(‘ಡಿಜಿಟಲ್ ಅರೆಸ್ಟ್’ ಎಂದರೆ ತನ್ನ ಸುಳ್ಳು ಗುರುತನ್ನು ಹೇಳಿಕೊಂಡು ಆನ್‌ಲೈನ್‌ನಲ್ಲಿ ಬಂಧಿಸುವುದು)

ಗೋರಖ್‌ಪುರ (ಉತ್ತರ ಪ್ರದೇಶ) – ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಭಯೋತ್ಪಾದನಾ ವಿರೋಧಿ ದಳದ (ATS) ಅಧಿಕಾರಿಗಳೆಂದು ನಟಿಸಿ ವಂಚಕರು ವೃದ್ಧರೊಬ್ಬರಿಗೆ ೫ ಲಕ್ಷ ರೂಪಾಯಿ ವಂಚಿಸಿದ್ದಾರೆ. ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಸಂತ್ರಸ್ತ ವೃದ್ಧನನ್ನು ೨ ದಿನಗಳ ಕಾಲ ನಿರಂತರ ನಿಗಾದಲ್ಲಿಟ್ಟು ಆರೋಪಿಗಳು ಈ ಹಣವನ್ನು ಲೂಟಿ ಮಾಡಿದ್ದಾರೆ.
ಆರೋಪಿಗಳು ಕಥೆ ಹೆಣೆದಿದ್ದು ಹೇಗೆ?
ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಫೆಬ್ರವರಿ ೧೭ ರಂದು ಧನುಷಧಾರಿ ತಿವಾರಿ ಅವರ ಮೊಬೈಲ್‌ಗೆ ಕರೆ ಮಾಡಿ, ಅವರ [Aadhaar Redacted] ಕಾರ್ಡ್ ಬಳಸಿ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ ಎಂದು ತಿಳಿಸಿದರು. ಇದರೊಂದಿಗೆ ವಿಚಾರಣೆಗಾಗಿ ಪುಣೆಯಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ ಕಚೇರಿಗೆ ಹಾಜರಾಗುವಂತೆ ತಿವಾರಿ ಅವರಿಗೆ ತಿಳಿಸಲಾಯಿತು. ಇದಕ್ಕೆ ತಿವಾರಿ ಅವರು ತಮಗೆ ತಕ್ಷಣ ಪುಣೆಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದಾಗ, ಮತ್ತೊಬ್ಬ ವ್ಯಕ್ತಿ ತಾನು ಗೋರಖ್‌ಪುರ ಭಯೋತ್ಪಾದನಾ ನಿರೋಧಕ ದಳದ ಅಧಿಕಾರಿ ಎಂದು ಹೇಳಿಕೊಂಡು ತಿವಾರಿ ಅವರನ್ನು ಸಂಪರ್ಕಿಸಿದನು.
ಆ ಬಳಿಕ ವಾಟ್ಸಾಪ್ ಕರೆ ಮೂಲಕ ನಿರಂತರ ಸಂಪರ್ಕದಲ್ಲಿರಲಾಯಿತು. ವಿಚಾರಣೆಯ ನೆಪದಲ್ಲಿ ತಿವಾರಿ ದಂಪತಿಗೆ ‘ಬೇರೆ ಯಾರನ್ನೂ ಸಂಪರ್ಕಿಸಬಾರದು ಮತ್ತು ಮೊಬೈಲ್ ಅನ್ನು ಸದಾ ಚಾಲ್ತಿಯಲ್ಲಿಡಬೇಕು’ ಎಂದು ಸೂಚನೆ ನೀಡಿ ಮಾನಸಿಕ ಒತ್ತಡದಲ್ಲಿ ಇಡಲಾಯಿತು. ಅಲ್ಲದೆ ವಿಚಾರಣೆ ಪೂರ್ಣಗೊಳ್ಳುವವರೆಗೆ ‘ಸುರಕ್ಷತಾ ಠೇವಣಿ’ ಎಂದು ೫ ಲಕ್ಷ ರೂಪಾಯಿ ಜಮಾ ಮಾಡಲು ಒತ್ತಾಯಿಸಲಾಯಿತು. ಭೀತಿಯಿಂದಾಗಿ ತಿವಾರಿ ಅವರು ತಮ್ಮ ಮುದ್ದತಿ ಠೇವಣಿಯನ್ನು (FD) ಮುರಿದು ಆರೋಪಿಗಳು ನೀಡಿದ ಖಾತೆಗೆ ಈ ಹಣವನ್ನು ವರ್ಗಾಯಿಸಿದರು.
ಹಣ ಬಂದ ನಂತರ ಆರೋಪಿಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮತ್ತು ಭಾರತ ಸರಕಾರದ ಮುದ್ರೆಯಂತಹ ನಕಲಿ ದಾಖಲೆಗಳನ್ನು ವಾಟ್ಸಾಪ್ ಮೂಲಕ ತಿವಾರಿ ಅವರಿಗೆ ಕಳುಹಿಸಿ ನಂಬಿಕೆ ದ್ರೋಹ ಮಾಡಲು ಯತ್ನಿಸಿದ್ದಾರೆ. ಮರುದಿನವೇ ಅವರ ಎಲ್ಲಾ ಮೊಬೈಲ್ ಸಂಖ್ಯೆಗಳು ಸ್ವಿಚ್ ಆಫ್ ಆದಾಗ ತಮಗೆ ವಂಚನೆಯಾಗಿರುವುದು ತಿವಾರಿ ಅವರ ಗಮನಕ್ಕೆ ಬಂದಿದೆ. ಇದಾದ ಬಳಿಕ ಅವರು ‘ಸೈಬರ್ ಹೆಲ್ಪ್‌ಲೈನ್’ ಸಂಖ್ಯೆ ೧೯೩೦ ಗೆ ದೂರು ನೀಡಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು! – ಪೊಲೀಸ್ ವರಿಷ್ಠಾಧಿಕಾರಿ
ಪೊಲೀಸ್ ವರಿಷ್ಠಾಧಿಕಾರಿ (ಅಪರಾಧ ವಿಭಾಗ) ಸುಧೀರ್ ಜೈಸ್ವಾಲ್ ಅವರು ಮಾತನಾಡಿ, ಈ ಪ್ರಕರಣದಲ್ಲಿನ ಬ್ಯಾಂಕ್ ಖಾತೆಗಳು, ಮೊಬೈಲ್ ಸಂಖ್ಯೆಗಳು ಮತ್ತು ಡಿಜಿಟಲ್ ವಹಿವಾಟುಗಳನ್ನು ಪರಿಶೀಲಿಸಲಾಗುತ್ತಿದ್ದು, ಲಭ್ಯವಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ