ಆಪತ್ಕಾಲದಲ್ಲಿ ಜೀವನರಕ್ಷಣೆ ಮಾಡಿಕೊಳ್ಳಲು ಸ್ವತಃ ಸಕ್ಷಮರಾಗಿ !

ಮನೆಯ ಬಾಲ್ಕನಿ, ಅಂಗಳ, ಹೊಲ ಇತ್ಯಾದಿಗಳಲ್ಲಿ ಬೆಳೆಸುವ ೨೦೦ ಔಷಧೀಯ ಸಸ್ಯಗಳ ಮಾಹಿತಿ ಮತ್ತು ಈ ಸಸ್ಯಗಳಿಂದ  ೧೦೦ ರೋಗಗಳ ನಿವಾರಣೆಗೆ ಹೇಗೆ ಬಳಸಬೇಕು ಎಂಬ  ಮಾಹಿತಿ ಗ್ರಂಥದಲ್ಲಿ ಕೊಡಲಾಗಿದೆ. ಭಾವೀ ಮಹಾಯುದ್ಧದಲ್ಲಿ ಆಗಬಹುದಾದ ಔಷಧಿಗಳ ಕೊರತೆ ಗಮನದಲ್ಲಿಟ್ಟು ಈಗಲೇ ಸಸ್ಯಗಳನ್ನು ಬೆಳೆಸಿ !

ಆಹಾರ ಮತ್ತು ಆಚಾರ ಇವುಗಳ ಕುರಿತು ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ನೈವೇದ್ಯವು ಷೋಡಶೋಪಚಾರ ಪೂಜೆಯ ಒಂದು ಉಪಚಾರವಾಗಿದೆ. ಇದರಲ್ಲಿ ದೇವರ ಪೂಜೆಯಾದ ನಂತರ ಆರತಿಯನ್ನು ಮಾಡುವ ಮೊದಲು ದೇವರಿಗೆ ನೈವೇದ್ಯವನ್ನು ತೋರಿಸಲಾಗುತ್ತದೆ. ಸಾತ್ತ್ವಿಕ ಆಹಾರದ ನೈವೇದ್ಯವನ್ನು ಭಾವಪೂರ್ಣವಾಗಿ ಪ್ರಾರ್ಥನೆ ಮಾಡಿ ದೇವರಿಗೆ ಅರ್ಪಿಸಿದರೆ ಆ ನೈವೇದ್ಯದ ಪದಾರ್ಥದ ಸಾತ್ತ್ವಿಕತೆಯಿಂದ ದೇವರಿಂದ ಪ್ರಕ್ಷೇಪಿತವಾಗುವ ಚೈತನ್ಯ-ಲಹರಿಗಳು ನೈವೇದ್ಯದಲ್ಲಿ ಆಕರ್ಷಿತವಾಗುತ್ತವೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ಪ.ಪೂ. ಭಕ್ತರಾಜರು ಪ.ಪೂ. ಡಾಕ್ಟರರಿಗೆ ನೀಡಿದ ಶ್ರೀಕೃಷ್ಣಾರ್ಜುನರ ಬೆಳ್ಳಿಯ ರಥವನ್ನು ಪೂಜಿಸುವ ಮೊದಲು ಮತ್ತು ನಂತರ ರಥದಿಂದ ಬಂದ ದೈವೀ ನಾದಗಳ ಆಧ್ಯಾತ್ಮಿಕ ವೈಶಿಷ್ಟ್ಯಗಳು !

‘೧೬.೬.೨೦೨೦ ರಂದು ಮಹರ್ಷಿಗಳ ಆಜ್ಞೆಗನುಸಾರ ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳ ಇವರು ಪ.ಪೂ ಭಕ್ತರಾಜ ಮಹಾರಾಜರು ಪರಾತ್ಪರ ಗುರು ಡಾ. ಆಠವಲೆಯವರಿಗೆ ನೀಡಿದ ಶ್ರೀಕೃಷ್ಣಾರ್ಜುನರ ಬೆಳ್ಳಿಯ ರಥದ ಪೂಜೆ ಮಾಡಿದ್ದರು. ಈ ಪೂಜೆಯ ವೇಳೆ ಈ ರಥದಿಂದ ಎರಡು ರೀತಿಯ ದೈವೀ ನಾದಗಳು ಕೇಳಿಬಂದವು. ಈ ದೈವೀ ನಾದಗಳ ಸೂಕ್ಷ್ಮ ಪರೀಕ್ಷಣೆ ಮಾಡಿದಾಗ ಅವುಗಳ ಬಗ್ಗೆ ಮುಂದಿನ ಜ್ಞಾನವು ದೊರಕಿತು.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಾತ್ಮಶಾಸ್ತ್ರವನ್ನು ಸೇರ್ಪಡೆಗೊಳಿಸುವುದು’ ಈ ವಿಷಯದಲ್ಲಿ ವೆಬಿನಾರ್

ಪ್ರಸ್ತುತ ವೈದ್ಯಕೀಯ ಶಿಕ್ಷಣದಲ್ಲಿ ಆಧ್ಯಾತ್ಮಿಕ ದೃಷ್ಟಿಕೋನದ ಅಭಾವವಿದೆ. ವೈದ್ಯಕೀಯ ಕ್ಷೇತ್ರವು ಕಾಲಕ್ರಮೇಣ ವ್ಯಾಪಾರಿಕರಣವಾಗುತ್ತಾ ಹೋದ ಹಾಗೆ ಆಧ್ಯಾತ್ಮಿಕ ದೃಷ್ಟಿಕೋನವು ಕಣ್ಮರೆ ಯಾಗುತ್ತಿದೆ. ರೋಗವನ್ನು ಪತ್ತೆಹಚ್ಚಲು ಹಲವು ಬಾರಿ ಅಡೆತಡೆ ಗಳು ಬರುತ್ತವೆ, ನಿಮಗೂ ಇದರ ಅನುಭವಿದೆ. ರೋಗವನ್ನು ಪತ್ತೆಹಚ್ಚುವಲ್ಲಿ ಬರುವ ಅಡೆತಡೆಗಳ ಹಿಂದೆ ಆಧ್ಯಾತ್ಮಿಕ ಕಾರಣವಿದೆಯೇ ಎಂದು ವಿಚಾರ ಮಾಡುವ ಆವಶ್ಯಕತೆಯಿದೆ.

‘ಸುರ-ತಾಲ ಹುನರ್ ಕಾ ಕಮಾಲ್’ ಈ ಜಾಗತಿಕ ‘ಆನ್‌ಲೈನ್’ ಸಂಗೀತ-ನೃತ್ಯ

‘ಸುರ-ತಾಲ ಹುನರ್ ಕಾ ಕಮಾಲ್’ ಈ ಕಾರ್ಯಕ್ರಮದ ಉದ್ಘಾಟನೆಯ ಸಮಾರಂಭವು ೧೫ ನವಂಬರ್‌ದಂದು ನೆರವೇರಿತು. ಈ ಸಮಯದಲ್ಲಿ ಡಾ. ರೇಖಾ ಮೆಹರಾ ಇವರು ಕಾರ್ಯಕ್ರಮದ ಉದ್ದೇಶವನ್ನು ಹೇಳಿದರು. ಅವರೊಂದಿಗೆ ಗಾಯನ ಮತ್ತು ನೃತ್ಯ ಕ್ಷೇತ್ರದ ಗುರುಜನರು ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸದ್ಗುರು ಚಾರುದತ್ತ ಪಿಂಗಳೆ ಇವರು ಗುರು-ಶಿಷ್ಯ ಸಂಬಂಧದ ವಿಷಯದಲ್ಲಿ ವ್ಯಕ್ತಪಡಿಸಿದ ಅಪೂರ್ವ ವಿಚಾರಗಳು !

‘ನಾವು ಗುರುದೇವರ ಋಣವನ್ನು ತೀರಿಸಲು ಎಂದಿಗೂ ಸಾಧ್ಯವಿಲ್ಲ. ನನಗೆ ಕೆಲವು ಹಳೆಯ ಪ್ರಸಂಗಗಳು ನೆನಪಾಗುತ್ತವೆ. ಮೊದಲು ನನಗೆ ‘ಗುರುಗಳ ಋಣವನ್ನು ತೀರಿಸಬೇಕು, ಎನ್ನುವ ಅಹಂಕಾರದ ವಿಚಾರವಿತ್ತು. ‘ನಾವು ಗುರುಗಳ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ, ಎಂಬುದು ನನಗೆ ತಿಳಿಯುತ್ತಿರಲಿಲ್ಲ. ನಂತರ ಸೇವೆ ಮಾಡುತ್ತಿರುವಾಗ ನನಗೆ ಅರಿವಾಯಿತೇನೆಂದರೆ, ‘ನಾನು ಗುರುಗಳಿಗಾಗಿ ಏನೆಲ್ಲ ಮಾಡುತ್ತೇನೋ (ಸೇವೆ), ಅದರಿಂದ ನನಗೇನು ಸಿಗುತ್ತದೋ (ಆನಂದ), ಅದನ್ನು ಗುರುಗಳೇ ಕೊಡುತ್ತಾರೆ.

ಸಕಾರಾತ್ಮಕ ದೃಷ್ಟಿಕೋನದ ಮೇಲೆ ಮನಸ್ಸಿನ ಶಕ್ತಿಯು ಅವಲಂಬಿಸಿರುತ್ತದೆ !

‘ಯಾವುದೊಂದು ವಿಷಯವು ನನ್ನಿಂದ ಆಗುವುದಿಲ್ಲ’, ಎಂದು ನಕಾರಾತ್ಮಕ ವಿಚಾರವನ್ನು ಮಾಡಿದರೆ, ಆ ವಿಷಯವು ಎಷ್ಟೇ ಸುಲಭವಾಗಿದ್ದರೂ ಆಗುವುದೇ ಇಲ್ಲ. ತದ್ವಿರುದ್ಧ ‘ಯಾವುದೊಂದು ವಿಷಯವು ನನ್ನಿಂದ ಆಗುತ್ತದೆ’, ಎಂಬ ಸಕಾರಾತ್ಮಕ ವಿಚಾರವನ್ನು ಮಾಡಿದರೆ, ಆ ವಿಷಯವು ಎಷ್ಟೇ ಕಠಿಣವಾಗಿದ್ದರೂ, ಮಾಡಲು ಆಗುತ್ತದೆ !’

೧೯೮೯ ರಿಂದ ಪರಾತ್ಪರ ಗುರು ಡಾ. ಆಠವಲೆಯವರು ತೆಗೆದುಕೊಂಡ ಮತ್ತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಅಡಿಪಾಯವಾದ ಅಭ್ಯಾಸವರ್ಗಗಳ ಬಗ್ಗೆ ಪೂ. ಶಿವಾಜಿ ವಟಕರರಿಗೆ ಅರಿವಾದ ಅಂಶಗಳು

ಅಭ್ಯಾಸವರ್ಗಕ್ಕೆ ಓರ್ವ ವಯೋವೃದ್ಧ ಗ್ರಹಸ್ಥ ಶ್ರೀ. ಜಹಾಗೀರದಾರ ಇವರು ಬರುತ್ತಿದ್ದರು. ಅವರು, “ಒಂದು ಸಲ ನನ್ನನ್ನು ಗೂಂಡಾಗಳು ಸುತ್ತುವರೆದಿದ್ದರು. ಆಗ ಗುರುಗಳ ಛಾಯಾಚಿತ್ರ ಮತ್ತು ಕುಲದೇವತೆಯ ಚಿತ್ರವನ್ನು ನೋಡಿದಾಗ, ನನ್ನ ಬಳಿಯಿದ್ದ ಉಂಗುರವನ್ನು ಆ ಐದು ಗೂಂಡಾಗಳ ಪೈಕಿ ಒಬ್ಬರಿಗೆ ಕೊಡಬೇಕು, ಎಂಬ ವಿಚಾರ ಬಂದಿತು.

ಪತಿಯ ನಿಧನದ ನಂತರ ದುಃಖದ ಸಮಯದಲ್ಲೂ ಸಾಧಕಿಯು ಗುರುಕೃಪೆ ಮತ್ತು ಸಾಧನೆಯಿಂದ ಅತ್ಯುನ್ನತ ಮಟ್ಟದ ಮಾನಸಿಕ ಸ್ಥಿರ ಹಾಗೂ ಭಾವಾವಸ್ಥೆ ಅನುಭವಿಸುವುದು

ಸಾಮಾನ್ಯವಾಗಿ ಯಾರಾದರೊಬ್ಬ ವ್ಯಕ್ತಿಯು ಕರ್ಮಕಾಂಡದ ಕೃತಿಗಳನ್ನು ಭಕ್ತಿಭಾವದಿಂದ ಮಾಡಿದರೆ ಅವನಲ್ಲಿ ಭಾವಜಾಗೃತವಾಗಬಹುದು; ಆದರೆ ಸಮಷ್ಟಿ ಸೇವೆಯನ್ನು ಮಾಡಲು ಮಾತೃವಾತ್ಸಲ್ಯಭಾವವು ಹೆಚ್ಚು ಆವಶ್ಯಕವಾಗಿದೆ. ನಮ್ಮೆದುರಿಗೆ ಇದರ ಆದರ್ಶ ಉದಾಹರಣೆಯೆಂದರೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರವರು (ಎಲ್ಲ ಸಾಧಕರ ತಾಯಿ) ಇದ್ದಾರೆ.

ಕಾರ್ತಿಕ ಶುಕ್ಲ ಪಕ್ಷ ತ್ರಯೋದಶಿ (ನವೆಂಬರ್ ೨೮) ಶ್ರೀ ಗೋರಕ್ಷನಾಥರ ಪ್ರಕಟದಿನ ನಿಮಿತ್ತ

ಶಕ ೧೭೧೦ ರ ವರೆಗೆ ಎಲ್ಲಾ ನವನಾಥರು ಪ್ರಕಟ ರೂಪದಲ್ಲಿದ್ದರು. ಅದರ ನಂತರ ಅವರು ಗುಪ್ತರಾದರು. ಗೋರಕ್ಷನಾಥರು ಗಿರನಾರ ಪರ್ವತದ ಮೇಲೆ ಶ್ರೀದತ್ತಾತ್ರೇಯರ ಆಶ್ರಯದಲ್ಲಿದ್ದರು. ಅರವತ್ನಾಲ್ಕು ಸಿದ್ಧಿಗಳಿಂದ ನಾಥಪಂಥ ಉತ್ಕರ್ಷವಾಯಿತು. ನೇಪಾಳಿ ಜನರು ಗೋರಕ್ಷನಾಥರನ್ನು ಭಗವಾನ ಪಶುಪತಿನಾಥರ ಅವತಾರವೆಂದು ನಂಬುತ್ತಾರೆ. ನೇಪಾಳದ ಕೆಲವು ಸ್ಥಳಗಳಲ್ಲಿ ಅವರ ಆಶ್ರಮಗಳಿವೆ.