ಬಾಂಗ್ಲಾದೇಶದ ಶಿವಗಂಜ್ ಉಪಜಿಲ್ಲೆಯ ಹೆಸರು ಬದಲಾಯಿಸಿ ‘ಮಹಾಸ್ಥಾನ’ ಆಗಲಿದೆ !

  • ಕಟ್ಟರವಾದಿ ಇಸ್ಲಾಮಿಕ್ ಗುಂಪುಗಳ ಒತ್ತಡಕ್ಕೆ ಮಣಿದ ಆಡಳಿತ ಮಂಡಳಿಯ ನಿರ್ಧಾರ

  • ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐ.ಎಸ್.ಐ.’ ಕಟ್ಟವಾದಿಗಳಿಗೆ ಆರ್ಥಿಕ ನೆರವು ನೀಡುತ್ತಿರುವ ಸಂಶಯ

ಢಾಕಾ (ಬಾಂಗ್ಲಾದೇಶ) – ಇಲ್ಲಿನ ಗಾಯಬಾಂಧಾ ಜಿಲ್ಲೆಯ ‘ಸನಾತನ ಧರ್ಮ ಸಂಕೀರ್ಣ’ದ ವಿರುದ್ಧ ಕಟ್ಟರವಾದಿ ಮುಸಲ್ಮಾನರು ಪ್ರತಿಭಟನೆ ನಡೆಸಿ, ಬೆದರಿಕೆ ಹಾಕಿದ್ದರಿಂದ ಬಾಂಗ್ಲಾದೇಶ ಸರಕಾರ ಅದರ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿದ ಘಟನೆ ಇತ್ತೀಚೆಗಷ್ಟೇ ನಡೆದಿದೆ. ಇಂತಹ ಪರಿಸ್ಥಿತಿಯಲ್ಲಿ, ಕಟ್ಟರವಾದಿಯರ ಬೇಡಿಕೆಗೆ ಮಣಿದ ಆಡಳಿತ ಮಂಡಳಿಯು ಬೊಗ್ರಾ ಜಿಲ್ಲೆಯ ‘ಶಿವಗಂಜ್’ ಉಪಜಿಲ್ಲೆಯ ಹೆಸರನ್ನು ‘ಮಹಾಸ್ಥಾನ್’ ಎಂದು ಬದಲಾಯಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂಬ ವಿಷಯ ಮುನ್ನೆಲೆಗೆ ಬಂದಿದೆ. ಈ ಹೆಸರಿನಲ್ಲಿರುವ ಹಿಂದೂ ಧರ್ಮದ ಸಂದರ್ಭದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ‘ಆಡಳಿತ ಮಂಡಳಿಯ ಈ ಕ್ರಮವು ದೇಶದ ಐತಿಹಾಸಿಕ ಮತ್ತು ಧಾರ್ಮಿಕ ಗುರುತುಗಳಿಗೆ ಸಂಬಂಧಿಸಿದ ಚಿಹ್ನೆಗಳನ್ನು ಹಂತಹಂತವಾಗಿ ತೆಗೆದುಹಾಕುವ ಪ್ರಕ್ರಿಯೆಯ ಆರಂಭವಾಗಿದೆ’ ಎಂದು ಹೇಳಲಾಗುತ್ತಿದೆ.

ಲಕ್ಷ್ಮೀಪುರ, ಶಂಭುಗಂಜ್, ನಾರಾಯಣಗಂಜ್, ಬ್ರಾಹ್ಮಣಬಾರಿಯಾ, ಜಾಯಪುರಹಾಟ್, ಠಾಕೂರಗಾಂವ್ ಮತ್ತು ಗೋಪಾಲಗಂಜ್ ಗ್ರಾಮಗಳ ಹೆಸರು ಬದಲಾಯಿಸುವ ಸಂಚು!

ಮೂಲಗಳ ಪ್ರಕಾರ, ಶಿವಗಂಜ್ ಪ್ರಕರಣವು ಕೇವಲ ಒಂದು ಪ್ರತ್ಯೇಕ ಘಟನೆಯಲ್ಲ. ಭವಿಷ್ಯದಲ್ಲಿ ಲಕ್ಷ್ಮೀಪುರ, ಶಂಭುಗಂಜ್, ನಾರಾಯಣಗಂಜ್, ಬ್ರಾಹ್ಮಣಬಾರಿಯಾ, ಜಾಯಪುರಹಾಟ್, ಠಾಕೂರಗಾಂವ್ ಮತ್ತು ಗೋಪಾಲಗಂಜನಂತಹ ಇತರ ಸ್ಥಳಗಳ ಹೆಸರುಗಳ ಸಂದರ್ಭದಲ್ಲೂ ಇಂತಹದ್ದೇ ಒತ್ತಡವನ್ನು ತರಬಹುದು ಎಂಬ ಆತಂಕವನ್ನು ಹಿಂದೂ ಸಮುದಾಯ ವ್ಯಕ್ತಪಡಿಸುತ್ತಿದೆ. ಈ ವಿಷಯದ ಕುರಿತು ಇದುವರೆಗೆ ಯಾವುದೇ ಅಧಿಕೃತ ರಾಷ್ಟ್ರೀಯ ನೀತಿಯನ್ನು ಘೋಷಿಸದಿದ್ದರೂ, ಈ ಚರ್ಚೆಗಳಿಂದಾಗಿ ಹಿಂದೂ ಸಮುದಾಯದಲ್ಲಿ ತಲ್ಲಣ ನಿರ್ಮಾಣವಾಗಿದೆ.

‘ಢಾಕೇಶ್ವರಿ ದೇವಿ’ಯ ಹೆಸರಿನಲ್ಲಿರುವ ರಾಜಧಾನಿ ಢಾಕಾದ ಹೆಸರನ್ನು ‘ಜಹಾಂಗೀರನಗರ’ ಎಂದು ಬದಲಾಯಿಸುವ ಸಂಚು !

ಢಾಕಾದ ‘ಬ್ಲಿಟ್ಜ್ ವೀಕ್ಲಿ’ಯ ಹಿರಿಯ ಸಂಪಾದಕ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ ಅವರೊಂದಿಗೆ ‘ಸನಾತನ ಪ್ರಭಾತ’ದ ಪ್ರತಿನಿಧಿಯು ಈ ಕುರಿತು ಚರ್ಚಿಸಿದರು. ಆಗ ಚೌಧರಿ ಅವರು, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂ ವಿರೋಧಿ ಚಟುವಟಿಕೆಗಳಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್’ ಬೆಂಬಲ ಮತ್ತು ಆರ್ಥಿಕ ನೆರವು ನೀಡುತ್ತಿದೆ ಎಂದು ಹೇಳಿದರು. ನಮ್ಮ ಪ್ರಾಚೀನ ನಗರವಾದ ಢಾಕಾದ ಹೆಸರು ಇಲ್ಲಿನ ಢಾಕೇಶ್ವರಿ ದೇವಿಯ ದೇವಸ್ಥಾನದಿಂದ ಬಂದಿದೆ. ಇದನ್ನು ಮೊಘಲರ ಕಾಲದಲ್ಲಿ ಜಹಾಂಗೀರನಗರ ಎಂದು ಕರೆಯಲಾಗುತ್ತಿತ್ತು. ಈಗಲೂ ಮತಾಂಧ ಮುಸಲ್ಮಾನರು ರಾಜಧಾನಿಯ ಹೆಸರನ್ನು ಬದಲಾಯಿಸಿ ಜಹಾಂಗೀರನಗರ ಮಾಡಲು ಧ್ವನಿ ಎತ್ತುತ್ತಿರುತ್ತಾರೆ. ಆದಾಗ್ಯೂ, ‘ಢಾಕೇಶ್ವರಿ ದೇವಿಯು ಢಾಕಾ ನಗರವನ್ನು ರಕ್ಷಿಸುತ್ತಾಳೆ’ ಎಂಬ ನಂಬಿಕೆ ಬಹುತೇಕ ನಾಗರಿಕರಲ್ಲಿದೆ. ನಾವೆಲ್ಲರೂ ಬಂಗಾಳಿಗಳಾಗಿದ್ದೇವೆ, ಆದರೆ ಕಟ್ಟರಪಂಥೀಯ ಮುಸಲ್ಮಾನರು ಕೇವಲ ಶೇಕಡಾ ೩ ರಷ್ಟಿದ್ದಾರೆ. ನಾವು ಎಂದಿಗೂ ಢಾಕಾದ ಹೆಸರನ್ನು ಬದಲಾಯಿಸಲು ಬಿಡುವುದಿಲ್ಲ ಎಂದು ಚೌಧರಿ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ಸಂಪಾದಕೀಯ ನಿಲುವು

ಭಾರತದ ಹಿಂದೂಗಳೇ, ಒಂದು ಕಾಲದಲ್ಲಿ ಹಿಂದೂಗಳ ‘ಬಂಗಭೂಮಿ’ಯಾಗಿದ್ದ ಪ್ರದೇಶದ ಇಂದಿನ ದುಃಸ್ಥಿತಿಯನ್ನು ನೋಡಿ ! ಈಗಲಾದರೂ ನೀವು ಜಾಗೃತರಾಗದಿದ್ದರೆ, ನಿಮ್ಮ ರಾಜ್ಯದ ಪರಿಸ್ಥಿತಿಯೂ ಹೀಗಾಗಲು ಕೇವಲ ಕೆಲವು ದಶಕಗಳಷ್ಟೇ ಬಾಕಿ ಇವೆ ಎಂಬುದನ್ನು ಮರೆಯಬೇಡಿ !