ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರಿಗೆ ಇಂದಿರಾ ಗಾಂಧಿಯವರ ಕನಸು ಬಿದ್ದಿತೇ?

ಜೈಪುರ (ರಾಜಸ್ಥಾನ) – ಒಂದು ವೇಳೆ ಇಂದಿರಾ ಗಾಂಧಿಯವರು ಬದುಕಿದ್ದರೆ ಅವರು ಭಾಜಪವನ್ನು ನಿಷೇಧಿಸುತ್ತಿದ್ದರು ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಭಾಜಪದ ಕಥಿತ ‘ಸರ್ವಾಧಿಕಾರ’ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿ ನಡೆದ ‘ಕಾಯಂ ರತ್ನ ಪುರಸ್ಕಾರ 2026’ ಸಮಾರಂಭದಲ್ಲಿ ಗೆಹ್ಲೋಟ್ ಮಾತನಾಡುತ್ತಿದ್ದರು.
🚨 Congress Still Glorifies the Emergency Mindset? 🚨
“𝐈𝐟 𝐈𝐧𝐝𝐢𝐫𝐚 𝐆𝐚𝐧𝐝𝐡𝐢 𝐰𝐞𝐫𝐞 𝐚𝐥𝐢𝐯𝐞 𝐭𝐨𝐝𝐚𝐲, 𝐬𝐡𝐞 𝐰𝐨𝐮𝐥𝐝 𝐧𝐨𝐭 𝐡𝐚𝐯𝐞 𝐡𝐞𝐬𝐢𝐭𝐚𝐭𝐞𝐝 𝐭𝐨 𝐛𝐚𝐧 𝐭𝐡𝐞 𝐁𝐉𝐏,” says Congress leader Ashok Gehlot.
A striking remark, considering it was Indira… pic.twitter.com/cVj4HKPr7h
— Sanatan Prabhat (@SanatanPrabhat) June 15, 2026
1. ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳು ಒತ್ತಡದಲ್ಲಿ ಕೆಲಸ ಮಾಡುತ್ತಿವೆ ಮತ್ತು ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆ ಎಂದು ಗೆಹ್ಲೋಟ್ ಆರೋಪಿಸಿದರು. ಅವರು ಬುಲ್ಡೋಜರ್ ಕಾರ್ಯಾಚರಣೆ, ತನಿಖಾ ಸಂಸ್ಥೆಗಳ ಕಾರ್ಯವೈಖರಿ ಮತ್ತು ಚುನಾವಣಾ ಆಯೋಗದ ಪಾತ್ರದ ಮೇಲೆ ಪ್ರಶ್ನೆಗಳನ್ನು ಎತ್ತಿದರು. ಭಾಜಪ ಧರ್ಮ ಮತ್ತು ಧ್ರುವೀಕರಣದ ರಾಜಕಾರಣ ಮಾಡುತ್ತಿದೆ ಮತ್ತು ಸಂವಿಧಾನದ ಮೂಲ ಆಶಯದ ವಿರುದ್ಧ ಕೆಲಸ ಮಾಡುತ್ತಿದೆ ಎಂದು ಗೆಹ್ಲೋಟ್ ಆರೋಪಿಸಿದರು. (ಹಿಂದೂಗಳ ಮೇಲೆ ಅನ್ಯಾಯ ಮಾಡುವ ಕಲಮುಗಳನ್ನು ಸಂವಿಧಾನದಲ್ಲಿ ಸೇರಿಸಿ ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ಈ ದೇಶದ ವೈಚಾರಿಕ ವಿಭಜನೆ ಮಾಡಿದೆ. ಅಂತಹ ಕಾಂಗ್ರೆಸ್ ಭಾಜಪದ ಮೇಲೆ ಯಾವ ಮುಖ ಹೊತ್ತು ಇಂತಹ ಆರೋಪ ಮಾಡುತ್ತದೆ? – ಸಂಪಾದಕರು)
2. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಉಲ್ಲೇಖಿಸುತ್ತಾ, ಅವರು ಇಂದು ಬದುಕಿದ್ದರೆ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವ ಪಕ್ಷದ ಮೇಲೆ ನಿಷೇಧ ಹೇರುವಂತಹ ಕ್ರಮ ಕೈಗೊಳ್ಳಲು ಅವರು ಹಿಂದೇಟು ಹಾಕುತ್ತಿರಲಿಲ್ಲ ಎಂದು ಅವರು ಹೇಳಿದರು. (ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿ ಅಲ್ಪಸಂಖ್ಯಾತರ ಓಲೈಕೆ ಮಾಡುವ ಕಾಂಗ್ರೆಸ್ಸಿಗರನ್ನು ಜನರು ಮನೆಗೆ ಕಳುಹಿಸಿದ್ದಾರೆ, ಈ ಕಹಿ ಸತ್ಯವನ್ನು ಗೆಹ್ಲೋಟ್ ಮರೆತಿದ್ದಾರೆಯೇ? – ಸಂಪಾದಕರು)
3. ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಕೂಲಂಕಷ ಪರಿಶೀಲನಾ ಪ್ರಕ್ರಿಯೆಯ ಹೆಸರಿನಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ, ಇದು ಪ್ರಜಾಪ್ರಭುತ್ವಕ್ಕೆ ಆತಂಕಕಾರಿ ಲಕ್ಷಣವಾಗಿದೆ ಎಂದು ಅವರು ಹೇಳಿದರು. (ಯಾವ ಕಾಂಗ್ರೆಸ್ ಬಾಂಗ್ಲಾದೇಶಿ ನುಸುಳುಕೋರರಿಗೆ ಭಾರತೀಯ ಪೌರತ್ವ ನೀಡಿ ಗುರುತಿನ ಚೀಟಿಗಳನ್ನು ವಿತರಿಸಿತೋ ಮತ್ತು ಈ ನುಸುಳುಕೋರರು ದಶಕಗಳ ಕಾಲ ಕಾಂಗ್ರೆಸ್‌ಗೆ ಒಂದೇ ಸಮನೆ ಮತ ಹಾಕಿದ್ದರೋ, ಅಂತಹ ಕಾಂಗ್ರೆಸ್‌ಗೆ ವಿಶೇಷ ಕೂಲಂಕಷ ಪರಿಶೀಲನಾ ಪ್ರಕ್ರಿಯೆ ಆತಂಕಕಾರಿಯಾಗಿಯೇ ಇರುತ್ತದೆ, ಇದರಲ್ಲಿ ಆಶ್ಚರ್ಯವೇನಿದೆ? – ಸಂಪಾದಕರು)
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು
ಕೇರಳ: ಮದರಸಾ ಶಿಕ್ಷಕನೊಂದಿಗೆ ಮದುವೆ ನಿಶ್ಚಯವಾಗಿದ್ದಕ್ಕೆ ಬೇಸತ್ತು 19 ವರ್ಷದ ಯುವತಿ ಆತ್ಮಹತ್ಯೆ
ಬಂಗಾಳ ಸೌರಶಕ್ತಿ ಹಗರಣದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮಾಜಿ ನಗರಾಧ್ಯಕ್ಷನನ್ನು ಕೇರಳದಿಂದ ಬಂಧನ : Bengal Solar Scam
ಭಾರತೀಯ ಸೇನೆಯ ವಸಾಹತುಶಾಹಿ ಸಂಪ್ರದಾಯಗಳಲ್ಲಿ ಬದಲಾವಣೆ: ಸೇನಾ ಸಮವಸ್ತ್ರದ ಹೊಸ ನಿಯಮಾವಳಿ ಜಾರಿ : Army Uniform 2026