ಸಂತರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರನ್ನು ‘ಅವತಾರವೆಂದು ಸಂಬೋಧಿಸುವುದರ ಹಿಂದಿನ ಕಾರಣ ! 

‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ಎಂದಿಗೂ ತಮ್ಮನ್ನು ‘ಅವತಾರವೆಂದು ಹೇಳಿಲ್ಲ. ಸನಾತನ ಸಂಸ್ಥೆಯು ಎಂದಿಗೂ ಹೀಗೆ ಹೇಳುವುದಿಲ್ಲ. ‘ನಾಡಿಭವಿಷ್ಯ ಎಂಬ ಪ್ರಾಚೀನ ಹಾಗೂ ಪ್ರಗಲ್ಭ ಜೋತಿಷ್ಯಶಾಸ್ತ್ರಕ್ಕನುಸಾರ ಸಪ್ತರ್ಷಿಗಳು ಪ್ರತಿಯೊಬ್ಬ ವ್ಯಕ್ತಿಯ ಭವಿಷ್ಯವನ್ನು ಬರೆದಿಟ್ಟಿದ್ದಾರೆ. ತಮಿಳುನಾಡಿನ ಜೀವ ನಾಡಿಪಟ್ಟಿಯ ವಾಚಕರಾದ ಪೂ. ಡಾ. ಓಂ ಉಲಗನಾಥನ್‌ರವರ ಮಾಧ್ಯಮದಿಂದ ಸಪ್ತರ್ಷಿಗಳು ಜೀವನಾಡಿಪಟ್ಟಿಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶ್ರೀವಿಷ್ಣುವಿನ ಅವತಾರವಾಗಿದ್ದಾರೆಂದು ಬರೆದಿಟ್ಟಿದ್ದಾರೆ. ಸಪ್ತರ್ಷಿಗಳ ಆಜ್ಞೆಯಿಂದ ಹಾಗೂ ನಾಡಿಪಟ್ಟಿಯಲ್ಲಿ ಹೇಳಿದಂತೆ ಜನ್ಮೋತ್ಸವದ ದಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶ್ರೀವಿಷ್ಣುವಿನ ರೂಪದ ವಸ್ತ್ರಾಲಂಕಾರಗಳನ್ನು ಧರಿಸಿದ್ದಾರೆ.