ಮಹರ್ಷಿಗಳ ಆಜ್ಞೆಯಿಂದ ಗೋವಾದ ಸನಾತನದ ಆಶ್ರಮದಲ್ಲಿ ಭಾವಪೂರ್ಣ ವಾತಾವರಣದಲ್ಲಿ ಆಚರಿಸಲಾದ ‘ದೀಪೋತ್ಸವ !
ಈ ಜೀವನಾಡಿಯಲ್ಲಿ ಮಹರ್ಷಿಗಳು ಹೇಳುತ್ತಾರೆ, ‘ಸನಾತನ ಸಂಸ್ಥೆಯ ೩ ಗುರುಗಳಾದ ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಈ ಮೂವರಿಗೂ ನಾವು ಆಶೀರ್ವಾದ ನೀಡುತ್ತಿದ್ದೇವೆ. ನಾವಿಂದು ನಮ್ಮ ಸಾಧಕರಿಗೆ ಹೇಳಬಯಸುವುದೇನೆಂದರೆ, ಶ್ರೀಮಹಾವಿಷ್ಣು, ಶ್ರೀಮಹಾಲಕ್ಷ್ಮೀ ಹಾಗೂ ಶ್ರೀಮಹಾಸರಸ್ವತಿ ಇವರ ಚರಣಗಳಲ್ಲಿ ಶಿರಬಾಗಿದರೆ ಯಾವ ಫಲವು ಸಿಗುವುದೋ, ಅದೇ ಫಲವು ಸಾಧಕರಿಗೆ ಸನಾತನದ ೩ ಗುರುಗಳಿಗೆ ನಮಸ್ಕಾರ ಮಾಡಿದಾಗ ಸಿಗಲಿದೆ.