ತಮ್ಮ ಅಸ್ತಿತ್ವದಿಂದ ಸಾಧಕರು ಮತ್ತು ಮಂಗಳೂರು ಸೇವಾಕೇಂದ್ರದಲ್ಲಿ ನವಚೈತನ್ಯವನ್ನು ನಿರ್ಮಿಸುವ ಸನಾತನದ ಧರ್ಮಪ್ರಸಾರಕರಾದ ಪೂ. ರಮಾನಂದ ಗೌಡ !

ಪೂ. ರಮಾನಂದ ಗೌಡ

೧. ೯.೨೦೨೧ ರಂದು ಪೂ. ರಮಾನಂದಣ್ಣನವರು ಮಂಗಳೂರು ಸೇವಾಕೇಂದ್ರದಿಂದ ಅವರ ಊರಿಗೆ ಹೋಗಿದ್ದರು. ಅವರ ಅನುಪಸ್ಥಿತಿಯಲ್ಲಿ ಸಾಧಕರಿಗಾದ ತೊಂದರೆಗಳು ಮತ್ತು ಅವರು ಹಿಂತಿರುಗಿ ಬಂದ ನಂತರ ಸೇವಾಕೇಂದ್ರದಲ್ಲಾದ ಬದಲಾವಣೆ ಮತ್ತು ಬಂದ ಅನುಭೂತಿಗಳನ್ನು ಮುಂದೆ ಕೊಡಲಾಗಿದೆ.

ಶ್ರೀ. ಪ್ರಶಾಂತ ಹರಿಹರ

೧. ದೀಪಾವಳಿಯಲ್ಲಿ ದೀಪದೇವತೆಯ ಕೃಪೆಯಿಂದ ಸೇವಾಕೇಂದ್ರದ ಸಾಧಕರಲ್ಲಿ ಉತ್ಸಾಹ ಮತ್ತು ಚೈತನ್ಯದ ಅರಿವಾಗುವುದು

ಪೂ. ರಮಾನಂದಣ್ಣನವರು ದೀಪಾವಳಿಯ ನಿಮಿತ್ತ ಮನೆಗೆ ಹೋಗಿದ್ದರು. ದೀಪಾವಳಿಯ ಅವಧಿಯಲ್ಲಿ ದೀಪ ದೇವತೆಯ ಕೃಪೆಯಿಂದ ಸೇವಾಕೇಂದ್ರದ ಸಾಧಕರಲ್ಲಿ ಉತ್ಸಾಹ ಮತ್ತು ಚೈತನ್ಯದ ಅರಿವಾಗುತ್ತಿತ್ತು. ಸಾಧಕರ ಸಂಖ್ಯೆ ಕಡಿಮೆಯಿದ್ದರೂ ಎಲ್ಲ ಸಾಧಕರು ಆನಂದದಿಂದ ವಿವಿಧ ಸೇವೆಗಳಲ್ಲಿ ಮಗ್ನರಾಗಿದ್ದರು. ಆದ್ದರಿಂದ ಯಾರಿಗೂ ಸೇವೆಯ ಒತ್ತಡವಿರಲಿಲ್ಲ.

೨. ದೀಪಾವಳಿಯ ನಂತರ ಸಾಧಕರಿಗೆ ಮತ್ತು ಸೇವಾಕೇಂದ್ರದಲ್ಲಿ ಅರಿವಾದ ತೊಂದರೆಗಳು

೨ ಅ. ದೀಪಾವಳಿಯ ನಂತರ ಸಾಧಕರಿಗೆ ಶಾರೀರಿಕ ತೊಂದರೆ ಯಾಗುವುದು ಹಾಗೂ ಅವರ ಮೇಲೆ ಉಪಾಯ ಮಾಡಿಯೂ ವಿಶೇಷ ಪರಿಣಾಮವಾಗದಿರುವುದು : ದೀಪಾವಳಿಯ ಎರಡನೇ ದಿನದಿಂದ ಸೇವಾಕೇಂದ್ರದಲ್ಲಿ ತೊಂದರೆ ಅರಿವಾಗಲು ಆರಂಭವಾಯಿತು. ಕೆಲವು ಸಾಧಕರು ಕಾಯಿಲೆಗೊಳಗಾದರು. ಅನೇಕ ಸಾಧಕರಿಗೆ ಮೈಕೈ ನೋವು ಮತ್ತು ಜ್ವರ ಬಂದಂತೆ ಅನಿಸುತ್ತಿತ್ತು. ಅದಕ್ಕಾಗಿ ೨-೩ ದಿನಗಳ ವರೆಗೆ ಎಲ್ಲ ಸಾಧಕರಿಗೆ ವನಸ್ಪತಿಗಳ ಕಷಾಯವನ್ನು ಕೊಡಲಾಯಿತು; ಆದರೆ ಅದರಿಂದ ಹೆಚ್ಚಿನ ಪರಿಣಾಮವೇನೂ ಆಗಲಿಲ್ಲ.

೨ ಆ. ಸೇವಾಕೇಂದ್ರದಲ್ಲಿ ಒತ್ತಡದ ಅರಿವಾಗುತ್ತಿದ್ದ ಕಾರಣ ಧೂಪ ಹಾಕಿದರೂ ಅದರಿಂದ ಪರಿಣಾಮವಾಗದಿರುವುದು : ಆ ಅವಧಿಯಲ್ಲಿ ಸೇವಾಕೇಂದ್ರದಲ್ಲಿ ಒತ್ತಡದ ಅರಿವಾಗುತ್ತಿತ್ತು. ‘ಸೇವಾಕೇಂದ್ರದಲ್ಲಿ ಒಂದು ರೀತಿ ಒತ್ತಡದ ಅರಿವಾಗುತ್ತಿದೆ, ಎಂದು ಅನೇಕ ಸಾಧಕರು ಹೇಳುತ್ತಿದ್ದರು. ಸಾಧಕರಲ್ಲಿನ ದೀಪಾ ವಳಿಯ ಉತ್ಸಾಹವು ಕಡಿಮೆಯಾಗಿತ್ತು. ಇದಕ್ಕೆ ಉಪಾಯವೆಂದು ಪೂರ್ಣ ಸೇವಾಕೇಂದ್ರದಲ್ಲಿ ಧೂಪವನ್ನು ಹಾಕಲಾಯಿತು; ಆದರೆ ಅದರಿಂದ ಹೆಚ್ಚಿನ ಪರಿಣಾಮವೇನೂ ಆಗಲಿಲ್ಲ.

೩. ಪೂ. ರಮಾನಂದಣ್ಣ ಸೇವಾಕೇಂದ್ರಕ್ಕೆ ಹಿಂತಿರುಗಿ ಬಂದ ನಂತರ ಸಾಧಕರ ತೊಂದರೆಗಳು ಕ್ರಮೇಣ ಕಡಿಮೆಯಾಯಿತು ಹಾಗೂ ಅವರಲ್ಲಿ ಉತ್ಸಾಹ ನಿರ್ಮಾಣವಾಯಿತು : ದೀಪಾವಳಿಯ ನಂತರ ಪೂ. ರಮಾನಂದಣ್ಣ ಸೇವಾಕೇಂದ್ರಕ್ಕೆ ಹಿಂತಿರುಗಿ ಬಂದ ನಂತರ ಸಾಧಕರು ಅವರಿಗಾಗುತ್ತಿದ್ದ ತೊಂದರೆ ಮತ್ತು ಒತ್ತಡವನ್ನು ಮರೆತು ಬಿಟ್ಟರು. ಸಾಧಕರಲ್ಲಿ ಪುನಃ ದೀಪಾವಳಿಯಲ್ಲಿದ್ದ ಉತ್ಸಾಹವು ಮರುಕಳಿಸಿತು ಹಾಗೂ ಅವರು ಮೊದಲಿನಂತೆಯೆ ಸೇವೆ ಮಾಡಲು ಆರಂಭಿಸಿದರು.

ಇದರಿಂದ ‘ಪೂ. ರಮಾನಂದಣ್ಣನವರ ಕೇವಲ ಅಸ್ತಿತ್ವದಿಂದ ಸೇವಾಕೇಂದ್ರದ ಸಾಧಕರ ಶಾರೀರಿಕ ಹಾಗೂ ಆಧ್ಯಾತ್ಮಿಕ ತೊಂದರೆ ಗಳು ಕಡಿಮೆಯಾದವು, ಎಂಬುದು ಅರಿವಾಯಿತು. ಆಗ ನನ್ನಿಂದ ಅವರ ಬಗ್ಗೆ ಕೃತಜ್ಞತೆ ವ್ಯಕ್ತವಾಯಿತು. ‘ಮುಂಬರುವ ಆಪತ್ಕಾಲದಲ್ಲಿ ಗುರುದೇವರು ಸಂತರ ಮೂಲಕ ನಮ್ಮನ್ನು ರಕ್ಷಿಸಲಿದ್ದಾರೆ, ಎನ್ನುವ ಅನುಭವ ನಮ್ಮೆಲ್ಲರಿಗೂ ಆಯಿತು. ಇದಕ್ಕಾಗಿ ಗುರುದೇವರ ಚರಣಗಳಿಗೆ ಕೋಟಿ ಕೋಟಿ ಕೃತಜ್ಞತೆಗಳು !

– ಶ್ರೀ. ಪ್ರಶಾಂತ ಹರಿಹರ, ಮಂಗಳೂರು  (೧೯.೧೧.೨೦೨೧)