
ಕೊಲಕಾತಾ (ಬಂಗಾಳ) – ಬಂಗಾಳದ ಕೋಟ್ಯಂತರ ರೂಪಾಯಿಗಳ ‘ಗ್ರೀನ್ ಸಿಟಿ ಪ್ರಾಜೆಕ್ಟ್’ ಅಂದರೆ ಸೌರಶಕ್ತಿ ಯೋಜನೆಯ ಆರ್ಥಿಕ ಹಗರಣದ ಪ್ರಕರಣದಲ್ಲಿ ಆರಾಂಬಾಗ್ ಪುರಸಭೆಯ ಮಾಜಿ ಅಧ್ಯಕ್ಷ ಸ್ವಪನ್ ನಂದಿ ಅವರನ್ನು ಕೇರಳದಿಂದ ಬಂಧಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ‘ಗ್ರೀನ್ ಸಿಟಿ ಪ್ರಾಜೆಕ್ಟ್’ ಹಗರಣದ ತನಿಖೆ ವೇಗ ಪಡೆದುಕೊಂಡ ನಂತರ ಸ್ವಪನ್ ನಂದಿ ತಲೆಮರೆಸಿಕೊಂಡಿದ್ದರು. ಬಂಧನವನ್ನು ತಪ್ಪಿಸಲು ಅವರು ತಮ್ಮ ಗುರುತನ್ನು ಮುಚ್ಚಿಡಲು ಪ್ರಯತ್ನಿಸಿದ್ದರು; ಆದರೆ ಪೊಲೀಸರ ವಿಶೇಷ ತಂಡವು ಕೇರಳದಲ್ಲಿ ಅವರನ್ನು ಪತ್ತೆಹಚ್ಚಿ ಬಂಧಿಸಿತು. ಈ ಪ್ರಕರಣದಲ್ಲಿ ಈ ಮೊದಲೇ ಪುರಸಭೆಯ ಇಂಜಿನಿಯರ್, ವಿದ್ಯುತ್ ಮೇಲ್ವಿಚಾರಕ ಮತ್ತು ಒಬ್ಬ ಗುತ್ತಿಗೆದಾರರನ್ನು ಬಂಧಿಸಲಾಗಿದೆ.
ನಕಲಿ ದಾಖಲೆಗಳ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕನ ಬಂಧನ
ವಂಚನೆ, ನಕಲಿ ದಾಖಲೆಗಳ ಬಳಕೆ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ನಾಯಕ ಮಾಣಿಕ್ ದಾಸ್ ಅವರನ್ನು ಕೂಡ ಬಂಧಿಸಲಾಗಿದೆ. ಅವರು ಸಿಂಗೂರ್ ರೈತ ಆಂದೋಲನದ ಪ್ರಮುಖ ಮುಖವಾಗಿದ್ದರು. ದಾಸ್ ಅವರ ವಿರುದ್ಧ 2014ರಲ್ಲಿ ಪ್ರಕರಣ ದಾಖಲಾದ ನಂತರ ಚಂದನನಗರ ನ್ಯಾಯಾಲಯವು ಅವರ ವಿರುದ್ಧ ಬಂಧನ ವಾರೆಂಟ್ ಹೊರಡಿಸಿತ್ತು. ಅವರು ಮಾಜಿ ಸಚಿವ ಬೇಚಾರಾಮ್ ಮನ್ನಾ ಅವರ ಆಪ್ತರೆಂದು ಪರಿಗಣಿಸಲ್ಪಟ್ಟಿದ್ದಾರೆ.
ಮಹಿಳೆಯರೊಂದಿಗೆ ಅಶ್ಲೀಲ ವರ್ತನೆ: ತೃಣಮೂಲ ಕಾಂಗ್ರೆಸ್ ನಾಯಕ ರೆಜಾವುಲ್ ಖಾನ್ ಬಂಧನ
ಬಂಕುರಾ ಜಿಲ್ಲೆಯ ತೃಣಮೂಲ ಕಾಂಗ್ರೆಸ್‌ನ ‘ಇಂದಪುರ್ ಬ್ಲಾಕ್’ನ ಮಾಜಿ ಅಧ್ಯಕ್ಷ ರೆಜಾವುಲ್ ಖಾನ್‌ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಖಾನ್‌ನ ಮೇಲೆ ಭಾಜಪ ಕಾರ್ಯಕರ್ತನ ಮನೆಗೆ ನುಗ್ಗಿ ಹಲ್ಲೆ ನಡೆಸುವುದು, ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತಿಸುವುದು, ಹಾಗೆಯೇ ಬಂದೂಕನ್ನು ತೋರಿಸಿ ಕೊಲೆ ಬೆದರಿಕೆ ಹಾಕುವುದು ಮುಂತಾದ ಆರೋಪಗಳಿವೆ. ನ್ಯಾಯಾಲಯವು ಆತನಿಗೆ 3 ದಿನಗಳ ಪೊಲೀಸ್ ಕಸ್ಟಡಿಯನ್ನು ವಿಧಿಸಿದೆ.
ತೃಣಮೂಲ ಕಾಂಗ್ರೆಸ್‌ನ ಮಾಜಿ ಶಾಸಕರ 3 ಫ್ಲಾಟ್‌ಗಳ ಮೇಲೆ ಪೊಲೀಸರ ಕ್ರಮ
ಕಲ್ಯಾಣಿಯ ತೃಣಮೂಲ ಕಾಂಗ್ರೆಸ್‌ನ ಮಾಜಿ ಶಾಸಕ ಮುಕುಟಮಣಿ ಅಧಿಕಾರಿ ಅವರ ಒಡೆತನದ 3 ಫ್ಲಾಟ್‌ಗಳನ್ನು ಪೊಲೀಸರು ಬಂದ್ (ಸೀಲ್) ಮಾಡಿದ್ದಾರೆ. ಈ ಫ್ಲಾಟ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸರಕಾರಿ ಸಹಾಯದ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗಿದೆ ಎಂದು ಭಾಜಪ ದೂರು ನೀಡಿತ್ತು. ಪೊಲೀಸರು ಇ-ಮೇಲ್ ಮೂಲಕ ನೋಟಿಸ್ ಕಳುಹಿಸಿ ಫ್ಲಾಟ್‌ಗಳನ್ನು ತೆರೆಯುವಂತೆ ಸೂಚಿಸಿದ್ದರು; ಆದರೆ ನೀಡಿದ ಸಮಯದ ಮಿತಿಯಲ್ಲಿ ಪ್ರತಿಕ್ರಿಯೆ ಬಾರದ ಕಾರಣ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ ವಸತಿ ಯೋಜನೆಯ ಪ್ರವರ್ತಕ ಗೌರಂಗ ಸರಕಾರ ಅವರಿಗೂ ನೋಟಿಸ್ ಕಳುಹಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು
‘ಒಂದು ವೇಳೆ ಇಂದಿರಾ ಗಾಂಧಿಯವರು ಇಂದು ಬದುಕಿದ್ದರೆ, ಅವರು ಭಾಜಪವನ್ನು ನಿಷೇಧಿಸಲು ಹಿಂಜರಿಯುತ್ತಿರಲಿಲ್ಲ!’
ಕೇರಳ: ಮದರಸಾ ಶಿಕ್ಷಕನೊಂದಿಗೆ ಮದುವೆ ನಿಶ್ಚಯವಾಗಿದ್ದಕ್ಕೆ ಬೇಸತ್ತು 19 ವರ್ಷದ ಯುವತಿ ಆತ್ಮಹತ್ಯೆ
ಭಾರತೀಯ ಸೇನೆಯ ವಸಾಹತುಶಾಹಿ ಸಂಪ್ರದಾಯಗಳಲ್ಲಿ ಬದಲಾವಣೆ: ಸೇನಾ ಸಮವಸ್ತ್ರದ ಹೊಸ ನಿಯಮಾವಳಿ ಜಾರಿ : Army Uniform 2026