ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ ಬೆಂಬಲ
ಮಮತಾ ಬ್ಯಾನರ್ಜಿಯವರಿಗೆ ಮತ್ತೊಂದು ದೊಡ್ಡ ಆಘಾತ

ಕೊಲಕಾತಾ – ತೃಣಮೂಲ ಕಾಂಗ್ರೆಸ್ ಪಕ್ಷದ 20 ಲೋಕಸಭಾ ಸಂಸದರ ಗುಂಪು ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (ಎನ್. ಸಿ. ಪಿ. ಐ.) ಎಂಬ ನೋಂದಾಯಿತ ಪ್ರಾದೇಶಿಕ ರಾಜಕೀಯ ಪಕ್ಷದಲ್ಲಿ ವಿಲೀನಗೊಳ್ಳಲು ನಿರ್ಧರಿಸಿದೆ. ಜೂನ್ 14 ರಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾರವರನ್ನು ಭೇಟಿಯಾದ ನಂತರ, ತೃಣಮೂಲದ ಹಿರಿಯ ಸಂಸದರು ಹಾಗೂ ಲೋಕಸಭೆಯ ಮಾಜಿ ಪಕ್ಷದ ನಾಯಕರಾದ ಸುದೀಪ ಬಂಡೋಪಾಧ್ಯಾಯರವರು ಈ ನಿರ್ಧಾರವನ್ನು ಘೋಷಿಸಿದರು. ಈ ಸಂದರ್ಭದಲ್ಲಿ ಕಾಕೋಲಿ ಘೋಷ ದಸ್ತಿದಾರ ಮತ್ತು ಶತಾಬ್ದಿ ರಾಯ ಸೇರಿದಂತೆ ಗುಂಪಿನ ಇತರ ನಾಯಕರು ಉಪಸ್ಥಿತರಿದ್ದರು. ಇದರಿಂದಾಗಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ದೊಡ್ಡ ಆಘಾತ ಎದುರಾಗಿದೆ. ಈ ಗುಂಪು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ ಸೇರಲು ಸಹ ನಿರ್ಧರಿಸಿದೆ.
1. ಕೇಂದ್ರ ಸಚಿವ ಭೂಪೇಂದ್ರ ಯಾದವರವರ ನಿವಾಸದಲ್ಲಿ ಸಭೆ ನಡೆಸಿದ ನಂತರ ಈ ಬಂಡಾಯ ಗುಂಪು ಲೋಕಸಭೆಯ ಸ್ಪೀಕರ್ ಅವರನ್ನು ಭೇಟಿಯಾಯಿತು.
2. ಸ್ಪೀಕರ್ ಅವರೊಂದಿಗಿನ ಸಭೆಯ ನಂತರ, ಕಾಕೋಲಿ ಘೋಷ ದಸ್ತಿದಾರ ರವರು ತಮ್ಮ ಗುಂಪು ಪ್ರತ್ಯೇಕವಾಗಿ ಕುಳಿತುಕೊಳ್ಳಲು ವಿನಂತಿಸಿರುವ ಸುದ್ದಿಯನ್ನು ಖಚಿತಪಡಿಸಿದರು. ಅವರು ಮಾತನಾಡಿ, ‘20 ಸಂಸದರ ನಮ್ಮ ಗುಂಪು ತೃಣಮೂಲ ಕಾಂಗ್ರೆಸ್ಸಿನ ಒಟ್ಟು ಸದಸ್ಯ ಬಲದ (28 ಸಂಸದರು) ಮೂರನೇ ಎರಡರಷ್ಟು ಭಾಗಕ್ಕಿಂತ ದೊಡ್ಡದಾಗಿದೆ. ನಾವು ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ’ಯಲ್ಲಿ ವಿಲೀನಗೊಳ್ಳುತ್ತಿದ್ದೇವೆ. ಇನ್ನು ಮುಂದೆ ನಾವು ದೇಶಕ್ಕಾಗಿ ಕೆಲಸ ಮಾಡುತ್ತೇವೆ ಮತ್ತು ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದೊಂದಿಗೆ ಸಹಕರಿಸುತ್ತೇವೆ’ ಎಂದರು.
3. 2026 ರ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲಕ್ಕೆ ಭಾರಿ ಸೋಲಾದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
4. ವೈಯಕ್ತಿಕವಾಗಿ ಪಕ್ಷ ಬದಲಾಯಿಸುವ ಅಥವಾ ಹೊಸ ಪಕ್ಷವನ್ನು ಸ್ಥಾಪಿಸುವ ಬದಲು, ತಮ್ಮ ಗುಂಪು (ಮೂರನೇ ಎರಡರಷ್ಟು ಹೆಚ್ಚು ಸದಸ್ಯರನ್ನು ಹೊಂದಿದೆ) ಅಸ್ತಿತ್ವದಲ್ಲಿರುವ ನೋಂದಾಯಿತ ‘ನ್ಯಾಷನಲ್ ಸಿಟಿಝನ್ಸ ಪಾರ್ಟಿ’ ಪಕ್ಷದಲ್ಲಿ ವಿಲೀನಗೊಳ್ಳುವ ಮೂಲಕ, ಬಂಡಾಯಗಾರರು ಈ ಕ್ರಮವು ಕೇವಲ ‘ಪಕ್ಷಾಂತರ’ (ಡಿಫೆಕ್ಷನ್) ಆಗಿರದೆ ಕಾನೂನುಬದ್ಧವಾದ ‘ಪಕ್ಷದಲ್ಲಿ ಸೇರ್ಪಡೆ’ ಆಗುವಂತೆ ನೋಡಿಕೊಂಡಿದ್ದಾರೆ.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!