‘ಸನಾತನದ ೭೫ ನೇ ಸಂತರಾದ ಪೂ. ರಮಾನಂದ ಗೌಡ (ರಮಾನಂದ ಅಣ್ಣನವರು) ಇವರು ಕರ್ನಾಟಕ ರಾಜ್ಯದಲ್ಲಿನ ಸಾಧಕರಿಗೆ ‘ಜಾಹೀರಾತುಗಳ ಸೇವೆಯನ್ನು ಒಳ್ಳೆಯ ರೀತಿಯಿಂದ ಹೇಗೆ ಮಾಡಬಹುದು ?’, ಎಂಬುದರ ಬಗ್ಗೆ ಮಾರ್ಗದರ್ಶನವನ್ನು ಮಾಡಿದರು. ಆ ಮಾರ್ಗದರ್ಶನದ ನಂತರ ಸಾಧಕರು ಅದಕ್ಕಾಗಿ ವಿಶೇಷ ಪ್ರಯತ್ನಗಳನ್ನು ಮಾಡಿದರು. ಕೊರೊನಾ ಮಹಾಮಾರಿಯಿಂದ ಬಿಕಟ್ಟಾದ ಸ್ಥಿತಿಯಿಂದ ಮತ್ತು ಹದಗೆಟ್ಟಿರುವ ಜನಜೀವನದಿಂದ ಯಾರಿಗೂ ಹೊರಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಹೀಗಿದ್ದರೂ ಸಾಧಕರು ಮನೆಯಲ್ಲಿದ್ದು ಸತತವಾಗಿ ಸತ್‌ನಲ್ಲಿರುವ ತಳಮಳದಿಂದ ಸಾಧಕರು ಜಾಹೀರಾತುಗಳ ಸೇವೆಯನ್ನು ಪೂರ್ಣಗೊಳಿಸಿದರು. ಅವರು ಇಟ್ಟಿರುವ ಧ್ಯೇಯವನ್ನು ಪೂರ್ಣಗೊಳಿಸಲು ಪ್ರಯತ್ನಿಸಿದರು. ‘ತಳಮಳ ಮತ್ತು ಶ್ರದ್ಧೆಯಿಂದ ಪ್ರಯತ್ನಿಸಿದರೆ ಶ್ರೀ ಗುರುಗಳ ಕೃಪೆ ಮತ್ತು ಗುರುತತ್ತ್ವವು ಹೇಗೆ ಕಾರ್ಯನಿರತವಾಗುತ್ತದೆ ?’, ಎಂಬುದರ ಪ್ರತ್ಯಕ್ಷ ಅನುಭೂತಿಯನ್ನು ಈ ಸೇವೆಯಿಂದ ಸಾಧಕರು ಪಡೆದರು. ೨೩/೪೪ ನೇ ಸಂಚಿಕೆಯಲ್ಲಿ ಆ ಬಗ್ಗೆ ಸಾಧಕರು ಪಡೆದ ಅನುಭೂತಿಯನ್ನು ನೋಡಿದೆವು. ಈ ವಾರ ಉಳಿದ ಭಾಗವನ್ನು ನೋಡೋಣ. (ಭಾಗ ೨)
೬. ಪೂ. ರಮಾನಂದ ಅಣ್ಣನವರು ಭಾವಪ್ರಯೋಗದ ಸಮಯದಲ್ಲಿ ಕಣ್ಮುಂದೆ ಬರುವ ಜಿಜ್ಞಾಸುಗಳ ಪಟ್ಟಿ ಮಾಡಲು ಹೇಳುವುದು ಮತ್ತು ಅದರಂತೆ ಆ ಜಿಜ್ಞಾಸುಗಳನ್ನು ಸಂಪರ್ಕಿಸಿದಾಗ ಅವರು ಉತ್ತಮ ಬೆಂಬಲವನ್ನು ನೀಡುವುದು
ಈ ಮೊದಲು ಜಾಹೀರಾತುಗಳನ್ನು ತೆಗೆದುಕೊಳ್ಳಲು ಎಷ್ಟು ಪ್ರಯತ್ನಿಸಿದರೂ, ಸ್ಪಂದನ ಸಿಗುತ್ತಿರಲಿಲ್ಲ; ಆದ್ದರಿಂದ ನಮಗೆ ‘ಜಾಹೀರಾತುಗಳ ಸೇವೆಯನ್ನು ಮಾಡಬಾರದು’, ಎಂದು ಎನಿಸುತ್ತಿತ್ತು. ಪೂ. ರಮಾನಂದ ಅಣ್ಣನವರು ಭಾವಪ್ರಯೋಗದ ಸಮಯದಲ್ಲಿ ನಮಗೆ ‘ಜಾಹೀರಾತುಗಳನ್ನು ತೆಗೆದುಕೊಳ್ಳಲು ಯಾವ ಜಿಜ್ಞಾಸುಗಳ ಹೆಸರು ಕಣ್ಣುಮುಂದೆ ಬರುತ್ತವೆ ?’, ಎಂದು ನೋಡಲು ಹೇಳಿದ್ದರು. ಹಾಗೆ ಮಾಡಿದ ನಂತರ ಆಯಾ ವ್ಯಕ್ತಿಗಳು ನಮ್ಮ ಕಣ್ಣುಮುಂದೆ ಬಂದರು, ಅವರ ಕಡೆಗೆ ನಾವು ಜಾಹೀರಾತುಗಳನ್ನು ಕೇಳಿದೆವು. ಆಗ ನಮಗೆ ಸಕಾರಾತ್ಮಕ ಸ್ಪಂದನ ಸಿಕ್ಕಿತು. ಸಂತರ ಮಾರ್ಗದರ್ಶನ ಮತ್ತು ಗುರುಕೃಪೆಯಿಂದಾಗಿ ನಮಗೆ ನಮ್ಮಲ್ಲಿನ ಸ್ವಭಾವದೋಷಗಳು ದೂರವಾಗಿ ಜಾಹೀರಾತುಗಳನ್ನು ಪಡೆಯುವ ಸೇವೆಯ ಅವಕಾಶ ಸಿಕ್ಕಿತು. ಈ ಸೇವೆಯಿಂದ ನಮ್ಮ ಶ್ರದ್ಧೆಯೂ ಹೆಚ್ಚಿತು. ಇದರಿಂದ ‘ಸಂತರವಾಣಿಯಲ್ಲಿ ಎಷ್ಟು ಚೈತನ್ಯವಿರುತ್ತದೆ !’, ಎಂಬುದು ನಮ್ಮ ಗಮನಕ್ಕೆ ಬಂದಿತು ಮತ್ತು ‘ಯಾವಾಗ ಗುರುದೇವರ ಸಂಕಲ್ಪವಿರುತ್ತದೆಯೋ, ಆಗ ಅವರೇ ಮಾಡಿಸಿಕೊಳ್ಳುತ್ತಾರೆ’, ಎಂಬುದು ಗಮನಕ್ಕೆ ಬಂದಿತು.’ – ಸೌ. ಅರ್ಪಣಾ ಭಟ್, ಸೌ. ಅಶ್ವಿನಿ ನಾಗರಾಜ, ಸೌ. ಶಶಿಕಲಾ, ಸೌ. ವನಜಾ, ಸೌ. ಸಂಗೀತಾ ಶೆಣೈ ಬೆಂಗಳೂರು, ಮತ್ತು ಸೌ. ಲಕ್ಷ್ಮೀ ಪೈ, ಮಂಗಳೂರು, ಮತ್ತು ಸೌ. ಚೇತನಾ ಶಂಕರ, ಕುಣಿಗಲ್.
೭. ಜಾಹೀರಾತುಗಳ ಸೇವೆ ಪೂರ್ಣಗೊಂಡ ನಂತರ ಪೂ. ಅಣ್ಣನವರು ಆಯೋಜಿಸಿದ ಕೃತಜ್ಞತಾ ಸತ್ಸಂಗ !
೭ ಅ. ಕೃತಜ್ಞತಾ ಸತ್ಸಂಗದಲ್ಲಿ ಎಲ್ಲ ಸಾಧಕರು ಭಾವ ಮತ್ತು ಆನಂದದ ಅನುಭೂತಿಯನ್ನು ಪಡೆಯುವುದು : ಜಾಹೀರಾತುಗಳ ಸೇವೆಯು ಪೂರ್ಣವಾದಾಗ ಎಲ್ಲ ಸಾಧಕರಿಗೆ ತುಂಬಾ ಕೃತಜ್ಞತೆ ಎನಿಸುತ್ತಿತ್ತು. ಆ ಸಮಯದಲ್ಲಿ ಪೂ. ರಮಾನಂದ ಅಣ್ಣನವರು ಜಾಹೀರಾತುಗಳ ಸೇವೆಯನ್ನು ಮಾಡಿದ ಸಾಧಕರಿಗಾಗಿ ಕೃತಜ್ಞತಾ ಸತ್ಸಂಗವನ್ನು ಆಯೋಜಿಸಿದರು. ಈ ಸತ್ಸಂಗದಲ್ಲಿ ಆರಂಭದಲ್ಲಿ ಸಾಧಕರು ‘ಜಾಹೀರಾತುಗಳ ಸೇವೆಗಾಗಿ ಹೇಗೆ ಪ್ರಯತ್ನಿಸಿದರು ? ಅವರಿಗೆ ಏನೇನು ಅನುಭವಿಸಲು ಸಿಕ್ಕಿತು ? ಏನು ಕಲಿಯಲು ಸಿಕ್ಕಿತು ?’, ಎಂಬುದನ್ನು ಆನಂದದಿಂದ ಮತ್ತು ಉತ್ಸಾಹದಿಂದ ಹೇಳಿದರು. ಈ ಸತ್ಸಂಗವು ಭಾವದ ಸ್ತರದಲ್ಲಿ ಆಯಿತು. ಆ ಸಮಯದಲ್ಲಿ ‘ಸತ್ಸಂಗದಲ್ಲಿ ಪಾಲ್ಗೊಂಡಿರುವ ಸಾಧಕರು ಪೃಥ್ವಿಯ ಮೇಲಿರದೇ, ದೇವಲೋಕದಲ್ಲಿದ್ದಾರೆ’, ಎಂಬ ಮರೆಯಲಾರದ ಅನುಭೂತಿಗಳನ್ನು ಎಲ್ಲರೂ ಪಡೆದರು. ಎಲ್ಲ ಸಾಧಕರು ತಮ್ಮ ಅಸ್ತಿತ್ವವನ್ನು ಮರೆತು ಭಾವವಿಶ್ವದಲ್ಲಿ ಮಗ್ನರಾಗಿ ಸತ್ಸಂಗವನ್ನು ಅನುಭವಿಸಿ ‘ಈ ಸತ್ಸಂಗವು ಎಷ್ಟು ಆನಂದದಾಯಕವಾಗಿದೆ !’, ಎಂಬುದನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ’, ಎಂದರು.
ಸಾಧಕರು ತಮ್ಮ ಅನುಭೂತಿ ಮತ್ತು ಪ್ರಯತ್ನಗಳನ್ನು ಹೇಳುತ್ತಿರುವಾಗ ಭಾವಾವಸ್ಥೆಯಲ್ಲಿದ್ದರು. ಆದುದರಿಂದ ಅವರಿಗೆ ಮಾತನಾಡಲೂ ಆಗುತ್ತಿರಲಿಲ್ಲ. ಪ್ರತಿಯೊಬ್ಬ ಸಾಧಕನ ಪ್ರಯತ್ನಗಳನ್ನು ಕೇಳಿದ ನಂತರ ಉಳಿದ ಸಾಧಕರು ಭಾವ ಮತ್ತು ಆನಂದದ ಅನುಭೂತಿಯನ್ನು ಪಡೆಯುತ್ತಿದ್ದರು. ಇಡೀ ವಾತಾವರಣವು ಭಾವಮಯವಾಗಿ ಅದರಿಂದ ಎಲ್ಲರಲ್ಲಿ ಒಳ್ಳೆಯ ಪರಿಣಾಮವಾಗುತ್ತಿತ್ತು.
೭ ಆ. ಪೂ. ಅಣ್ಣನವರ ಆರ್ತ ಪ್ರಾರ್ಥನೆ ಮತ್ತು ಕೃತಜ್ಞತೆಯಿಂದ ಸಾಧಕರಿಗೆ ದ್ವಾಪರಯುಗದಲ್ಲಿನ ಗೋಪಿಗಳ ಉತ್ಕಟ ಭಾವದ ಅನುಭೂತಿ ಬರುವುದು : ಕೃತಜ್ಞತೆಯಲ್ಲಿ ‘ಪೂ. ಅಣ್ಣನವರ ಶಬ್ದಗಳಲ್ಲಿನ ಅವರ ಪ್ರೀತಿ, ಆನಂದ ಮತ್ತು ಅಪಾರ ಶ್ರದ್ಧೆ’, ಈ ಎಲ್ಲವೂ ಸಮುಚ್ಛಯವಾಗಿತ್ತು. ಅವರಲ್ಲಿನ ಉತ್ಕಟ ಭಾವದ ಪರಿಣಾಮವು ಸಂಪೂರ್ಣ ವಾತಾವರಣದ ಮೇಲಾಗಿತ್ತು. ದ್ವಾಪರಯುಗದಲ್ಲಿ ಶ್ರೀಕೃಷ್ಣನ ಕೊಳಲಿನ ನಾದವನ್ನು ಕೇಳಿ ಗೋಪಿಯರು ತಮ್ಮನ್ನು ತಾವು ಯಾವ ರೀತಿ ಮರೆತಿದ್ದರೋ, ಅದೇ ರೀತಿ ಈ ಸತ್ಸಂಗದಲ್ಲಿ ಎಲ್ಲ ಸಾಧಕರು ಈ ಉತ್ಕಟ ಭಾವದ ಅನುಭವವನ್ನು ಪಡೆದರು. ಈ ಸಂಪೂರ್ಣ ಸತ್ಸಂಗದಲ್ಲಿ ಗುರು ದೇವರ ಅಸ್ತಿತ್ವವು ಪ್ರಾರಂಭದಿಂದ ಹಿಡಿದು ಕೊನೆಯವರೆಗೆ ಅನುಭವಿಸಲು ಸಿಕ್ಕಿತು. ‘ಸ್ಥಿತಿಯಿಂದ ಹೊರಗೆ ಬರಲೇಬಾರದು’, ಎಂದೆನಿಸುತ್ತಿತ್ತು.
೭ ಇ. ಸಾಧಕರು, ‘ಈ ಸತ್ಸಂಗ ಕೇಳಿದ ನಂತರ ಸಾಧಕರ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾದವು’, ಎಂದು ಹೇಳಿದರು.
ಸಾಧಕರ ಪ್ರಯತ್ನ, ಅನುಭವ ಮತ್ತು ಅನುಭೂತಿಗಳನ್ನು ಕೇಳಿದ ನಂತರ ಪೂ. ಅಣ್ಣನವರು ಸಾಧಕರ ಮತ್ತು ಗುರುದೇವರ ಬಗ್ಗೆ ತುಂಬಾ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಇದರಿಂದ ನಮಗೆ ಅವರ ಪ್ರೀತಿಯನ್ನು ಅನುಭವಿಸಲು ಸಿಕ್ಕಿತು. ಪೂ. ಅಣ್ಣನವರು ‘ನಾನು ಏನು ಮಾಡಲೇ ಇಲ್ಲ’, ಎಂದು ಹೇಳಿ ಎಲ್ಲ ಕರ್ತೃತ್ವವನ್ನು ಗುರುಗಳ ಚರಣಗಳಲ್ಲಿ ಅರ್ಪಿಸಿದರು ಮತ್ತು ಗುರುಚರಣಗಳ ಬಗ್ಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಪೂ. ಅಣ್ಣನವರು, ‘ಜಾಹೀರಾತುಗಳ ಸೇವೆಯನ್ನು ಮಾಡುವಾಗ ಎಲ್ಲರೂ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು, ಮುಂದಾಳತ್ವವನ್ನು (ನೇತೃತ್ವವನ್ನು) ತೆಗೆದುಕೊಂಡು ಮತ್ತು ತಮ್ಮ ಕ್ಷಮತೆಯನ್ನು ಸಂಪೂರ್ಣವಾಗಿ ಉಪಯೋಗಿಸಿದ್ದೀರಿ. ಸಂಚಾರ ಸಾರಿಗೆ ನಿರ್ಬಂಧದಂತಹ ಪರಿಸ್ಥಿತಿಯಲ್ಲಿಯೂ ಎಲ್ಲರೂ ಆಜ್ಞಾಪಾಲನೆಯನ್ನು ಮಾಡಿ ತಮ್ಮ ಧ್ಯೇಯವನ್ನು ಪೂರ್ಣಗೊಳಿಸಿದ್ದೀರಿ !’ ಎಂದು ಹೇಳಿದರು.
‘ಗುರುದೇವಾ, ನೀವು ಸುಖ ಕೊಡಿ ಅಥವಾ ದುಃಖವನ್ನು ಕೊಡಿ; ಆದರೆ ನಮಗೆ ಸೇವೆಯನ್ನು ಮಾಡುವ ಅವಕಾಶವನ್ನು ನೀಡಿ. ಆಪತ್ಕಾಲವಿರಲಿ ಅಥವಾ ಸಂಪತ್ಕಾಲವಿರಲಿ, ನಾವು ಮನೆಯಲ್ಲಿರಲಿ, ನಮಗೆ ಸಮಷ್ಟಿಯಲ್ಲಿ ಹೋಗಿ ಸೇವೆಯನ್ನು ಮಾಡುವ ಅವಕಾಶ ಸಿಗಲಿ ಅಥವಾ ಸಿಗದಿರಲಿ; ಆದರೆ ನಮ್ಮ ಶ್ವಾಸದಿಂದ ಗುರುಸೇವೆಯೇ ಆಗಬೇಕು !’, ಎಂದು ತಾವು ಯಾವಾಗಲೂ ಹೇಳುತ್ತೀರಿ. ಅದಕ್ಕನುಸಾರ ಇಂದು ಎಲ್ಲ ಸಾಧಕರು ಪ್ರಯತ್ನಗಳನ್ನು ಮಾಡಿತೋರಿಸಿದ್ದಾರೆ. ಎಲ್ಲ ಸಾಧಕರ ಬಗ್ಗೆ ನಾನು ಹೇಗೆ ಕೃತಜ್ಞತೆಯನ್ನು ವ್ಯಕ್ತಮಾಡಲಿ ? ಆಪತ್ಕಾಲದಲ್ಲಿ ಭಗವಂತನ ಆಧಾರದಿಂದ ಅಡಚಣೆಗಳನ್ನು ಪರಿಹರಿಸಿ ಎಲ್ಲರೂ ಆಜ್ಞಾಪಾಲನೆ ಮಾಡಿದ್ದೀರಿ; ಆದುದರಿಂದ ಕೃತಜ್ಞತೆ, ಕೃತಜ್ಞತೆ, ಕೃತಜ್ಞತೆ ! ಎಲ್ಲರ ಬಗ್ಗೆ ಕೃತಜ್ಞತೆ, ಕೃತಜ್ಞತೆ, ಕೃತಜ್ಞತೆ | ಯಾವುದೇ ವಿಚಾರಗಳನ್ನು ಮನಸ್ಸಿನಲ್ಲಿಡದೇ ಶ್ರಮಪಟ್ಟು ಪ್ರಯತ್ನಿಸಿದ್ದೀರಿ | ಅದಕ್ಕಾಗಿ ಎಲ್ಲರ ಬಗ್ಗೆ ಕೃತಜ್ಞತೆ, ಕೃತಜ್ಞತೆ, ಕೃತಜ್ಞತೆ || ೧ || ನಿಮ್ಮ ಬಳಿ ಎಷ್ಟು ಕ್ಷಮತೆ ಮತ್ತು ಕೌಶಲ್ಯವಿದೆ | ಆದರೆ ನಾನೇ ಅದನ್ನು ಗುರುತಿಸಲು ಕಡಿಮೆ ಬಿದ್ದೆನು | ಆದರೆ ಈಗ ನೀವು ಅದನ್ನು ಗುರುಕಾರ್ಯದಲ್ಲಿ ಉಪಯೋಗಿಸಿದ್ದೀರಿ | ಇದಕ್ಕಾಗಿ ಎಲ್ಲರ ಬಗ್ಗೆ ಕೃತಜ್ಞತೆ, ಕೃತಜ್ಞತೆ, ಕೃತಜ್ಞತೆ || ೨ || ಈಗ ಸಂಕಟಕಾಲದಲ್ಲಿಯೂ ಗುರುಕಾರ್ಯದ ಹಾನಿ ಆಗಬಾರದು | ಗುರುಕಾರ್ಯವು ನನ್ನದೇ ಆಗಿದೆ, ಎಂದು ಜವಾಬ್ದಾರಿಯನ್ನು ತನ್ನ ಮೇಲೆ ತೆಗೆದುಕೊಂಡು | ಜಿಗುಟುತನದಿಂದ, ಸಂಘಟಿತವಾಗಿ ಪ್ರಯತ್ನಿಸಿದ್ದೀರಿ | ಆದುದರಿಂದ ಎಲ್ಲರ ಬಗ್ಗೆ ಕೃತಜ್ಞತೆ, ಕೃತಜ್ಞತೆ, ಕೃತಜ್ಞತೆ || ೩ || ಅನಿಷ್ಟ ಶಕ್ತಿಗಳ ತೊಂದರೆ ಆಗುತ್ತಿರುವಾಗಲೂ ಅದರ ವಿರುದ್ಧ ಹೋರಾಡುವ ವೃತ್ತಿಯಿಂದ ಹೋರಾಡಿ | ಆಪತ್ಕಾಲವಿದೆ, ಎಂಬುದನ್ನು ಮರೆತು ತಳಮಳದಿಂದ, ಭಾವದಿಂದ ಮತ್ತು ಶ್ರದ್ಧೆಯಿಂದ ಸಮಯಕ್ಕೆ ಸೇವೆಯನ್ನು ಪೂರ್ಣಗೊಳಿಸಿದ್ದೀರಿ | ಹನುಮಂತನಂತೆ ದಾಸ್ಯಭಕ್ತಿಯನ್ನಿಟ್ಟು ಎಲ್ಲರೂ ಅತ್ಯಂತ ಶರಣಾಗತಿಯಿಂದ ಪ್ರಯತ್ನಿಸಿದ್ದೀರಿ | ಅದು ಸತ್ಯವಾಗಿದೆ, ಎಂದು ನನಗೆ ಅನಿಸುತ್ತಲೇ ಇರಲಿಲ್ಲ; ಆದರೆ ನೀವು ಅದನ್ನು ಮಾಡಿ ತೋರಿಸಿದ್ದೀರಿ, ನಾನೇ ಅದರಲ್ಲಿ ಕಡಿಮೆ ಬಿದ್ದೆನು | ಅದಕ್ಕಾಗಿ ಎಲ್ಲರ ಬಗ್ಗೆ ಕೃತಜ್ಞತೆ, ಕೃತಜ್ಞತೆ, ಕೃತಜ್ಞತೆ || ೪ || ಭಕ್ತವತ್ಸಲ ಗುರುದೇವಾ, ನೀವು ನಮಗೆ ನೀಡಿದ ಸಾಧಕರು ಎಷ್ಟು ಅಮೂಲ್ಯವಾಗಿದ್ದಾರೆ | ಈಗ ಗಮನಕ್ಕೆ ಬಂದಿತು, ಸಾಧಕರು ತನು, ಮನ, ಧನ ಮತ್ತು ಪ್ರಾಣವನ್ನು ತ್ಯಜಿಸಲು ಸಿದ್ಧರಾಗಿದ್ದಾರೆ | ತಮ್ಮ ಕೃಪೆಯನ್ನು ಸಂಪಾದಿಸಲು ಎಲ್ಲರೂ ಒಂದುಗೂಡಿ ಪ್ರಯತ್ನಿಸಿದರು | ಇಂತಹ ಸಾಧಕಪರಿವಾರವನ್ನು ನೀವು ನಮಗೆ ನೀಡಿದ್ದೀರಿ | ತಮ್ಮ ಚರಣಗಳಲ್ಲಿ ಅನಂತ ಕೋಟಿ ಕೃತಜ್ಞತೆಗಳು ||೫|| ಗುರುದೇವಾ, ‘ಈ ಮುಂದೆಯೂ ಮುಂಬರುವ ಕಾಲದಲ್ಲಿ ನಮಗೆಲ್ಲ ಸಾಧಕರಿಗೆ ಇಂತಹ ಸೇವೆಯ ಭಾಗ್ಯವು ಸಿಗಲಿ. ಇದೇ ಜನ್ಮದಲ್ಲಿ ನಮ್ಮನ್ನು ತಮ್ಮ ಚರಣಗಳಲ್ಲಿ ಸಮರ್ಪಿಸಿಕೊಳ್ಳಿ !’, ಇದೇ ತಮ್ಮ ಚರಣಗಳಲ್ಲಿ ಆರ್ತನಾಗಿ ಪ್ರಾರ್ಥಿಸುತ್ತೇನೆ.” |
ಕೃತಜ್ಞತೆ ಮತ್ತು ಪ್ರಾರ್ಥನೆ
‘ಈ ಘೋರ ಆಪತ್ಕಾಲದಲ್ಲಿ ಮತ್ತು ಇಷ್ಟೊಂದು ರಜ-ತಮಾತ್ಮಕ ವಾತಾವರಣದಲ್ಲಿ ನಮಗೆಲ್ಲ ಸಾಧಕರಿಗೆ ಇಂತಹ ವೈಶಿಷ್ಟ್ಯಪೂರ್ಣ ಅನುಭೂತಿಗಳನ್ನು ಕೊಟ್ಟು ಸಾಧಕರ ಕಾಳಜಿಯನ್ನು ತೆಗೆದುಕೊಳ್ಳುವ ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಕೃತಜ್ಞತೆಗಳನ್ನು ವ್ಯಕ್ತಪಡಿಸಲು ಶಬ್ದಗಳೇ ಇಲ್ಲ. ‘ಹೇ ಗುರುದೇವಾ, ‘ಈ ಶಬ್ದಾತೀತ ಕೃತಜ್ಞತಾಪುಷ್ಪಗಳು ತಮ್ಮ ಚರಣಗಳಲ್ಲಿ ಅರ್ಪಣೆಯಾಗಲಿ. ನಮ್ಮಿಂದ ತಮಗೆ ಅಪೇಕ್ಷಿತ ಸಾಧನೆಯಾಗಲಿ. ಎಲ್ಲ ಸಾಧಕರ ಜೀವವು ತಮ್ಮ ಶ್ರೀ ಚರಣಗಳಲ್ಲಿ ಶೀಘ್ರಾತಿಶೀಘ್ರ ಪುಷ್ಪರೂಪದಲ್ಲಿ ಸಮರ್ಪಿಸಿಕೊಳ್ಳಿ’, ಇದೇ ಆರ್ತತೆಯಿಂದ ಪ್ರಾರ್ಥಿಸುತ್ತೇವೆ.
(ಮುಕ್ತಾಯ)
– ಶ್ರೀ. ಕಾಶಿನಾಥ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೯), ಸೌ. ಮಂಜುಳಾ ರಮಾನಂದ ಗೌಡ (ಪೂ. ರಮಾನಂದ ಗೌಡರ ಪತ್ನಿ, ಆಧ್ಯಾತ್ಮಿಕ ಮಟ್ಟ ಶೇ ೬೬), ಸೌ. ಪೂರ್ಣಿಮಾ ಪ್ರಭು, ಕರ್ನಾಟಕ.
ಸೂಕ್ಷ್ಮದಲ್ಲಿ ಕಾಣಿಸುವುದು, ಕೇಳಿಸುವುದು ಇತ್ಯಾದಿ (ಪಂಚ ಸೂಕ್ಷ್ಮಜ್ಞಾನೇಂದ್ರಿಯಗಳಿಂದ ಜ್ಞಾನಪ್ರಾಪ್ತಿಯಾಗುವುದು) : ಕೆಲವು ಸಾಧಕರ ಅಂತರ್ದೃಷ್ಟಿ ಜಾಗೃತವಾಗುತ್ತದೆ, ಅಂದರೆ ಸಾಮಾನ್ಯವಾಗಿ ಕಣ್ಣಿಗೆ ಕಾಣದಂತಹವುಗಳು ಅವರಿಗೆ ಸೂಕ್ಷ್ಮದಲ್ಲಿ ಗೋಚರಿಸುತ್ತವೆ ಮತ್ತು ಇನ್ನು ಕೆಲವರಿಗೆ ಸೂಕ್ಷ್ಮದಲ್ಲಿನ ನಾದ ಅಥವಾ ಶಬ್ದಗಳು ಕೇಳಿಸುತ್ತವೆ. |