
ಕಾಸರಗೋಡು (ಕೇರಳಮ್) – ಮದರಸಾ ಶಿಕ್ಷಕನೊಂದಿಗೆ ಮದುವೆ ನಿಶ್ಚಯವಾಗಿದ್ದರಿಂದ ಮನನೊಂದ ಕೇರಳಮ್‌ದ ಕಾಸರಗೋಡು ಜಿಲ್ಲೆಯ ಚೆರುವತ್ತೂರಿನ 19 ವರ್ಷದ ಕಾಲೇಜು ಯುವತಿಯೊಬ್ಬಳು ಇಲಿ ಪಾಷಾಣ (ವಿಷ) ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಯುವತಿಯನ್ನು ಕೈತಕ್ಕಾಡ್-ಪಯ್ಯಂಕಿ ಬಿಸ್ಮಿಲ್ಲಾ ರಸ್ತೆಯ ನಿವಾಸಿಗಳಾದ ಯು. ಅಬ್ದುಲ್ ರೆಹಮಾನ್ ಮತ್ತು ಯು. ಎಂ. ಫಾತಿಮಾ ದಂಪತಿಯ ಪುತ್ರಿ ಮುಬಶಿರಾ ಎಂದು ಗುರುತಿಸಲಾಗಿದೆ.
ಮುಬಶಿರಾ ಅಲ್ವರ್ದಾ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇತ್ತೀಚೆಗಷ್ಟೇ ಆಕೆಯ ಪೋಷಕರು ಮದರಸಾ ಶಿಕ್ಷಕನೊಬ್ಬನೊಂದಿಗೆ ಆಕೆಯ ಮದುವೆಯನ್ನು ನಿಶ್ಚಯಿಸಿದ್ದರು ಮತ್ತು ನಿಶ್ಚಿತಾರ್ಥವೂ ನಡೆದಿತ್ತು. ಚಂದೇರಾ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ವಿಷ ಸೇವಿಸಿದ ಬಳಿಕ ಮುಬಶಿರಾಳನ್ನು ಜೂನ್ 2 ರಂದು ಮಂಗಳೂರಿನ (ಕರ್ನಾಟಕ) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಯಿತಾದರೂ, ಜೂನ್ 10 ರಂದು ಸಂಜೆ 5.30 ರ ಸುಮಾರಿಗೆ ಆಕೆ ಮೃತಪಟ್ಟಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!