಾಥ, ಸಂತ ಕನಕದಾಸ, ಚೈತನ್ಯ ಮಹಾಪ್ರಭು ಮುಂತಾದ ಸಂತರು ಶ್ರೀಕೃಷ್ಣನ ಅಪಾರ ಭಕ್ತಿಯನ್ನು ಮಾಡಿದರು.
– ಕು. ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫) ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ