
ಕೊಲಕಾತಾ (ಬಂಗಾಳ) – ಕೊಲಕಾತಾ ವಿಮಾನ ನಿಲ್ದಾಣ ಪ್ರಾಧಿಕಾರವು ‘ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ದ ರನ್‌ವೇ ಬಳಿ ಇರುವ ೧೩೬ ವರ್ಷ ಹಳೆಯದಾದ ‘ಬಾಂಕ್ರಾ ಮಸೀದಿ’ಯನ್ನು (ಇದನ್ನು ‘ಗೌರಿಪುರ ಜಾಮೆ ಮಸೀದಿ’ ಎಂದೂ ಪರಿಚಿತವಾಗಿದೆ.) ಸ್ಥಳಾಂತರಿಸಲು ನಿರ್ಧಾರ ತೆಗೆದುಕೊಂಡಿದೆ. ಹಾಗೆಯೇ ವಿಮಾನ ನಿಲ್ದಾಣದ ಹತ್ತಿರ ಇರುವ ಒಂದು ದೇವಸ್ಥಾನವನ್ನು ಸಹ ವಿಮಾನ ನಿಲ್ದಾಣದ ಆಧುನೀಕರಣ ಯೋಜನೆಯ ಭಾಗವಾಗಿ, ಸ್ಥಳಾಂತರಿಸಲಾಗುವುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಖಚಿತಪಡಿಸಿದ್ದಾರೆ.
೧. ವಿಮಾನ ನಿಲ್ದಾಣದ ನಿರ್ದೇಶಕ ವಿಕ್ರಮ್ ಸಿಂಗ್ ಅವರು ಮಾತನಾಡಿ, ಈ ಸ್ಥಳಾಂತರವು ಒಂದು ದೊಡ್ಡ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿದೆ ಎಂದು ಹೇಳಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ವಿಮಾನ ನಿಲ್ದಾಣದ ಆವರಣದ ಹೊರಗೆ ದೊಡ್ಡದಾದ ಮತ್ತು ಆಧುನಿಕವಾದ ಮಸೀದಿಯನ್ನು ನಿರ್ಮಿಸುವ ಪ್ರಸ್ತಾಪವನ್ನು ಆಡಳಿತ ಮಂಡಳಿಯ ಮುಂದಿಟ್ಟಿದೆ. ಈ ಯೋಜನೆ ಪೂರ್ಣಗೊಂಡ ನಂತರ, ವಿಮಾನ ನಿಲ್ದಾಣದ ವಾರ್ಷಿಕ ಪ್ರಯಾಣಿಕರ ಸಾಮರ್ಥ್ಯವು ೪ ಕೋಟಿಗೆ ಹೆಚ್ಚಾಗುವ ನಿರೀಕ್ಷೆಯಿದೆ.
೨. ವಿಮಾನ ನಿಲ್ದಾಣದ ಸುಧಾರಣಾ ಯೋಜನೆಯ ಭಾಗವಾಗಿ ಹತ್ತಿರದ ದೇವಸ್ಥಾನವನ್ನೂ ಸ್ಥಳಾಂತರಿಸಲಾಗುವುದು. ಅಭಿವೃದ್ಧಿಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ದಮ್‌ದಮ್‌ನ ಬಿಜೆಪಿ ಶಾಸಕ ಸೌರವ್ ಸಿಕದಾರ್ ಹೇಳಿದ್ದಾರೆ.
೩. ಈ ತಿಂಗಳ ಆರಂಭದಲ್ಲಿ ನಬಾನ್ನದಲ್ಲಿ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರು ಆಡಳಿತಾಧಿಕಾರಿಗಳು ಮತ್ತು ಶಾಸಕರೊಂದಿಗೆ ನಡೆಸಿದ ಮೊದಲ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಗಿತ್ತು.
೪. ಕೊಲಕಾತಾ ವಿಮಾನ ನಿಲ್ದಾಣವನ್ನು ಹೆಚ್ಚು ದಕ್ಷತೆಯ ಮತ್ತು ಜಾಗತಿಕ ಗುಣಮಟ್ಟದ ಸೌಲಭ್ಯವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಇದನ್ನು ಒಂದು ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.
ಆಹಾರ ಪದಾರ್ಥಗಳ ಮಾರಾಟಕ್ಕೆ ದಿಕ್ಕು ತಪ್ಪಿಸುವ ಹಕ್ಕುಗಳು: ೮ ಸಂಸ್ಥೆಗಳಿಗೆ ನೋಟಿಸ್
ಡೆಹ್ರಾಡೂನ್ (ಉತ್ತರಾಖಂಡ): ಮುಸ್ಲಿಮ್ ಗುಂಪಿನಿಂದ ಬಿಜೆಪಿ ನಾಯಕನ ಹತ್ಯೆ!
ಭಾರತೀಯ ನಾವಿಕರ ಸಾವು: ಭಾರತ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ
ಪಿ.ಎಫ್.ಐ.ನ ಮೂವರು ಸದಸ್ಯರಿಗೆ ಜಾಮೀನು ನಿರಾಕರಿಸಿದ ಮುಂಬಯಿ ಉಚ್ಚ ನ್ಯಾಯಾಲಯ
ಹಿಂದೂಗಳ ಬೇಡಿಕೆಗಳನ್ನು ಸರಕಾರಕ್ಕೆ ತಲುಪಿಸಿ ನ್ಯಾಯ ಸಿಗುವಂತೆ ಪ್ರಯತ್ನಿಸುತ್ತೇನೆ! – ಡಾ. ಅನಿಲ್ ಬೋಂಡೆ, ಸಂಸದರು, ಬಿಜೆಪಿ
ಬಿಹಾರದಲ್ಲಿ ಕಳ್ಳರು 40 ಮೀಟರ್ ಎತ್ತರದ ಮೊಬೈಲ್ ಟವರ್ ಅನ್ನೇ ಕದ್ದೊಯ್ದರು !