ಶಾಮ್ಲಿ (ಉತ್ತರ ಪ್ರದೇಶ) ದಲ್ಲಿ ಹಿಂದೂ ಯುವಕನ ಬಲವಂತದ ಮತಾಂತರ ಪ್ರಕರಣ

ಶಾಮ್ಲಿ (ಉತ್ತರ ಪ್ರದೇಶ) – ಇಲ್ಲಿನ ಆಯುಷ್ ಮಲಿಕ್ ಎಂಬ ಹಿಂದೂ ಯುವಕನ ಬಲವಂತದ ಮತಾಂತರ ಪ್ರಕರಣದಲ್ಲಿ ಪೊಲೀಸರು ತೌಫಿಕ್ ಅಲಿಯಾಸ್ ಭೋಲಾ ಎಂಬ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇತ್ತೀಚೆಗೆ ಬಂಧಿಸಿದ್ದಾರೆ. ಆಯುಷ್ ಮಲಿಕ್ ಅವರ ಮತಾಂತರ ಮತ್ತು ನಿಕಾ (ಇಸ್ಲಾಮಿಕ್ ಪದ್ಧತಿಯ ವಿವಾಹ) ಮಾಡಿಸಿಕೊಡುವ ಸಂಚಿನಲ್ಲಿ ತೌಫಿಕ್ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸರು ಆರೋಪಿಯಿಂದ ‘ನಿಕಾಹನಾಮಾ’ (ವಿವಾಹ ಒಪ್ಪಂದ) ವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ತನಿಖೆಯಲ್ಲಿ ಶಾಮ್ಲಿಯ ಪ್ರಸಿದ್ಧ ಮುಸ್ಲಿಂ ವೈದ್ಯರು ಮತ್ತು ಕೆಲವು ಮೌಲ್ವಿಗಳ (ಇಸ್ಲಾಮಿನ ಧಾರ್ಮಿಕ ಮುಖಂಡ) ಪಾತ್ರವನ್ನೂ ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ.
1. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಬಂಧಿತ ಆರೋಪಿ ತೌಫಿಕ್ ಶಾಮ್ಲಿಯ ನಿವಾಸಿಯಾಗಿದ್ದಾನೆ. ಈತನ ಮೇಲೆ ಈಗಾಗಲೇ ಅನೇಕ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ಪೊಲೀಸರಿಗೆ ಈತ ಬೇಕಾಗಿದ್ದನು.
2. ಇದಕ್ಕೂ ಮುನ್ನ ಮುಖ್ಯ ಆರೋಪಿಗಳಾದ ಜಿಮ್ ತರಬೇತುದಾರರಾದ ಚಾಂದನಿ ಖುರೇಷಿ ಮತ್ತು ಆಕೆಯ ತಂದೆ ಇಸ್ಲಾಂ ಖುರೇಷಿ ಅವರನ್ನು ಜೂನ್ 7, 2026 ರಂದು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.
3. ಶಾಮ್ಲಿಯ ಮುಸ್ಲಿಂ ವೈದ್ಯರೊಡನೆ ನಮಾಜ್ ಮಾಡುತ್ತಿರುವ ಆಯುಷ್ ಮಲಿಕ್ ಅವರ ಫೋಟೋಗಳು ಪ್ರಸಾರವಾಗಿದ್ದವು. ಆ ದೃಷ್ಟಿಯಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
4. ದೆಹಲಿ ಮತ್ತು ಮುಂಬಯಿನ ಕೆಲವು ಮೌಲ್ವಿಗಳ ಪಾತ್ರದ ಬಗ್ಗೆಯೂ ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
5. ಆಯುಷ್ ಮಲಿಕ್ ಅವರ ತಂದೆ ಮತ್ತು ಔಷಧ ವ್ಯಾಪಾರಿ ಹಾಗೂ ‘ಕೆಮಿಸ್ಟ್ಸ್ ಅಸೋಸಿಯೇಷನ್’ ಅಧ್ಯಕ್ಷ ದೇವರಾಜ್ ಮಲಿಕ್ ಅವರು ಆರೋಪಿಸಿರುವ ಪ್ರಕಾರ, ತಮ್ಮ ಮಗ ಆಯುಷ್ ಮಲಿಕ್ 2018 ರಲ್ಲಿ ‘ಖುರೇಷಿ ಪ್ಲಸ್’ ಎಂಬ ಆಧುನಿಕ ಜಿಮ್‌ಗೆ ಹೋಗಲು ಪ್ರಾರಂಭಿಸಿದ್ದನು. ಅಲ್ಲಿನ ತರಬೇತುದಾರ ಚಾಂದನಿ ಖುರೇಷಿ, ಆಕೆಯ ಕುಟುಂಬ ಮತ್ತು ಕೆಲವು ಮೌಲ್ವಿಗಳು ನಿಧಾನವಾಗಿ ಆತನ ಬ್ರೈನ್ ವಾಶ್ ಮಾಡಿದ್ದಾರೆ ಎಂದು ಅವರು ದೂರುತ್ತಾರೆ.
6. ಆಯುಷ್ ಮಲಿಕ್ ಅವರು ತಮ್ಮ ತಂದೆಯವರು ಬ್ರೈನ್ ವಾಶ್ ಮತ್ತು ಬೆದರಿಕೆಯ ಬಗ್ಗೆ ಮಾಡಿರುವ ಆರೋಪಗಳನ್ನು ತಳ್ಳಿಹಾಕಿದ್ದಾರೆ. “ನಾನು ಪ್ರಸಿದ್ಧ ಪಾಕಿಸ್ತಾನಿ ಇಸ್ಲಾಮಿಕ್ ವಿದ್ವಾಂಸ ಡಾ. ಇಸ್ರಾರ್ ಅಹ್ಮದ್ ಅವರ ವೀಡಿಯೊಗಳನ್ನು ನೋಡಿದೆ, ಇದರಿಂದ ನನಗೆ ಇಸ್ಲಾಂ ಬಗ್ಗೆ ಆಸಕ್ತಿ ಮೂಡಿತು” ಎಂದು ಆಯುಷ್ ಹೇಳಿದ್ದಾರೆ.
7. ಶಾಮ್ಲಿಯ ಪೊಲೀಸ್ ಅಧೀಕ್ಷಕ ಎನ್.ಪಿ. ಸಿಂಗ್ ಅವರು ಈ ಸಂಪೂರ್ಣ ಪ್ರಕರಣದ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಪೊಲೀಸರು ಈ ಗ್ಯಾಂಗ್‌ಗೆ ಸಂಬಂಧಿಸಿದ ಇತರ ಆರೋಪಿಗಳ ಹುಡುಕಾಟ ನಡೆಸುತ್ತಿದ್ದಾರೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !