
ಅಮರಾವತಿ – ದೇಶದಲ್ಲಿ ‘ನೀಟ್’ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನಂತರ, ಈಗ ಮತ್ತೆ ಜೂನ್ 21 ರಂದು ‘ನೀಟ್’ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಂಬಯಿನಿಂದ ಹೆಲಿಕಾಪ್ಟರ್ ಮೂಲಕ ಅಮರಾವತಿ ನಗರಕ್ಕೆ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ತರಲಾಯಿತು. ಈ ಸಂದರ್ಭದಲ್ಲಿ 15 ವಾಹನಗಳ ಬೆಂಗಾವಲು ಪಡೆ ಮತ್ತು ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಇಷ್ಟೊಂದು ಬೃಹತ್ ಭದ್ರತೆಯ ನಡುವೆ ಈ ಪ್ರಶ್ನೆಪತ್ರಿಕೆಗಳನ್ನು ಅಮರಾವತಿ ಜಿಲ್ಲಾ ಖಜಾನೆ ಭವನಕ್ಕೆ ತಲುಪಿಸಲಾಯಿತು. ವಿಮಾನ ನಿಲ್ದಾಣದಿಂದ ಖಜಾನೆ ಭವನದವರೆಗಿನ ಸಂಪೂರ್ಣ ಮಾರ್ಗವನ್ನು ಬಿಗಿ ಭದ್ರತೆಯಲ್ಲಿಡಲಾಗಿತ್ತು. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF) ಯೋಧರನ್ನೂ ಸಹ ಅಲ್ಲಿ ನಿಯೋಜಿಸಲಾಗಿತ್ತು.
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು
‘ಒಂದು ವೇಳೆ ಇಂದಿರಾ ಗಾಂಧಿಯವರು ಇಂದು ಬದುಕಿದ್ದರೆ, ಅವರು ಭಾಜಪವನ್ನು ನಿಷೇಧಿಸಲು ಹಿಂಜರಿಯುತ್ತಿರಲಿಲ್ಲ!’
ಕೇರಳ: ಮದರಸಾ ಶಿಕ್ಷಕನೊಂದಿಗೆ ಮದುವೆ ನಿಶ್ಚಯವಾಗಿದ್ದಕ್ಕೆ ಬೇಸತ್ತು 19 ವರ್ಷದ ಯುವತಿ ಆತ್ಮಹತ್ಯೆ
ಬಂಗಾಳ ಸೌರಶಕ್ತಿ ಹಗರಣದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮಾಜಿ ನಗರಾಧ್ಯಕ್ಷನನ್ನು ಕೇರಳದಿಂದ ಬಂಧನ : Bengal Solar Scam