ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೃತವಚನಗಳು !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ

೧. ಸಾಧಕರ ಮತ್ತು ಶಿಷ್ಯರ ಆಯೋಜನೆಯಲ್ಲಿನ ವ್ಯತ್ಯಾಸ

‘ಸಾಧಕನ ಆಯೋಜನೆಯನ್ನು ಸಾಧಕನು ಸ್ವತಃ ಮಾಡಬೇಕಾಗುತ್ತದೆ. ಶಿಷ್ಯನ ಆಯೋಜನೆ ಮಾತ್ರ ಗುರುಗಳೇ ಮಾಡುತ್ತಾರೆ. ಒಂದು ಬಾರಿ ದೇವರ ಭಕ್ತನಾದ ಮೇಲೆ, ಅವನ ಜೀವನದ ಎಲ್ಲ ಆಯೋಜನೆಗಳನ್ನು ದೇವರೇ ಮಾಡುತ್ತಾರೆ; ಆದುದರಿಂದಲೇ ದೇವರ ಭಕ್ತರಾಗಿರುವ ಸಂತರು, ‘ನಮ್ಮ ಆಯೋಜನೆಯನ್ನು ನಾವು ಮಾಡುವುದೇ ಇಲ್ಲ. ನಮ್ಮ ಎಲ್ಲವನ್ನು ದೇವರೇ ನೋಡಿಕೊಳ್ಳುತ್ತಾರೆ’, ಎಂದು ಹೇಳುತ್ತಾರೆ.

೨. ಭಾವವಿದ್ದರೆ ಕರ್ಮವು ಅಕರ್ಮವಾಗುತ್ತದೆ.

೩. ಕನಿಷ್ಠ ದೇವತೆಗಳ ಮತ್ತು ಉಚ್ಚ ದೇವತೆಗಳ ಕಾರ್ಯದಲ್ಲಿ ವ್ಯತ್ಯಾಸ

ಕನಿಷ್ಠ ದೇವತೆಗಳು ಕರ್ಮದ ಸ್ತರದಲ್ಲಿ, ಅಂದರೆ ಸಕಾಮ ಸ್ತರದಲ್ಲಿ ತಾತ್ಕಾಲಿಕ ಮಾರ್ಗದರ್ಶನವನ್ನು ಮಾಡುತ್ತಾರಾದರೆ, ಉಚ್ಚ ದೇವತೆಗಳು ಸಾಧಕನಿಗೆ ಕರ್ಮದ ಆಚೆಗೆ ಹೋಗಲು ಕಲಿಸಿ ಶಾಶ್ವತವಾದ ಆನಂದಪ್ರಾಪ್ತಿಯ ಮಾರ್ಗವನ್ನು ತೋರಿಸುತ್ತಾರೆ.

೪. ಸಾಧಕನ ಸಾಧನೆಯ ಪ್ರಯಾಣದಲ್ಲಿ ಗುರುಗಳ ಸಹಾಯವು ಅತ್ಯಂತ ಮಹತ್ವದ್ದಾಗಿರುವುದು 

ಸಾಧಕನು ಸಾಧನೆಯ ಪ್ರಯಾಣದಲ್ಲಿ ಹಂತಹಂತವಾಗಿ ಮುಂದುಮುಂದಿನ ಪ್ರಯಾಣ ಮಾಡುತ್ತಿರುತ್ತಾನೆ. ಇದರಲ್ಲಿ ಅವನಿಗೆ ಅನಂತ ಅಡಚಣೆಗಳು ಬರುತ್ತವೆ; ಆದರೆ ಅವನಿಗೆ ಇದರಲ್ಲಿ ಗುರುಗಳೇ ಮಾರ್ಗವನ್ನು ತೋರಿಸುತ್ತಾರೆ. ಗುರುಗಳು ಅವನ ಮೃತ್ಯುವಿನ ಭಯವನ್ನು ತೆಗೆದುಹಾಕುತ್ತಾರೆ ಮತ್ತು ಅವನಿಗೆ ಜೀವನ-ಮೃತ್ಯುವಿನ ರೇಖೆಯ ಆಚೆಗೆ ಒಯ್ಯುತ್ತಾರೆ. ಯಾರಿಗೆ ಮೃತ್ಯುವಿನ ಭಯವು ಮುಗಿಯುತ್ತದೆಯೋ. ಅವನಿಗೆ ಜೀವನದಲ್ಲಿನ ಆಡಚಣೆಗಳ ಬಗ್ಗೆ ಏನೂ ಅನಿಸುವುದಿಲ್ಲ; ಏಕೆಂದರೆ ಅವನಿಗೆ ಗುರುಗಳು ಮೃತ್ಯುವಿನ ನಂತರವೂ ನಮ್ಮೊಂದಿಗೆ ಇರುತ್ತಾರೆ, ಎಂದು ಗುರುಗಳ ಬಗ್ಗೆ ಶ್ರದ್ಧೆ ಇರುತ್ತದೆ. ಈ ಅಚಲವಾದ ಶ್ರದ್ಧೆಯ ಹಗ್ಗದಿಂದಲೇ ಅವನ ಜೀವನವು ನಡೆಯುತ್ತಿರುತ್ತದೆ; ಆದುದರಿಂದ ಜೀವನದಲ್ಲಿ ಗುರುಗಳ ಜೊತೆ ಇರುವುದು ಅತ್ಯಂತ ಮಹತ್ವದ್ದಾಗಿರುತ್ತದೆ.

– (ಶ್ರೀಚಿತ್‌ಶಕ್ತಿ) ಸೌ. ಅಂಜಲಿ ಗಾಡಗೀಳ (೧೨.೪.೨೦೨೦)