ಉಪ್ಪಳಾ (ಕೇರಳ) ಇಲ್ಲಿನ ಕೊಂಡೆವೂರ ಮಠದ ಮಠಾಧೀಶರಾದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರಿಂದ ಸನಾತನದ ಆಶ್ರಮಕ್ಕೆ ಸೌಜನ್ಯದ ಭೇಟಿ !

ರಾಮನಾಥಿ (ಗೋವಾ) – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಹಿಂದೂ ರಾಷ್ಟ್ರ ಸ್ಥಾಪನೆಯ ಮಹಾ ಸಂಕಲ್ಪವನ್ನು ಮಾಡಿದ್ದಾರೆ. ಅದರಂತೆ ಶೀಘ್ರದಲ್ಲೇ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿದೆ. ಅದಕ್ಕಾಗಿ ನಾವೆಲ್ಲರೂ ಸಂಘಟಿತರಾಗಿ ಪ್ರಯತ್ನಿಸಬೇಕು. ಈ ಕಾರ್ಯಕ್ಕೆ ದೈವಿ ಅಧಿಷ್ಠಾನ ಲಭಿಸಿ, ಎಲ್ಲರಿಗೂ ಶಕ್ತಿ ಸಿಗಲಿ ಎಂದು ಕೇರಳದ ಕಾಸರಗೋಡಿನ ಉಪ್ಪಳಾದ ಶ್ರೀ ಕೊಂಡೆವೂರು ಮಠದ ಮಠಾಧೀಶರಾದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಸಾಧಕರಿಗೆ ಆಶೀರ್ವಚನ ರೂಪದ ಮಾರ್ಗದರ್ಶನ ನೀಡಿದರು.

ಸ್ವಾಮೀಜಿಯವರು ಜೂನ್ 13 ರಂದು ಇಲ್ಲಿನ ಸನಾತನದ ಆಶ್ರಮಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಈ ವೇಳೆ ಸ್ವಾಮೀಜಿಯವರ ಭಕ್ತರು ಹಾಗೂ ಮ್ಹಾಪಸಾದ ಉದ್ಯಮಿಗಳಾದ ಶ್ರೀ. ಪರೇಶ ರಾಯಕರ ಮತ್ತು ಶ್ರೀ. ಶ್ಯಾಮರಾವ ರಾಯಕರ ಉಪಸ್ಥಿತರಿದ್ದರು. ‘ಸನಾತನ ಪ್ರಭಾತ’ದ ಉಪಸಂಪಾದಕರಾದ ಶ್ರೀ. ಉಮೇಶ ನಾಯಕ ಅವರು ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರಿಗೆ ಪುಷ್ಪಹಾರ ಹಾಕಿ, ಶಾಲು ಹಾಗೂ ಶ್ರೀಫಲ ನೀಡಿ ಸನ್ಮಾನಿಸಿದರು. ಸ್ವಾಮೀಜಿಯವರಿಗೆ ಸನಾತನದ ಗ್ರಂಥಗಳನ್ನು ಕಾಣಿಕೆಯಾಗಿ ನೀಡಲಾಯಿತು. ಸಾಧಕರಾದ ಶ್ರೀ. ಯೋಗೇಶ ಗಂದ್ರೆ ಅವರು ಆಶ್ರಮದಲ್ಲಿ ನಡೆಯುತ್ತಿರುವ ರಾಷ್ಟ್ರ, ಧರ್ಮ, ಹಾಗೂ ಆಧ್ಯಾತ್ಮಿಕ ಸಂಶೋಧನೆಯ ಕಾರ್ಯಗಳ ಪರಿಚಯ ಮಾಡಿಕೊಟ್ಟರು.
ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾ ಸ್ವಾಮೀಜಿಯವರು, ಆಶ್ರಮದಲ್ಲಿ ದೈವಿ, ಚೈತನ್ಯದಾಯಕ ಅನುಭೂತಿಯಾಯಿತು. ಆಶ್ರಮದಲ್ಲಿ ಎಲ್ಲೆಡೆ ಸಕಾರಾತ್ಮಕ ಸ್ಪಂದನಗಳು ಕಂಡುಬಂದವು. ಆಶ್ರಮದ ವಾತಾವರಣವು ಶಾಂತ ಮತ್ತು ಸ್ವಚ್ಛವಾಗಿದೆ ಎಂದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”