ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್‌ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವು

ಆರೋಪಿ ಇಸ್ರೇಲ್, ಬಲಭಾಗದಲ್ಲಿ.

ಉನ್ನಾವೋ (ಉತ್ತರ ಪ್ರದೇಶ) – ಇಲ್ಲಿನ ಸಾಧು ರಾಮಮಿಲನ್ ದಾಸ್ ಅಲಿಯಾಸ್ ಬಾಬಾ ಮಿಲನ್ ದಾಸ್ ಸಿಂಗ್ ಅವರನ್ನು ಹತ್ಯೆ ಮಾಡಿದ್ದ ಇಸ್ರಾಯಲ್‌, ಪೊಲೀಸರೊಂದಿಗೆ ನಡೆದ ಚಕಮಕಿಯಲ್ಲಿ (ಎನ್‌ಕೌಂಟರ್) ಹತನಾಗಿದ್ದಾನೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಇಸ್ರಾಯಲ್‌ ಮತ್ತು ಅವನ ಸಹಚರರು ತಾಜ್‌ಪುರ ಪ್ರದೇಶಕ್ಕೆ ಬರಲಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ರಹಸ್ಯ ಮೂಲಗಳಿಂದ ಲಭಿಸಿತ್ತು. ಅದರಂತೆ ಪೊಲೀಸರು ಜೂನ್ 15 ರಂದು ಮುಂಜಾನೆ ಸುಮಾರು 4 ಗಂಟೆಗೆ ಇಡೀ ಪ್ರದೇಶವನ್ನು ಸುತ್ತುವರಿದರು. ತಾನು ಪೊಲೀಸರ ಬಲೆಗೆ ಬಿದ್ದಿರುವುದನ್ನು ಅರಿತ ಇಸ್ರಾಯಲ್‌ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದನು. ಇದಕ್ಕೆ ಪ್ರತಿಯಾಗಿ ಪೊಲೀಸರು ನಡೆಸಿದ ಸಾರಿಗೆ ಕಾರ್ಯಾಚರಣೆಯಲ್ಲಿ ಆತ ಸಾವನ್ನಪ್ಪಿದ್ದಾನೆ.

ಧ್ವನಿವರ್ಧಕದಲ್ಲಿ (ಮೈಕ್) ಭಜನೆ-ಕೀರ್ತನೆ ಮಾಡುತ್ತಿದ್ದ ಕಾರಣಕ್ಕೆ ಸಾಧು ರಾಮಮಿಲನ್ ಅವರ ಹತ್ಯೆ!

ಇಸ್ರಾಯಲ್‌ ಜೂನ್ 9 ರಂದು ತನ್ನ ಸಹಚರರೊಂದಿಗೆ ಸೇರಿ ಉನ್ನಾವೋದ ಬಾಂಗರಮೌ ಪ್ರದೇಶದಲ್ಲಿ ಸಾಧು ರಾಮಮಿಲನ್ ದಾಸ್ ಅವರ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು. ಸಾಧು ದಾಸ್ ಅವರು ದೇವಸ್ಥಾನದಲ್ಲಿ ಭಜನೆ-ಕೀರ್ತನೆಗಾಗಿ ಧ್ವನಿವರ್ಧಕವನ್ನು ಬಳಸುತ್ತಿದ್ದುದು ಕೆಲವು ಕಟ್ಟರವಾದಿಗಳಿಗೆ ಇಷ್ಟವಿರಲಿಲ್ಲ ಮತ್ತು ಇದೇ ಕಾರಣಕ್ಕಾಗಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಸಾಧು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಸಾಧುಗಳ ಹತ್ಯೆಯ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದರು. ಈ ಘಟನೆಯ ನಂತರ ಕುಟುಂಬದವರು ನ್ಯಾಯಕ್ಕಾಗಿ ಆಗ್ರಹಿಸುತ್ತಲೇ ಬಂದಿದ್ದರು. ಆರೋಪಿಯನ್ನು ಹಿಡಿಯಲು ಪೊಲೀಸರು ಒಂದು ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದರು. ಈಗ ಉಳಿದ ಆರೋಪಿಗಳ ಮೇಲೆಯೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾಧು ರಾಮಮಿಲನ್ ದಾಸ್ ಅವರ ಕುಟುಂಬಸ್ಥರು ಪೊಲೀಸರನ್ನು ಒತ್ತಾಯಿಸಿದ್ದಾರೆ.