ಮನುಷ್ಯನು ಜೀವನದಲ್ಲಿ ನಿಜವಾದ ಆನಂದವನ್ನು ಪ್ರಾಪ್ತಮಾಡಿಕೊಳ್ಳಲು ‘ಸಾಧನೆಯನ್ನು ಮಾಡುವುದು’, ಏಕೈಕ ಪರ್ಯಾಯವಾಗಿದೆ !

ಸಾಧನೆಯಿಂದಲೇ ನಮಗೆ ತೀವ್ರ ಪ್ರಾರಬ್ಧವನ್ನು ಎದುರಿಸಲು ಸಾಧ್ಯವಾಗುತ್ತದೆ. ವಿವಾಹ ಮಾಡಿಕೊಂಡು ಆ ಸಾಧಕನು ಮಾಯೆಯಲ್ಲಿ ಸಿಲುಕುವವನಿದ್ದರೆ ಹಾಗೂ ಅದರಿಂದ ಅವನು ಈಶ್ವರನಿಂದ ದೂರ ಹೋಗುವವನಿದ್ದರೆ, ಅವನ ವಿವಾಹವು ದೇವರ ಕೃಪೆಯಿಂದ ತಪ್ಪುತ್ತದೆ ಹಾಗೂ ಅವನ ಸಾಧನೆಯಲ್ಲಿನ ಅಡಚಣೆಯು ದೂರವಾಗುತ್ತವೆ.

ಪೂ. ಭಾರ್ಗವರಾಮ ಪ್ರಭು ಇವರ ಜನ್ಮದಿನ ವೈಶಾಖ ಶುಕ್ಲ ಪಕ್ಷ ದಶಮಿ (೩.೫.೨೦೨೦)

‘೪.೧೧.೨೦೧೮ ರಂದು ಮಂಗಳೂರಿನ ಚಿ. ಭಾರ್ಗವರಾಮ ಪ್ರಭು (೨ ವರ್ಷ ೯ ತಿಂಗಳು) ಇವರನ್ನು ‘ಸಂತರು ಎಂದು ಘೋಷಿಸಲಾಯಿತು. ಅದಕ್ಕಿಂತ ಮೊದಲು ಅವರ ಅಲೌಕಿಕತೆಯನ್ನು ತೋರಿಸುವ ಅವರ ದಿನಪೂರ್ತಿ ನಡೆಯುವ ವೈಶಿಷ್ಟ್ಯಪೂರ್ಣ ಕೃತಿಗಳ ಬಗ್ಗೆ ಒಂದು ಧ್ವನಿಚಿತ್ರ ಮುದ್ರಿಕೆಯನ್ನು (ವಿಡಿಯೋ) ತೋರಿಸಲಾಯಿತು. ಅದನ್ನು ನೋಡಿ ನನಗೆ ಅವರ ಚಿತ್ರವನ್ನು ಬಿಡಿಸುವ ಸ್ಫೂರ್ತಿ ಸಿಕ್ಕಿತು.

ಆಪತ್ಕಾಲದಲ್ಲಿ ದಿಕ್ಕುತೋರುವ ಸಂತರ ಅಮೃತವಾಣಿ

ಆಪತ್ತುಗಳು ಆಂತರಿಕ ಮತ್ತು ಬಾಹ್ಯ ಕಾರಣಗಳಿಂದ ನಿರ್ಮಾಣವಾಗುತ್ತವೆ. ಆಪತ್ತುಗಳು ನೈಸರ್ಗಿಕ ಅಥವಾ ಮಾನವ ನಿರ್ಮಿತ ಕಾರಣಗಳ ಪರಿಣಾಮವಾಗಿವೆ, ಆಪತ್ತು ಪ್ರಾಣ ಹಾಗೂ ಆಸ್ತಿಪಾಸ್ತಿಗಳ ಹಾನಿಯಾಗಿ ಸಾಮಾನ್ಯ ಜೀವನವು ಎಷ್ಟರ ಮಟ್ಟಿಗೆ ಅಸ್ತವ್ಯಸ್ತವಾಗುತ್ತದೆ ಅಂದರೆ ಅದನ್ನು ಎದುರಿಸಲು ಇರುವ ಎಲ್ಲ ಸಾಮಾಜಿಕ ಹಾಗೂ ಆರ್ಥಿಕ ಸಂರಕ್ಷಣೆಯ ಕಾರ್ಯವಿಧಾನಗಳೂ ಸಾಕಾಗುವುದಿಲ್ಲ.

ಕೊರೋನಾ ರೋಗದಿಂದ ನಿರ್ಮಾಣವಾದ ಆಪತ್ಕಾಲದಲ್ಲಿ ಜಗತ್ತು ಹಿಂದೂ ಧರ್ಮದ ಆಚರಣೆ ಮಾಡದೇ ಪರ್ಯಾಯವಿಲ್ಲ, ಇದರಿಂದ ಹಿಂದೂ ಧರ್ಮ ಶ್ರೇಷ್ಟತೆ ಸಿದ್ಧವಾಗಲಿದೆ

ಪರಸ್ಪರ ಭೇಟಿಯಾಗುವಾಗ ಹಸ್ತಲಾಘವ ಮಾಡುವುದು, ಆಲಂಗಿಸುವುದು, ಚುಂಬಿಸುವುದು ಇತ್ಯಾದಿಗಳನ್ನು ನಿಲ್ಲಿಸಿ ಮನುಷ್ಯ ತನ್ನಿಂತಾನೆ ಹಿಂದೂ ಧರ್ಮಕ್ಕನುಸಾರ ‘ನಮಸ್ಕಾರ ಮಾಡಲು ಆರಂಭಿಸಿದ್ದಾನೆ. ಇದರಿಂದ ಕೊರೋನಾದಂತಹ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆಯಂತೂ ಆಗುತ್ತದೆ ಅದರೊಂದಿಗೆ ಕೆಟ್ಟ ಶಕ್ತಿಗಳ ತೊಂದರೆಯಿರುವ ಜನರಿಂದಲೂ ರಕ್ಷಣೆಯಾಗುವುದು ಮತ್ತು ಯೋಗ್ಯವಾದ ಧರ್ಮಾಚರಣೆಯ ಲಾಭವೂ ಆಗುತ್ತದೆ.