೧. ಕರ್ತೃತ್ವ
‘ಭಗವಂತನು (ಪರಾತ್ಪರ ಗುರು ಡಾ. ಆಠವಲೆಯವರು) ನನಗೆ ಸೇವೆಯನ್ನು ಒದಗಿಸಿದ್ದಾರೆ. ನನ್ನಿಂದ ಸೇವೆಯನ್ನೂ ಮಾಡಿಸಿ ಕೊಳ್ಳುತ್ತಿದ್ದಾರೆ; ಆದರೆ ಸೇವೆಯಾದ ನಂತರ ಕರ್ತೃತ್ವದ ವಿಚಾರಗಳಿಂದ ‘ಆ ಸೇವೆಯನ್ನು ನಾನು ಮಾಡಿದ್ದೇನೆ’, ಎಂದು ಸಾಧಕನಿಗೆ ಅನಿಸುತ್ತದೆ. ಕರ್ತೃತ್ವವನ್ನು ನಾಶ ಮಾಡಲು ಪ್ರತಿಯೊಂದು ಸೇವೆಯ ಅವಕಾಶ ನೀಡಿದ ಬಗ್ಗೆ, ಸೇವೆಯನ್ನು ಆರಂಭಿಸುವ ಮೊದಲು ಮತ್ತು ಮುಗಿದ ನಂತರ ‘ಅದನ್ನು ಭಗವಂತನೇ ಮಾಡಿಸಿಕೊಂಡಿದ್ದಾನೆ’, ಎಂದು ಕೃತಜ್ಞತೆಯನ್ನು ವ್ಯಕ್ತ ಮಾಡಿದರೆ ಕರ್ತೃತ್ವವು ನಾಶವಾಗಿ ಆ ಸೇವೆಯಿಂದ ನಮ್ಮ ಸಾಧನೆಯಾಗುತ್ತದೆ.’ ಇತರರಿಂದ ನನಗೆ ಸುಖ-ದುಃಖವೆನಿಸುವುದು ಇದು ಕುಬುದ್ಧಿ ಯದ್ದಾಗಿದ್ದು ನಾನು ಮಾಡುತ್ತೇನೆ, ನನಗೆ ಬರುತ್ತದೆ, ಎಂದು ಅನಿಸುವುದು ವೃಥಾ ಅಭಿಮಾನವಾಗಿರುವುದು
೨. ನಮ್ಮ ಜೀವನದಲ್ಲಿ ನಡೆಯುವ ಅನೇಕ ಒಳ್ಳೆಯ ಹಾಗೂ ಕೆಟ್ಟ ಘಟನೆಗಳಿಗಾಗಿ ನಾವು ಬೇರೆಯವರು ಕಾರಣವೆಂದು ತಿಳಿಯುತ್ತೇವೆ ಆದರೆ ಏನೂ ನಡೆಯುತ್ತಿರುತ್ತದೆ ಅದು ಕೇವಲ ನಮ್ಮ ಪ್ರಾರಬ್ಧಾನುಸಾರ ನಡೆಯುತ್ತಿರುತ್ತದೆ ಅದೆಲ್ಲವು ನಮ್ಮದೆ ಕರ್ಮದ ಫಲವಾಗಿರುತ್ತದೆ, ಇದನ್ನು ತಿಳಿದುಕೊಂಡರೆ ಬೇರೆಯವರ ಬಗ್ಗೆ ಬರುವ ಪ್ರತಿಕ್ರಿಯೆಯು ಅಲ್ಪವಾಗಬಹುದು.
೩. ಮನುಷ್ಯ ಪರಾಧೀನ (ಈಶ್ವರಾಧೀನ)ವಾಗಿದ್ದಾನೆ ಕರ್ಮ ಯೋಗದ ಪ್ರಸಿದ್ಧ ಶ್ಲೋಕವು ಇದನ್ನೆ ಹೇಳುತ್ತದೆ ಮುಂದಿನ ಶ್ಲೋಕದಿಂದ ಇದು ಸ್ಪಷ್ಟವಾಗಬಹುದು.
ಸುಖಸ್ಯ ದುಃಖಸ್ಯ ನ ಕೋ ಪಿ ದಾತಾ,
ಪರೋ ದದಾತೀತಿ ಕುಬುದ್ಧಿರೆಷಾ |
ಅಹಂ ಕರೋಮೀತಿ ವೃಥಾಭಿಮಾನಃ
ಸ್ವಕರ್ಮಸೂತ್ರಗ್ರಥಿತೋ ಹಿ ಲೋಕಃ ||
– ಅಧ್ಯಾತ್ಮ ರಾಮಾಯಣ, ಅಯೋಧ್ಯಾಕಾಂಡ, ಸರ್ಗ ೬, ಶ್ಲೋಕ ೬
ಅರ್ಥ : ನಮಗೆ ಆಗುವ ಸುಖ ಅಥವಾ ದುಃಖ ಇವುಗಳು ಯಾರು ನೀಡುವುದಲ್ಲ ಅದು ನಮ್ಮ ಕರ್ಮದ ಫಲವೇ ಆಗಿದೆ. ಇನ್ನೊಬ್ಬರಿಂದ ನನಗೆ ಸುಖ ಅಥವಾ ದುಃಖ ಸಿಗುತ್ತದೆ, ಎಂಬ ವಿಚಾರವು ದುರ್ಬುದ್ಧಿ ಅಜ್ಞಾನವಾಗಿದೆ. ನಾನು ಎಲ್ಲಾ (ಒಳ್ಳೆಯದು) ಮಾಡುತ್ತೇನೆ, ಎಂಬ ಅಭಿಮಾನವಿಡುವುದು ವ್ಯರ್ಥವಾಗಿದೆ. ಏಕೆಂದರೆ ಎಲ್ಲರೂ ತಮ್ಮದೇ ಕರ್ಮದ ಫಲವನ್ನು ಭೋಗಿಸುತ್ತಿರುತ್ತೇವೆ.
ಸತ್ಯವೇನೆಂದರೆ ಪೂರ್ವಜನ್ಮದಲ್ಲಿ ನಾನು ಮಾಡಿದ ಪಾಪ- ಪುಣ್ಯದ ಫಲವನ್ನು ಈ ಜನ್ಮದಲ್ಲಿ ಒಂದರ ನಂತರ ಒಂದು (ಯಾವ ರೀತಿ ಸರ ತುಂಡಾದರೆ ಎಲ್ಲಾ ಮಣಿಗಳು ಒಂದರ ನಂತರ ಒಂದು ಹೊರಬೀಳುತ್ತದೆ ಅದರಂತೆ) ಅನುಭವಿಸುತ್ತೇವೆ. ಮಣಿಗಳನ್ನು ಹಿಂದೆ ಮುಂದೆ ಮಾಡಲು ಬರುವುದಿಲ್ಲ. ಅದು ಒಂದರ ಹಿಂದೆ ಒಂದು ಬರಬೇಕಾಗುತ್ತದೆ. ಪಾಪ-ಪುಣ್ಯ ಈ ಮಣಿಗಳ ರಚನೆಯನ್ನು ಈಶ್ವರನು ಮಾಡುತ್ತಾನೆ. – (ಸದ್ಗುರು) ಶ್ರೀ. ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (೨೦.೧೦.೨೦೧೯)