ಶೇ ೬೯ ರಷ್ಟು ಆಧ್ಯಾತ್ಮಿಕ ಮಟ್ಟದ ಧರ್ಮಪ್ರಸಾರಕ ಶ್ರೀ. ಕಾಶಿನಾಥ ಪ್ರಭು ಇವರಿಂದ ಶೇ ೬೫ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ಗುರುಪ್ರಸಾದ ಗೌಡ ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು

ಶ್ರೀ. ಕಾಶಿನಾಥ ಪ್ರಭು

 

ಶ್ರೀ. ಗುರುಪ್ರಸಾದ ಗೌಡ

೧. ನಮ್ರತೆ

ಶ್ರೀ. ಕಾಶಿನಾಥ ಪ್ರಭು (ಕಾಶಿನಾಥಣ್ಣ) ಇವರು ಸಾಧಕರ ಜೊತೆಯಲ್ಲಿ ಬಹಳ ನಮ್ರತೆಯಿಂದ ಮಾತನಾಡುತ್ತಾರೆ. ಅವರ ಮಾತಿನಿಂದ ಸಾಧಕರಿಗೆ ಆಧಾರವೆನಿಸುತ್ತದೆ. ಸಾಧಕನಾಗಿರಲಿ ಅಥವಾ ಸಮಾಜದ ವ್ಯಕ್ತಿಯಾಗಿರಲಿ, ಅವರು ಎಲ್ಲರ ಜೊತೆಯಲ್ಲಿ ನಮ್ರವಾಗಿಯೇ ಮಾತನಾಡುತ್ತಾರೆ.

೨. ಕೇಳಿಕೊಳ್ಳುವ ವೃತ್ತಿ

ನಿಜವೆಂದರೆ ಕಾಶಿನಾಥಅಣ್ಣನವರಿಗೆ ಸೇವೆಯ ಸಂದರ್ಭದಲ್ಲಿ ಪ್ರತಿಯೊಂದು ವಿಷಯದ ಮಾಹಿತಿಯಿರುತ್ತದೆ ಮತ್ತು ಅನುಭವವೂ ಇದೆ, ಆದರೂ ಅವರು ಪ್ರತಿಯೊಂದು ಕೃತಿಯನ್ನು ಪೂ. ರಮಾನಂದ ಅಣ್ಣನವರಲ್ಲಿ ಕೇಳಿಕೊಂಡೇ ಮಾಡುತ್ತಾರೆ. ಆದುದರಿಂದ ಆ ಕೃತಿಯು ಯೋಗ್ಯವಾಗಿ ಮತ್ತು ಸಂತರ ಅಪೇಕ್ಷಿತ ರೀತಿಯಲ್ಲಿ ಪರಿಪೂರ್ಣವಾಗುತ್ತದೆ.

೩. ಇತರರ ವಿಚಾರ ಮಾಡುವುದು

ಅವರು ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದು ಕೊಳ್ಳುವುದರ ಜೊತೆಗೆ, ಸಾಧಕರ ಆರೋಗ್ಯ ಮತ್ತು ಅವರ ಸ್ಥಿತಿಯ ಅಭ್ಯಾಸವನ್ನು ಮಾಡಿ ಸಂತರಿಗೆ ಅದರ ವರದಿ ಕೊಡುತ್ತಾರೆ. ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಅನುಭವವಿದೆ. ಅದಕ್ಕನುಸಾರವಾಗಿ ಅವರು ಸಾಧಕರ ಆರೋಗ್ಯದ ಕಾಳಜಿಯನ್ನು ತೆಗೆದುಕೊಳ್ಳುತ್ತಾರೆ.

೪. ತತ್ತ್ವನಿಷ್ಠೆ

ಸಾಧಕರಿಂದ ಸೇವೆಯಲ್ಲಿ ಕೆಲವು ತಪ್ಪುಗಳಾದರೆ, ಕಾಶಿನಾಥ ಅಣ್ಣನವರು ಪ್ರತಿಯೊಂದು ಬಾರಿ ಸಾಧಕರಿಗೆ ಆ ತಪ್ಪುಗಳನ್ನು ತತ್ತ್ವನಿಷ್ಠೆಯಿಂದ ಹೇಳುತ್ತಾರೆ.

೫. ಅಲ್ಪ ಅಹಂ

ಕಾಶಿನಾಥಅಣ್ಣನವರು ಪ್ರತಿಯೊಂದು ಪ್ರಸಂಗದಲ್ಲೂ ಕಡಿಮೆತನವನ್ನು ತೆಗೆದುಕೊಳ್ಳುತ್ತಾರೆ. ಸೇವೆಯಲ್ಲಿ ತಪ್ಪುಗಳಾದರೆ ‘ನಾನೇ ಕಡಿಮೆ ಬಿದ್ದೆ’, ಹೀಗೆ ಅವರ ವಿಚಾರವಿರುತ್ತದೆ.

೬. ಸೇವೆಯ ತಳಮಳ

ಅ. ಪೂ. ರಮಾನಂದಅಣ್ಣನವರು ಕಾಶಿನಾಥಅಣ್ಣನವರಿಗೆ ಸೇವೆಯನ್ನು ಹೇಳುತ್ತಾರೆ. ಸೇವೆ ಹೇಳಿದ ತಕ್ಷಣವೇ ಆ ಸೇವೆಯ ಬಗೆಗಿನ ಚಿಂತನೆಯನ್ನು ಅವರು ಪ್ರಾರಂಭಿಸುತ್ತಾರೆ. ನಂತರ ಕಾಶಿನಾಥ ಅಣ್ಣನವರು ಆ ಚಿಂತನೆಯನ್ನು ಬರೆದು ಪೂ. ರಮಾನಂದ ಅಣ್ಣನವರಿಗೆ ತೋರಿಸುತ್ತಾರೆ ಮತ್ತು ಅದಕ್ಕನುಸಾರವಾಗಿ ಅವರು ಕೃತಿಯನ್ನು ಮಾಡುತ್ತಾರೆ.

ಆ. ಅವರು ತಮ್ಮ ಹತ್ತಿರ ಇರುವ ಸೇವೆಯನ್ನು ಹಗಲು ರಾತ್ರಿ ಒಂದು ಮಾಡಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ. ಯಾವುದೇ ಸೇವೆ ಇರಲಿ, ಅವರು ‘ನನ್ನಿಂದ ಆಗುವುದಿಲ್ಲ’, ಎಂದು ಯಾವತ್ತೂ ಹೇಳುವುದಿಲ್ಲ; ಪ್ರಯತ್ನಿಸುತ್ತೇನೆ ಎನ್ನುತ್ತಾರೆ. ಹೀಗೆ ಎಲ್ಲ ಸೇವೆಗಳ ಸಂದರ್ಭದಲ್ಲಿ ಕಾಶಿನಾಥಅಣ್ಣನವರ ಪ್ರಯತ್ನವಿರುತ್ತದೆ.

ಇ. ‘ಕಾಶಿನಾಥಅಣ್ಣನವರು ಪೂ. ರಮಾನಂದಅಣ್ಣನವರ ಆಜ್ಞಾಪಾಲನೆಯನ್ನು ಮಾಡುತ್ತಾರೆ. ಪೂ. ರಮಾನಂದಅಣ್ಣನವರು ಕಾಶಿನಾಥಅಣ್ಣನವರಿಗೆ ಯಾವ ಸೇವೆಯನ್ನು ಮಾಡಲು ಹೇಳಿರುತ್ತಾರೋ ಆ ಸೇವೆಯನ್ನು ಅವರು ತಳಮಳದಿಂದ ಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಅವರು ಸಾಧಕರ ಬೆಂಬೆತ್ತುವಿಕೆ ಮಾಡಿ ಆ ಸೇವೆಯ ನೆನಪು ಮಾಡಿಕೊಟ್ಟು ಅವರಿಗೆ ಆ ಸೇವೆಯ ಸಮಯಮಿತಿಯನ್ನು ಹಾಕಿಕೊಡುತ್ತಾರೆ.

೭. ತತ್ಪರತೆಯಿಂದ ಸೇವೆಯ ವರದಿಯನ್ನು ಕೊಡುವುದು

ಕಾಶಿನಾಥಅಣ್ಣನವರು ಪೂ. ರಮಾನಂದಅಣ್ಣನವರಿಗೆ ತತ್ಪರತೆಯಿಂದ ಪ್ರತಿಯೊಂದು ಸೇವೆಯ ವರದಿಯನ್ನು ಕೊಡುತ್ತಾರೆ. ಪೂ. ರಮಾನಂದಅಣ್ಣನವರು ಪ್ರತಿಬಾರಿ ಸಾಧಕರಿಗೆ “ಕಾಶಿನಾಥ ಅಣ್ಣನವರು ಸೇವೆ ನಂತರ ವರದಿಯನ್ನು ಕೊಡುವ ರೀತಿ ಎಲ್ಲ ಸಾಧಕರೂ ಸೇವೆಯ ವರದಿಯನ್ನು ಕೊಡಬೇಕು” ಎಂದು ಹೇಳುತ್ತಾರೆ.

೮. ಭಾವ

ಅ. ನಾನು ಕಾಶಿನಾಥಅಣ್ಣನವರೊಂದಿಗೆ ಮಾತನಾಡುವಾಗ ನನಗೆ ಅವರ ಮಾತಿನಲ್ಲಿ ಭಾವದ ಅರಿವಾಗುತ್ತದೆ.

ಆ. ಕಾಶಿನಾಥಅಣ್ಣನವರು ಸಂತರ ಜೊತೆಗೆ ಮಾತನಾಡುವಾಗ, ಯಾವಾಗಲೂ ಕೈಜೋಡಿಸಿಕೊಂಡೇ ನಿಂತಿರುತ್ತಾರೆ. ಆ ಸಮಯದಲ್ಲಿ ಅವರು ಭಾವಾವಸ್ಥೆಯಲ್ಲಿರುತ್ತಾರೆ.

ಇ. ಸತ್ಸಂಗದಲ್ಲಿ ಪೂ. ರಮಾನಂದಅಣ್ಣನವರು ಗುರುದೇವರ ಬಗ್ಗೆ ಹೇಳುತ್ತಿರುವಾಗ ಕಾಶಿನಾಥಅಣ್ಣನವರ ಭಾವಜಾಗೃತಿಯಾಗುತ್ತದೆ. ‘ಎಲ್ಲವನ್ನೂ ಗುರುದೇವರು ಮತ್ತು ಸಂತರು ಮಾಡುತ್ತಾರೆ’, ಎಂದು ಅವರು ಪುನಃ ಪುನಃ ಹೇಳುತ್ತಾರೆ. ‘ಗುರುದೇವರು ನಮಗಾಗಿ ಏನೆಲ್ಲ ಮಾಡಿದ್ದಾರೆ ! ಇಲ್ಲಿಯವರೆಗೆ ಅವರೇ ಎಲ್ಲವನ್ನು ಮಾಡಿದ್ದಾರೆ ಇನ್ನು ಮುಂದೆಯೂ ಅವರೇ ಮಾಡುವವರಿದ್ದಾರೆ’, ಎಂಬ ಭಾವವು ಸತತವಾಗಿ ಅವರ ಮನಸ್ಸಿನಲ್ಲಿರುತ್ತದೆ.

ಪ್ರಾರ್ಥನೆ

ಕಾಶೀನಾಥ ಅಣ್ಣನವರಲ್ಲಿ ಬಹಳಷ್ಟು ಗುಣಗಳಿವೆ; ಆದರೆ ಅವುಗಳಿಂದ ಕಲಿಯಲು ಮತ್ತು ಆ ಗುಣಗಳನ್ನು ಕೃತಿಯಲ್ಲಿ ತರಲು ನಾನು ಕಡಿಮೆ ಬೀಳುತ್ತಿದ್ದೇನೆ. ನಾನು ಗುರುದೇವರಿಗೆ ಶರಣಾಗತಭಾವದಿಂದ ಪ್ರಾರ್ಥನೆಯನ್ನು ಮಾಡುತ್ತೇನೆ, ಕಾಶಿನಾಥ ಅಣ್ಣನವರಲ್ಲಿರುವ ಗುಣಗಳು ನನ್ನಲ್ಲೂ ಸಹ ನಿರ್ಮಾಣವಾಗಲು ನನ್ನಿಂದ ತಳಮಳದಿಂದ ಪ್ರಯತ್ನವಾಗಲಿ.

– ಶ್ರೀ. ಗುರುಪ್ರಸಾದ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೫), ಮಂಗಳೂರು