ಸೂಕ್ಷ್ಮದಿಂದ ಜ್ಞಾನ ಪಡೆಯುವ ಸೇವೆ ಮಾಡುವಾಗ ಜ್ಞಾನ ಪಡೆಯುವ ಸಾಧಕ ಶ್ರೀ. ರಾಮ ಹೊನಪ ಇವರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಂದ ಕಲಿಯಲು ಸಿಕ್ಕಿದ ವೈಶಿಷ್ಟ್ಯಪೂರ್ಣ ವಿಷಯಗಳು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ಸಂಚಿಕೆ ೨೩/೪೧ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಸೂಕ್ಷ್ಮದ ಜ್ಞಾನವನ್ನು ಪಡೆಯಲು ಹೇಳುವ ಹಿಂದಿನ ಉದ್ದೇಶ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸನಾತನ ಸಂಸ್ಥೆಯಲ್ಲಿ ಸೂಕ್ಷ್ಮ ಜ್ಞಾನಕ್ಕೆ ಬಹಳ ಮಹತ್ವ ನೀಡುವ ಹಿಂದಿನ ಕಾರಣಗಳ ಬಗ್ಗೆ ತಿಳಿದುಕೊಂಡೆವು. ಇಂದು ನಾವು ಅದರ ಮುಂದಿನ ಭಾಗವನ್ನು ನೋಡೋಣ.

ಶ್ರೀ. ರಾಮ ಹೊನಪ

೧೧. ಸೂಕ್ಷ್ಮ ಜ್ಞಾನವನ್ನು ಪಡೆಯುವುದರೊಂದಿಗೆ ಇತರ ಸಾಧಕರಿಂದ ಕಲಿಯುವುದಕ್ಕೂ ಮಹತ್ವ ನೀಡುವುದು

ಒಂದು ಸಲ ನಾನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ, ಸೂಕ್ಷ್ಮ ಜ್ಞಾನವನ್ನು ಪಡೆಯಲು ನೀವು ನನಗೆ ಬಹಳ ಪ್ರಶ್ನೆಗಳನ್ನು ನೀಡಿರುವಿರಿ. ಅವುಗಳಲ್ಲಿನ ಹೆಚ್ಚಿನ ಪ್ರಶ್ನೆಗಳ ಉತ್ತರಗಳು ಇಂದಿಗೂ ಬಾಕಿ ಉಳಿದಿವೆ. ಪ್ರತಿವಾರ ೧ ಗಂಟೆ ನನ್ನ ವ್ಯಷ್ಟಿ ಸಾಧನೆಯ ವರದಿ ಸತ್ಸಂಗ ಇರುತ್ತದೆ. ಅಲ್ಲಿಗೆ ಹೋಗದೇ ನಾನು ಸೂಕ್ಷ್ಮದಿಂದ ಜ್ಞಾನ ಪಡೆಯುವ ಸೇವೆಯನ್ನು ಮಾಡಬೇಕೋ ಹೇಗೆ ಎಂದು ಕೇಳಿದೆನು. ಈ ಬಗ್ಗೆ ಅವರು, ವ್ಯಷ್ಟಿ ವರದಿ ಸತ್ಸಂಗಕ್ಕೆ ಹೋಗಬೇಕು. ವರದಿ ಸತ್ಸಂಗಕ್ಕೆ ಹೋದರೆ ಇತರ ಸಾಧಕರಿಂದ ಸಾಧನೆಯ ದೃಷ್ಟಿಯಿಂದ ಕಲಿಯಲು ಬರುತ್ತದೆ ಎಂದು ಹೇಳಿದರು.

೧೨. ಸೂಕ್ಷ್ಮ ಜ್ಞಾನವನ್ನು ಪಡೆಯುವುದರೊಂದಿಗೆ ಅದರ ‘ವ್ಯಾಕರಣ’ ಮತ್ತು ‘ಸಂಕಲನ’ವನ್ನು ಸರಿಯಾಗಿ ಮಾಡುವುದು ಮಹತ್ವದ್ದಾಗಿದೆ ಎಂದು ಹೇಳುವುದು

೨೦೧೬  ನೇ ಇಸವಿಯಲ್ಲಿ ನನಗೆ ಸೂಕ್ಷ್ಮದಿಂದ ದೊರಕುತ್ತಿರುವ ಜ್ಞಾನವನ್ನು ನಾನು ಬೆರಳಚ್ಚು ಮಾಡುತ್ತಿದ್ದೆನು. ಅದರ ‘ವ್ಯಾಕರಣ’ ಮತ್ತು ‘ಸಂಕಲನ’ವನ್ನು ಪರಿಶೀಲಿಸಲು ಈ ಗಣಕೀಯ ಕಡತವನ್ನು ಈ ಸೇವೆಗೆ ಸಂಬಂಧಪಟ್ಟ ಇತರ ಸಾಧಕರಿಗೆ ನೀಡುತ್ತಿದ್ದೆನು. ಒಂದು ಬಾರಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನನಗೆ, ಕೇವಲ ಸೂಕ್ಷ್ಮದಿಂದ ಜ್ಞಾನ ದೊರಕಿಸಿಕೊಳ್ಳುವುದು, ಇದು ಕನಿಷ್ಠ ಸೇವೆಯಾಗಿದೆ. ನಿನ್ನ ಜ್ಞಾನದ ಕಡತವನ್ನು ನೀನೇ ವ್ಯಾಕರಣ ಮತ್ತು ಸಂಕಲನದ ದೃಷ್ಟಿಯಿಂದ ತಪ್ಪಿಲ್ಲದೇ ಮಾಡಿದರೆ ಈ ಸೇವೆಯು ಪರಿಪೂರ್ಣವಾಗಲಿದೆ ಎಂದು ಹೇಳಿದರು. ಅನಂತರ ನಾನು ಇತರ ಸಾಧಕರಿಂದ ವ್ಯಾಕರಣ ಮತ್ತು ಸಂಕಲನವನ್ನು ಕಲಿತೆನು.

೧೩. ಕೆಲವು ಪ್ರಸಂಗಗಳಲ್ಲಿ ಸೂಕ್ಷ್ಮ ಜ್ಞಾನ ಪಡೆಯುವುದ ಕ್ಕಿಂತ ಆಧ್ಯಾತ್ಮಿಕ ತೊಂದರೆ ಕಡಿಮೆ ಮಾಡಲು ಆದ್ಯತೆ

ಒಂದು ಬಾರಿ ನಾನು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ, ಸೂಕ್ಷ್ಮಜ್ಞಾನವನ್ನು ಪಡೆಯುವಾಗ ನನಗೆ ಕೆಟ್ಟ ಶಕ್ತಿಗಳ ಆಕ್ರಮಣದಿಂದ ಬುದ್ಧಿಭ್ರಮಣೆಯಾದಂತೆ ತೊಂದರೆಯಾಗುತ್ತದೆ. ಸದ್ಯ ನನ್ನ ೫ ಗಂಟೆ ನಾಮಜಪ ಉಪಾಯಗಳು ನಡೆದಿವೆ. ಇನ್ನೂ ಏನು ಮಾಡಬೇಕು ಎಂದು ಕೇಳಿದೆನು. ಇದನ್ನು ಕೇಳಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಅರೇ ಬಾಪರೇ ! ಸದ್ಯ ಕೆಲವು ದಿನ ೮ ಗಂಟೆ ಉಪಾಯ ಮಾಡಬೇಕು. ಅನಂತರ ಸೂಕ್ಷ್ಮದಿಂದ ಜ್ಞಾನ ಪಡೆಯುವ ಸೇವೆಯನ್ನು ಮಾಡಬೇಕು ಎಂದು ಹೇಳಿದರು.

೧೪. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಕಾಲದ ಆಚೆಗೆ ಹೋಗಿ ಸೂಕ್ಷ್ಮ ಜ್ಞಾನವನ್ನು ಪಡೆಯಲು ಕಲಿಸುವುದು

೧೪ ಅ. ಭೂತಕಾಲಕ್ಕೆ ಹೋಗುವುದು

೧೪ ಅ ೧. ಓರ್ವ ಸಾಧಕಿಯ ಚಪ್ಪಲಿಗಳು ಮೇಲಿಂದ ಮೇಲೆ ಕಳ್ಳತನವಾಗುವ ಘಟನೆಯ ಹಿಂದಿನ ಆಧ್ಯಾತ್ಮಿಕ ಕಾರಣವನ್ನು ಅವಳ ಹಿಂದಿನ ಜನ್ಮಗಳಿಗೆ ಹೋಗಿ ಕಂಡು ಹಿಡಿಯಲು ಹೇಳುವುದು :

ಓರ್ವ ಸಾಧಕಿಯು ನನ್ನ ಜೀವನದಲ್ಲಿ ದೇವಾಲಯಗಳಲ್ಲಿ, ಹಾಗೆಯೇ ಇತರ ಸ್ಥಳಗಳಲ್ಲಿ ಚಪ್ಪಲಿಗಳ ಕಳ್ಳತನವಾಗುವ ಅನೇಕ ಪ್ರಸಂಗಗಳು ಘಟಿಸಿದವು. ಅದರ ಹಿಂದೆ ಏನಾದರೂ ಆಧ್ಯಾತ್ಮಿಕ ಕಾರಣಗಳಿವೆಯೇ ಎಂದು ನನ್ನಲ್ಲಿ ಕೇಳಿದಳು. ಆದರೆ ಈ ಬಗ್ಗೆ ನಾನು ಸಹಜವಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಹೇಳಿದಾಗ ಅವರು ನನಗೆ, ಆ ಸಾಧಕಿಯಿಂದ ಇಂದಿನವರೆಗೆ ಅವಳ ಚಪ್ಪಲಿಗಳು ಯಾವಾಗ ಮತ್ತು ಎಲ್ಲಿ ಕಳುವಾಗಿವೆ ಎಂಬುದರ ಮಾಹಿತಿಯನ್ನು (ಹಿಸ್ಟ್ರಿ) ಪಡೆ. ಅನಂತರ ‘ಚಪ್ಪಲಿಗಳು ಮೇಲಿಂದ ಮೇಲೆ ಕಳ್ಳತನವಾಗುವ ಪ್ರಸಂಗಗಳ ಅವಳ ಹಿಂದಿನ ಜನ್ಮಗಳೊಂದಿಗೆ ಏನಾದರೂ ಸಂಬಂಧವಿದೆಯೇ ಎಂದು ಸೂಕ್ಷ್ಮದಿಂದ ಅಧ್ಯಯನ ಮಾಡು ಎಂದರು. ಈ ಪ್ರಸಂಗದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ‘ಜಿಜ್ಞಾಸೆ ಮತ್ತು ಅಧ್ಯಯನವೃತ್ತಿ’ಯ ಬಗ್ಗೆ ನನಗೆ ಆಶ್ಚರ್ಯವೆನಿಸಿತು.

ಅನಂತರ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಹೇಳಿದಂತೆ ಆ ಸಾಧಕಿಯ ಹಿಂದಿನ ಜನ್ಮಗಳ ಅಧ್ಯಯನವನ್ನು ಭಗವಂತನು ಸೂಕ್ಷ್ಮ ಜ್ಞಾನದ ಮಾಧ್ಯಮದಿಂದ ಮಾಡಿಸಿಕೊಂಡನು. ಅದರಿಂದ ಕಳೆದ ಜನ್ಮಗಳಲ್ಲಿ ಕೆಲವು ಪ್ರಸಂಗಗಳ ಪರಿಣಾಮವೆಂದು ಆ ಸಾಧಕಿಯ ಸದ್ಯದ ಜನ್ಮದಲ್ಲಿ ಚಪ್ಪಲಿಗಳು ಕಳ್ಳತನವಾಗುವ ಘಟನೆಗಳು ಸಂಭವಿಸುತ್ತಿವೆ ಎಂದು ಗಮನಕ್ಕೆ ಬಂತು ಹಾಗೆಯೇ ಈ ಸಮಸ್ಯೆಗೆ ಆ ಸಾಧಕಿಯು ‘ಯಾವ ಉಪಾಯವನ್ನು ಮಾಡಬೇಕು’, ಎಂಬ ಬಗ್ಗೆ ನನಗೆ ಸೂಕ್ಷ್ಮದಿಂದ ಜ್ಞಾನವು ದೊರಕಿತು.

೧೪ ಅ ೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತಮ್ಮ, ಹಾಗೆಯೇ ಜ್ಞಾನಪ್ರಾಪ್ತಿ ಮಾಡಿಕೊಳ್ಳುವ ಸಾಧಕರ ಹಿಂದಿನ ಜನ್ಮಗಳಲ್ಲಿನ ವಿವಿಧ ಘಟನಾವಳಿಗಳ ಅಧ್ಯಯನ ಮಾಡಲು ಹೇಳುವುದು : ಒಂದು ಸಲ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ನನಗೆ ತಮ್ಮ ಸ್ವತಃದ, ಹಾಗೆಯೆ ಜ್ಞಾನಪ್ರಾಪ್ತಿ ಮಾಡಿಕೊಳ್ಳುವ ಸಾಧಕರಾದ (ಶ್ರೀ. ನಿಷಾದ ದೇಶಮುಖ, ಕು. ಮಧುರಾ ಭೋಸಲೆ ಮತ್ತು ಶ್ರೀ. ರಾಮ ಹೊನಪ) ಇವರ ಹಿಂದಿನ ಜನ್ಮಗಳ ಬಗ್ಗೆ ಜ್ಞಾನವನ್ನು ಸೂಕ್ಷ್ಮದಿಂದ ಪಡೆಯಲು ಹೇಳಿದರು.

೧೪ ಆ. ಭವಿಷ್ಯತ್ಕಾಲಕ್ಕೆ ಹೋಗುವುದು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸೂಕ್ಷ್ಮಜ್ಞಾನದ ಮೂಲಕ ಭವಿಷ್ಯತ್ಕಾಲದ ಅಧ್ಯಯನ ಮಾಡಲು ಕಲಿಸುವುದು : ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಯಾವ ರೀತಿ ವ್ಯಕ್ತಿಯ ಹಿಂದಿನ ಜನ್ಮಗಳಲ್ಲಿ ಹೋಗಿ ಅವನ ಭೂತಕಾಲದ ಅಧ್ಯಯನ ಮಾಡಲು ಕಲಿಸಿದರೋ, ಅದೇ ರೀತಿ ಅವರು ಮುಂದಿನ ವಿಷಯಗಳ ಸೂಕ್ಷ್ಮ ಜ್ಞಾನವನ್ನು ಪಡೆಯಲು ಪ್ರಶ್ನೆಗಳನ್ನು ನೀಡಿ ಭವಿಷ್ಯತ್ಕಾಲದ ಅಧ್ಯಯನವನ್ನೂ ಮಾಡಿಸಿಕೊಂಡರು, ಉದಾ. ಪೃಥ್ವಿಯ ಮೇಲೆ ಭೀಕರ ಸಂಕಟಕಾಲ ಯಾವಾಗ ಬರುವುದು ? ಆ ಕಾಲದಲ್ಲಿ ಸಾಧಕರಿಗೆ ವಾಸಿಸಲು ಸುರಕ್ಷಿತ ಮತ್ತು ಅಸುರಕ್ಷಿತ ಸ್ಥಳಗಳು ಯಾವುವು. ಸಂಕಟಕಾಲದಲ್ಲಿ ರಕ್ಷಣೆಯಾಗಲು ಸಾಧಕರು ಯಾವ ಉಪಾಯಗಳನ್ನು ಮಾಡಬೇಕು, ಇತ್ಯಾದಿ.

೧೫. ಇತರ ಸಾಧಕರಿಗೆ ಪ್ರಾಪ್ತವಾಗುತ್ತಿರುವ ಜ್ಞಾನದ ಪರಿಶೀಲನೆ ಮಾಡುವ ಸೇವೆಯನ್ನು ನೀಡುವುದು

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ನನಗೆ ನಡುನಡುವೆ ಇತರ ಜ್ಞಾನಪ್ರಾಪ್ತಿ ಮಾಡಿಕೊಳ್ಳುವ ಸಾಧಕರಿಗೆ ದೊರಕುತ್ತಿರುವ ಜ್ಞಾನವನ್ನು ಪರಿಶೀಲಿಸಲು ನೀಡುತ್ತಿದ್ದರು. ಈ ಸೇವೆ ಕಠಿಣವಿತ್ತು. ಏಕೆಂದರೆ ಸ್ವತಃ ಸೂಕ್ಷ್ಮದಿಂದ ಜ್ಞಾನವನ್ನು ಪಡೆಯುವುದು ಮತ್ತು ಅದನ್ನು ಶಬ್ದಗಳಲ್ಲಿ ವ್ಯಕ್ತ ಮಾಡುವುದು ಸುಲಭವಿರುತ್ತದೆ; ಆದರೆ ಇತರ ಸಾಧಕರ ಜ್ಞಾನವನ್ನು ಪರಿಶೀಲಿಸುವಾಗ ಅವುಗಳಲ್ಲಿನ ಪ್ರತಿಯೊಂದು ಶಬ್ದದ ಅರ್ಥವನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತಿತ್ತು. ಈ ಸೇವೆಯನ್ನು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಆಶೀರ್ವಾದದಿಂದಲೇ ಮಾಡಲು ಸಾಧ್ಯವಾಯಿತು.

೧೫ ಅ. ಜ್ಞಾನಪ್ರಾಪ್ತಿ ಮಾಡಿಕೊಳ್ಳುವ ಇತರ ಸಾಧಕರಿಗೆ ಸೂಕ್ಷ್ಮದಿಂದ ದೊರಕುವ ಜ್ಞಾನದಲ್ಲಿನ ತಪ್ಪುಗಳನ್ನು(ಕೊರತೆಯನ್ನು) ಭಾವನೆಯಲ್ಲಿ ಸಿಲುಕದೇ ತಿಳಿಸಲು ಹೇಳುವುದು : ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು All Posts ಜ್ಞಾನಪ್ರಾಪ್ತಿ ಮಾಡಿಕೊಳ್ಳುವ ಇತರ ಸಾಧಕರಿಗೆ ಸೂಕ್ಷ್ಮದಿಂದ ಸಿಗುವ ಜ್ಞಾನವನ್ನು ಪರಿಶೀಲಿಸಲು ತಮ್ಮ ಗಣಕೀಯ ಕಡತವನ್ನು ನನಗೆ ನೀಡುತ್ತಿದ್ದರು. ಈ ಸೇವೆಯನ್ನು ಮಾಡುವಾಗ ನನಗೆ ಇತರ ಸಾಧಕರಿಗೆ ದೊರಕುತ್ತಿರುವ ಸೂಕ್ಷ್ಮಜ್ಞಾನದಲ್ಲಿ ಅಧ್ಯಾತ್ಮಶಾಸ್ತ್ರಕ್ಕೆ ಹೊಂದಿಕೆಯಾಗದ ತಪ್ಪುಗಳು ಗಮನಕ್ಕೆ ಬರುತ್ತಿದ್ದವು. ಈ ತಪ್ಪುಗಳು ಕೆಲವೊಮ್ಮೆ ಆ ಸಾಧಕರಿಗೆ ಸ್ವೀಕಾರವಾಗುತ್ತಿರಲಿಲ್ಲ ಅಥವಾ ಅವರಿಗೆ ತಮ್ಮ ಜ್ಞಾನದ ಕಡತವನ್ನು ನಾನು ಪರಿಶೀಲಿಸುವುದು ಇಷ್ಟವಾಗುತ್ತಿರಲಿಲ್ಲ. ಇದನ್ನು ಆ ಸಾಧಕರು ನನ್ನ ಬಳಿ ವ್ಯಕ್ತ ಮಾಡದಿದ್ದರೂ ಆ ಸಾಧಕರ ವರ್ತನೆಯಿಂದ ಅದು ನನ್ನ ಗಮನಕ್ಕೆ ಬರುತ್ತಿತ್ತು. ಒಂದು ಸಲ ನಾನು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಈ ಸ್ಥಿತಿಯನ್ನು ಹೇಳಿ ಆ ಸಾಧಕರ ಜ್ಞಾನದಲ್ಲಿನ ತಪ್ಪುಗಳನ್ನು ಹೇಳಬೇಕೋ ಬೇಡವೋ ಎಂದು ಕೇಳಿದೆನು. ಆಗ ಅವರು ‘ತಪ್ಪು ಹೇಳಬೇಕು’ ಎಂದರು.

೧೬. ದೈನಿಕ ‘ಸನಾತನ ಪ್ರಭಾತ’ದಲ್ಲಿ ‘ಸೂಕ್ಷ್ಮದಲ್ಲಿನ ಜ್ಞಾನ’ ಅಥವಾ ‘ಸೂಕ್ಷ್ಮ ಪರೀಕ್ಷಣೆ’ ವಿಷಯಕ್ಕೆ ಮಹತ್ವ ನೀಡುವುದು

ದೈನಿಕ ‘ಸನಾತನ ಪ್ರಭಾತ’ದಲ್ಲಿ ವಿವಿಧ ಕ್ರೀಡೆಗಳು ಅಥವಾ ಮನೋರಂಜನೆಯ ವಾರ್ತೆಗಳಿರುವುದಿಲ್ಲ. ಹಾಗೆ ನೋಡಿದರೆ ‘ಸೂಕ್ಷ್ಮದಲ್ಲಿನ ಜ್ಞಾನ’ ಅಥವಾ ‘ಸೂಕ್ಷ್ಮ ಪರೀಕ್ಷಣೆ’ ಈ ವಿಷಯ ಸಾಮಾನ್ಯ ವಾಚಕನಿಗೆ ಹೊಸತು ಮತ್ತು ಕಠಿಣವಾಗಿದೆ. ದೈನಿಕ ‘ಸನಾತನ ಪ್ರಭಾತ’ದಲ್ಲಿ ಸೂಕ್ಷ್ಮದ ವಿವಿಧ ವಿಷಯಗಳನ್ನು ಪ್ರಕಟಿಸುವುದರಿಂದ ದೈನಿಕ ಪತ್ರಿಕೆಯ ವಾಚಕರ ವರ್ಗ ಕಡಿಮೆಯಾಗುವ ಸಾಧ್ಯತೆ ಇತ್ತು. ಆದರೆ ಅದರ ವಿಚಾರ ಮಾಡದೇ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸೂಕ್ಷ್ಮಕ್ಕೆ ಸಂಬಂಧಿಸಿದ ವಿಷಯವನ್ನು ದೈನಿಕ ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಲು ಪ್ರಾಧಾನ್ಯತೆ ನೀಡಿದರು. ‘ಜಿಜ್ಞಾಸು-ವಾಚಕರು, ಸೂಕ್ಷ್ಮ ಜಗತ್ತು, ಧಾರ್ಮಿಕ ವಿಧಿಗಳ ಮಹತ್ವ, ಕೆಟ್ಟ ಶಕ್ತಿಗಳ ತೊಂದರೆ’ ಇತ್ಯಾದಿ ವಿಷಯಗಳ ಮೇಲೆ ವಿಶ್ವಾಸ ಮೂಡಿ ಅವರ ಸಾಧನೆಯ ಕಡೆಗೆ ಮಾರ್ಗಕ್ರಮಣವಾಗಬೇಕೆಂದು ಮತ್ತು ಸಾಧನೆ ಮಾಡಿ ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳಬೇಕೆಂಬ ಶುದ್ದ ಉದ್ದೇಶದಿಂದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಈ ಮಾಹಿತಿಯನ್ನು ದೈನಿಕದಲ್ಲಿ ಪ್ರಕಟಿಸಲು ಪ್ರಾಧಾನ್ಯತೆ ನೀಡಿದರು.

– ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ